ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡುತ್ತೇವೆ ಎಂದು ಸಾರಿಗೆ ಸಚಿವ ಬಿ ಶ್ರೀರಾಮುಲು ಹೇಳಿದ್ಧಾರೆ.
ಈ ಕುರಿತು ಗದಗದ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಶ್ರೀರಾಮುಲು, ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ಕರ್ನಾಟಕದ ಎಲ್ಲ ಮಹಿಳೆಯರಿಗೆ ಉಚಿತ ಬಸ್ ಪಾಸ್ ಕೊಡುವ ವ್ಯವಸ್ಥೆ ಬಿಜೆಪಿ ಮಾಡುತ್ತದೆ ಎಂದರು.
KSRTC ಆಸ್ತಿ ಅಡಮಾನದ ಕುರಿತು ಮಾತನಾಡಿದ ಅವರು, ಎಸ್ಆರ್ಟಿಸಿ ಯಾವುದೇ ಆಸ್ತಿ ಅಡಮಾನ ಇಟ್ಟಿಲ್ಲ ಅದರೆ ಬೆಂಗಳೂರು ಶಾಂತಿ ನಗರ ಕಾಂಪ್ಲೆಕ್ಸ್, ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಹುಬ್ಬಳ್ಳಿ ಕಡೆ 16 ಎಕರೆ, ಕಲ್ಯಾಣ ಕರ್ನಾಟಕದಲ್ಲೂ ಕೆಲವು ಜಮೀನು ಅಡಮಾನ ಇಡಲಾಗಿದೆ ಎಂದು ಸ್ಪಷ್ಟನೆ ನೀಡಿದರು.
ಸಿಬ್ಬಂದಿಗಳ ಇನ್ನೂ ಒಂದೂವರೆ ತಿಂಗಳ ಸಂಬಳ ಮಾತ್ರ ಬಾಕಿ ಇದೆ. ಇನ್ನೊಂದು ವಾರದೊಳಗೆ ಆ ಬಾಕಿ ಸಂಬಳವನ್ನು ಪಾವತಿ ಮಾಡಿ ಮುಂದಿನ ತಿಂಗಳಿಂದ ಸಿಬ್ಬಂದಿಗೆ ನಿರಂತರವಾಗಿ ಸಂಬಳ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ರಾಜ್ಯದ ಎಲ್ಲ ಮಹಿಳೆಯರಿಗೆ ಉಚಿತ ಬಸ್ ಪಾಸ್ ಕೊಡುವ ವ್ಯವಸ್ಥೆ ಮಾಡುವ ಯೋಜನೆ ನೋಡಿದರೆ. ಇದನ್ನ ನೋಡಿದರೆ, ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ಪೂರ್ವ ತಯಾರಿ ನಡೆಸುತ್ತಿದೆ ಎಂದು ಕಾಣುತ್ತಿದೆ. ಉತ್ತರ ಪ್ರದೇಶದಂತೆ ಕರ್ನಾಟಕದಲ್ಲಿಯೂ ಮಹಿಳೆಯರನ್ನು ಸೆಳೆಯಲು ಇದು ಸಚಿವ ರಾಮುಲು ಬಾಣವಾಗಲಿದೆ.