• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, March 4, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ಬಾಡಿಗೆ ಮನೆ ವಾಸಿಗಳಿಗೆ ಕರೆಂಟ್​​ ಫ್ರೀ.. ಅರ್ಜಿ ಹಾಕೋದು ಸ್ವಲ್ಪ ಚೇಂಜ್..

ಕೃಷ್ಣ ಮಣಿ by ಕೃಷ್ಣ ಮಣಿ
June 7, 2023
in ಅಂಕಣ
0
ಬಾಡಿಗೆ ಮನೆ ವಾಸಿಗಳಿಗೆ ಕರೆಂಟ್​​ ಫ್ರೀ.. ಅರ್ಜಿ ಹಾಕೋದು ಸ್ವಲ್ಪ ಚೇಂಜ್..
Share on WhatsAppShare on FacebookShare on Telegram

ಕಾಂಗ್ರೆಸ್​ ಸರ್ಕಾರದ 5 ಗ್ಯಾರಂಟಿಗಳನ್ನು ಜಾರಿ ಮಾಡುವಾಗ ಶುಯರುವಾಗಿದ್ದ ಬಹು ದೊಡ್ಡ ಗೊಂದಲಕ್ಕೆ ಸಿಎಂ ಸಿದ್ದರಾಮಯ್ಯ ಹಾಗು ಇಂಧನ ಸಚಿವ ಕೆ.ಜೆ ಜಾರ್ಜ್​ ತೆರೆ ಎಳೆದಿದ್ದಾರೆ. ಜೂನ್​ 15 ರಿಂದ ಅರ್ಜಿ ಹಾಕಲು ಆದೇಶ ಹೊರಡಿಸಿರುವ ಇಂಧನ ಇಲಾಖೆ ಅರ್ಜಿಗಳನ್ನು ಪಡೆಯುವಾಗ ಏನೇನು ದಾಖಲೆಗಳನ್ನು ಪಡೆದುಕೊಳ್ಳಬೇಕು..? ಅರ್ಜಿಯನ್ನು ಎಲ್ಲೆಲ್ಲಿ ಸ್ವೀಕಾರ ಮಾಡಬೇಕು..? ಅನ್ನೋ ಬಗ್ಗೆ ಇಂಧನ ಸಚಿವರ ಜೊತೆಗೆ ಅಧಿಕಾರಿಗಳು ಮಹತ್ವದ ಸಭೆ ನಡೆಸಿದ್ದಾರೆ. ಆ ಬಳಿಕ ಮಾಹಿತಿ ನೀಡಿರುವ ಇಂಧನ ಸಚಿವ ಕೆ.ಜೆ ಜಾರ್ಜ್​, ಬಾಡಿಗೆದಾರರು ಉಚಿತ ವಿದ್ಯುತ್ ಪಡೆಯಲು ಅರ್ಜಿ ಹಾಕುವ ಬಗ್ಗೆ ವಿಶೇಷ ಗೈಡ್ ಲೈನ್ಸ್ ಹೊರಡಿಸಲಾಗುವುದು. ಇನ್ನೆರಡು ದಿನಗಳಲ್ಲಿ ಬಾಡಿಗೆದಾರರಿಗೆ ಸಂಬಂಧಿಸಿದಂತೆ ಗೈಡ್ ಲೈನ್ಸ್ ಬಿಡುಗಡೆ ಮಾಡ್ತೇವೆ ಎಂದಿದ್ದಾರೆ.

ADVERTISEMENT

200 ಯೂನಿಟ್​ ವಿದ್ಯುತ್​​ಗೆ ಏನೇನು ದಾಖಲೆ ಬೇಕು..?

ಗೃಹಜ್ಯೋತಿ ಯೋಜನೆ ಈಗಾಗಲೇ ಅಧಿಕೃತವಾಗಿ ಜಾರಿಯಾಗಿದೆ. ಡೊಮೆಸ್ಟಿಕ್ ಬಳಕೆದಾರರ ವಾರ್ಷಿಕ ಸರಾಸರಿ ಆಧಾರದ ಮೇರೆಗೆ ಯೋಜನೆ ರೂಪಿಸಲಾಗಿದೆ. ಸ್ವಂತ ಮನೆ ಇರಲಿ, ಬಾಡಿಗೆ ಮನೆ ಇರಲಿ ದಾಖಲೆ ಕೊಟ್ಟರೆ ಉಚಿತ ವಿದ್ಯುತ್​ ಯೋಜನೆ ಲಾಭ ಪಡೆಯಬಹುದು. ಆಧಾರ್ ಕಾರ್ಡ್, ವೋಟರ್ ಐಡಿ, ರೆಂಟಲ್ ಅಗ್ರಿಮೆಂಟ್ ಇದ್ದರೆ ಗೃಹಜ್ಯೋತಿ ಯೋಜನೆಗೆ ಅರ್ಹತೆ ಸಿಗುತ್ತದೆ ಎಂದಿದ್ದಾರೆ. ಸೇವಾ ಸಿಂಧು ಪೋರ್ಟಲ್, ಬೆಂಗಳೂರು ಒನ್, ಗ್ರಾಮ ಒನ್, ಕರ್ನಾಟಕ ಒನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. ಜೂನ್ 15 ರಿಂದ ಸೇವಾ ಸಿಂಧು ಪೋರ್ಟಲ್​ನಲ್ಲಿ ಅರ್ಜಿ ಸಲ್ಲಿಕೆ ಅವಕಾಶ ಸಿಗಲಿದೆ ಎನ್ನುವ ಮಾಹಿತಿ ನೀಡಿದ್ದಾರೆ ಸಚಿವರು.

ಕೇವಲ 2 ಲಕ್ಷ ಜನರಿಗೆ 200 ಯೂನಿಟ್​​ ಸಿಗಲ್ಲ..!

ಇಂಧನ ಇಲಾಖೆ ಡೇಟಾ ಪ್ರಕಾರ ರಾಜ್ಯದಲ್ಲಿ ಒಟ್ಟು 2.16 ಕೋಟಿ ಜನರು ವಿದ್ಯುತ್​​ ಕನೆಕ್ಷನ್ ಪಡೆದುಕೊಂಡಿದ್ದಾರೆ. ಅದರಲ್ಲಿ 2.14 ಕೋಟಿ ಜನರು 200 ಯೂನಿಟ್ ಒಳಗಿನ ವಿದ್ಯುತ್​ ಬಳಕೆದಾರರು ಆಗಿದ್ದಾರೆ. ರಾಜ್ಯದಲ್ಲಿ 14,852 ಯೂನಿಟ್ ಬಳಕೆ ಬಳಕೆಯಾಗ್ತಿದ್ರೆ, ತಿಂಗಳ ಸರಾಸರಿ ವಿದ್ಯುತ್ ಬಳಕೆ 53 ಯೂನಿಟ್ ಮಾತ್ರ ಎನ್ನುವ ಅಂಶವನ್ನು ಹೊರಗಿಟ್ಟಿದ್ದಾರೆ. ಸರಾಸರಿ ಯೂನಿಟ್​​ಗೆ ಹೆಚ್ಚುವರಿಯಾಗಿ ಶೇಕಡ 10ರಷ್ಟು ಹೆಚ್ಚುವರಿಯಾಗಿ ಬಳಕೆ ಮಾಡಬಹುದು. 200 ಯೂನಿಟ್ ಒಳಗೆ ಸರಾಸರಿಗಿಂತಲೂ ಹೆಚ್ಚಿನ ವಿದ್ಯುತ್ ಬಳಕೆಯಾದರೆ ಹೆಚ್ಚುವರಿಯಾಗಿ ಬಳಕೆ ಮಾಡಿದ ಬಿಲ್ ಕಟ್ಟಬೇಕು. ಆದರೆ 200 ಯೂನಿಟ್ ಒಳಗೆ ಹೆಚ್ಚುವರಿ ವಿದ್ಯುತ್ ಬಳಸಿದಾಗ ನಿಗದಿತ ಶುಲ್ಕ ಕಟ್ಟಬೇಕಿಲ್ಲ. ಹೆಚ್ಚುವರಿ ಬಳಕೆಯಾಗುವ ಯೂನಿಟ್ ದರ ಹಾಗೂ ಶೇಕಡ 9ರಷ್ಟು ತೆರಿಗೆಯನ್ನು ಪಾವತಿ ಮಾಡಬೇಕು. ಒಂದು ವೇಳೆ 200 ಯೂನಿಟ್ ಮೇಲ್ಪಟ್ಟು ವಿದ್ಯುತ್ ಬಳಕೆಯಾದರೆ ಸಂಪೂರ್ಣ ಬಿಲ್‌ ಕಟ್ಟಬೇಕು ಎಂದು ಸಚಿವರು ಸ್ಪಷ್ಟನೆ ನೀಡಿದ್ದಾರೆ.

ಸೇವಾ ಸಿಂಧು ಪೋರ್ಟಲ್​ನಲ್ಲಿ ಅರ್ಜಿ ಸಲ್ಲಿಕೆ ಹೇಗೆ..?

200 ಯೂನಿಟ್ ಉಚಿತ ವಿದ್ಯುತ್ ಘೋಷಣೆ ಮಾಡಲಾಗಿದೆ. ಆದರೆ ಸೇವಾ ಸಿಂಧು ಪೋರ್ಟಲ್​ನಲ್ಲಿ ಅರ್ಜಿ ಸಲ್ಲಿಕೆ ಮಾಡೋದು ಹೇಗೆ ಅನ್ನೋದು ಹೆಚ್ಚಿನ ಜನರಲ್ಲಿ ಇರುವ ಪ್ರಶ್ನೆ. ಮೊಬೈಲ್​ ಅಥವಾ ಕಂಪ್ಯೂಟರ್​ನಲ್ಲಿ​ ಸೇವಾ ಸಿಂಧು ಪೋರ್ಟಲ್ ಓಪನ್​ ಮಾಡಬೇಕು. ಅಲ್ಲಿ ಗೃಹಜ್ಯೋತಿ ಫೋಲ್ಡರ್ ಕ್ಲಿಕ್ ಮಾಡಬೇಕು. ಮೊದಲಿಗೆ ಅಧಾರ್ ನಂಬರ್ ನಮೂದು ಮಾಡಬೇಕು. ಈ ವೇಳೆ ಕ್ಯಾಟಗರಿ ಆಟೋಮಿಟಿಕ್ ಆಗಿ ಬಳಕೆದಾರರಿಗೆ ಜನರೇಟ್ ಆಗುತ್ತದೆ. ಈ ವೇಳೆ ಅಗತ್ಯ ದಾಖಲೆ ಅಪ್ಲೋಡ್ ಮಾಡಬೇಕು. ಆಧಾರ್ ಲಿಂಕ್‌ ಆಗಿರುವ ನಂಬರ್​ಗೆ ಮೆಸೇಜ್ ಬರಲಿದೆ. ಇಷ್ಟು ಮಾಡಿ ಪೋರ್ಟಲ್ ಅಪ್ರೂವಲ್​ ಸಕ್ಸಸ್ ಫುಲ್ ಆದರೆ ಉಚಿತ ವಿದ್ಯುರ್​ ಪಡೆಯಲು ಅರ್ಹರು ಎಂದರ್ಥ.

ಬಾಡಿಗೆ ಮನೆ ವಾಸಿಗಳಿಗೆ ಅರ್ಜಿ ಗೊಂದಲ..!

ಬಾಡಿಗೆದಾರರೂ ಕೂಡ ಉಚಿತ ವಿದ್ಯುತ್ ಪಡೆಯಲು ರಿಜಿಸ್ಟರ್ ಮಾಡಬಹುದು. ರೆಂಟಲ್ ಅಗ್ರಿಮೆಂಟ್, ವೋಟರ್ ಐಡಿ ಅಥವಾ ಮನೆಯಲ್ಲಿ ಇದ್ದಾರೆ ಎನ್ನುವ ಮಾಹಿತಿ ನೀಡಬಲ್ಲ ದಾಖಲೆ ಇರಬೇಕು. ಬೋಗಸ್ ರೆಂಟಲ್ ಅಗ್ರಿಮೆಂಟ್ ಮಾಡಿ ಅರ್ಜಿ ಹಾಕಿ ಸಾಬೀತಾದರೆ ಉಚಿತ ವಿದ್ಯುತ್ ರದ್ದಾಗಲಿದೆ. ಬೇರೆ ರಾಜ್ಯದಿಂದ ಬಂದು ಇಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದರೂ ಕೂಡ ಉಚಿತ ವಿದ್ಯುತ್ ಪಡೆಯಲು ಅರ್ಹರು. ಆಧಾರ್ ಕಾರ್ಡ್, ವೋಟರ್ ಐಡಿ ಮೂಲ‌ ವಿಳಾಸ, ಅಂತರ್ ರಾಜ್ಯ ವಿಳಾಸ ಇದ್ದರೂ ಅಧಾರ್ ಕಾರ್ಡ್ ಹಾಗೂ ರೆಂಟಲ್ ಅಗ್ರಿಮೆಂಟ್ ಇದ್ದರೆ ಅರ್ಜಿ ಸಲ್ಲಿಕೆ ಮಾಡಬಹುದು. ಜೊತೆಗೆ ಇನ್ನೆರಡು ದಿನದಲ್ಲಿ ಹೊಸದಾಗಿ ನೋಟಿಫಿಕೇಷನ್​ ಬಿಡುಗಡೆ ಮಾಡಲಿದ್ದು, ಹೊಸ ಗೈಡ್​​ಲೈನ್ಸ್​ ಮೇಲೆ ಅರ್ಜಿ ಹಾಕಬೇಕಿದೆ.

ಕೃಷ್ಣಮಣಿ

Tags: 200 Unit Free Electricity200 ಯುನಿಟ್​ ಫ್ರೀ ವಿದ್ಯುತ್​Aadhaar CardGriha Jyoti Yojanaguarantee cardRented HouseRR Numberಆಧಾರ್​ ಕಾರ್ಡ್ಆರ್​ಆರ್​ ಸಂಖ್ಯೆಗೃಹ ಜ್ಯೋತಿ ಯೋಜನೆಗ್ಯಾರಂಟಿ ಕಾರ್ಡ್ಬಾಡಿಗೆ ಮನೆ
Previous Post

ಟ್ರಾನ್ಸ್‌ಫಾರ್ಮ ರ್ಸ್ ; ರೈಸ್ ಆಫ್ ದಿ ಬೀಸ್ಟ್ ನಾಯಕ ಮೊದಲ ಅನುಭವಗಳನ್ನು ನೆನಪಿಸಿಕೊಳ್ಳುತ್ತಾರೆ

Next Post

ಕೆ.ಆರ್.ಸರ್ಕಲ್ ಅಂಡರ್‌ ಪಾಸ್ ದುರಂತದಿಂದ ಪಾಠ ಕಲಿಯಬೇಕಿದೆ ; ಲೋಕಾಯುಕ್ತ ಐಜಿಪಿ

Related Posts

ಭಾರತ-ಇರಾನ್ ಯುಕೋ ಬ್ಯಾಂಕ್ : ರೂಪಾಯಿ ಪಾವತಿ ವ್ಯವಸ್ಥೆ ಹಿಂದಿನ ರೂವಾರಿ ಮನಮೋಹನ್ ಸಿಂಗ್..!
Top Story

ಭಾರತ-ಇರಾನ್ ಯುಕೋ ಬ್ಯಾಂಕ್ : ರೂಪಾಯಿ ಪಾವತಿ ವ್ಯವಸ್ಥೆ ಹಿಂದಿನ ರೂವಾರಿ ಮನಮೋಹನ್ ಸಿಂಗ್..!

by ಪ್ರತಿಧ್ವನಿ
March 2, 2026
0

ಚಂದ್ರಶೇಖರ್‌ ಶೆಟ್ಟಿ, ಪತ್ರಕರ್ತರು.... ಬೆಂಗಳೂರು : 2010 ರಿಂದ 2014ರ ಅವಧಿಯಲ್ಲಿ ಭಾರತ ಮತ್ತು ಇರಾನ್ ನಡುವಿನ ತೈಲ ವ್ಯಾಪಾರವು ಜಾಗತಿಕ ರಾಜಕೀಯ ಒತ್ತಡಗಳ ನಡುವೆ ನಡೆದ...

Read moreDetails
ಸಾಮಾಜಿಕ ಒಳಬೇನೆಯೂ ನೈತಿಕ ಅಧಃಪತನವೂ..

ಸಾಮಾಜಿಕ ಒಳಬೇನೆಯೂ ನೈತಿಕ ಅಧಃಪತನವೂ..

March 1, 2026
ಅಭಿವೃದ್ಧಿ ಮಾದರಿಯೂ ಪರಿಸರ ವಿನಾಶವೂ

ಅಭಿವೃದ್ಧಿ ಮಾದರಿಯೂ ಪರಿಸರ ವಿನಾಶವೂ

February 20, 2026
KJ George: ಕೆ.ಜಿ.ಹಳ್ಳಿ ಮೂಲಸೌಕರ್ಯ ಸಮಸ್ಯೆಗಳ ಪರಿಹಾರಕ್ಕೆ ಸಚಿವ ಕೆ.ಜೆ.ಜಾರ್ಜ್ ಸೂಚನೆ

KJ George: ಕೆ.ಜಿ.ಹಳ್ಳಿ ಮೂಲಸೌಕರ್ಯ ಸಮಸ್ಯೆಗಳ ಪರಿಹಾರಕ್ಕೆ ಸಚಿವ ಕೆ.ಜೆ.ಜಾರ್ಜ್ ಸೂಚನೆ

February 19, 2026
ಕಸ ವಿಲೇವಾರಿಗೆ ಅಡ್ಡಿಡಿಸುವವರ ಮನೆ ಮುಂದೆ ಕಸ ಸುರಿಯುತ್ತೇವೆ:  ಡಿ.ಕೆ. ಶಿವಕುಮಾರ್‌ ಎಚ್ಚರಿಕೆ

ಕಸ ವಿಲೇವಾರಿಗೆ ಅಡ್ಡಿಡಿಸುವವರ ಮನೆ ಮುಂದೆ ಕಸ ಸುರಿಯುತ್ತೇವೆ: ಡಿ.ಕೆ. ಶಿವಕುಮಾರ್‌ ಎಚ್ಚರಿಕೆ

February 18, 2026
Next Post
ಕೆ.ಆರ್.ಸರ್ಕಲ್ ಅಂಡರ್‌ ಪಾಸ್ ದುರಂತದಿಂದ ಪಾಠ ಕಲಿಯಬೇಕಿದೆ ; ಲೋಕಾಯುಕ್ತ ಐಜಿಪಿ

ಕೆ.ಆರ್.ಸರ್ಕಲ್ ಅಂಡರ್‌ ಪಾಸ್ ದುರಂತದಿಂದ ಪಾಠ ಕಲಿಯಬೇಕಿದೆ ; ಲೋಕಾಯುಕ್ತ ಐಜಿಪಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada