ಉತ್ತರ ಪ್ರದೇಶದ ಪ್ರಯಾಗ್ ರಾಜ್ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ನಡೆದಿರುವ ಕಾಲ್ತುಳಿತ ಪ್ರಕರಣ ಕರ್ನಾಟಕದ ನಾಲ್ವರು ಸಾವನ್ನಪ್ಪಿದ್ದಾರೆ ಅನ್ನೋ ಮಾಹಿತಿ ಹೊರಬಿದ್ದಿದೆ. ಕಾಲ್ತುಳಿತ ದುರಂತದಲ್ಲಿ ಬೆಳಗಾವಿಯ ನಾಲ್ವರು ದುರ್ಮರಣ ಹೊಂದಿದ್ದು, ವಡಗಾವಿ ನಿವಾಸಿ ಜ್ಯೋತಿ ಹತ್ತರವಾಠ್, ಮೇಘಾ ಎಂಬುವರು ಸಾವನ್ನಪ್ಪಿದ್ದಾರೆ.
ಬೆಳಗಾವಿ ನಗರದ ಶೆಟ್ಟಿಗಲ್ಲಿಯ ಅರುಣ ಕೋಪರ್ಡೆ, ಶಿವಾಜಿನಗರದ ನಿವಾಸಿ ಮಹಾದೇವಿಯೂ ಸಾವನ್ನಪ್ಪಿದ್ದಾರೆ. ಅರುಣ ಕೋಪರ್ಡೆ ಪತ್ನಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗ್ತಿದೆ. ಕುಂಭಮೇಳದಲ್ಲಿ ಬೆಳಗಾವಿಯ ಅರುಣ ಕೋಪರ್ಡೆ ಪತ್ನಿ ಜೊತೆಗೆ ಪ್ರಯಾಗ್ ರಾಜ್ಗೆ ತೆರಳಿದ್ದರು. ಗಂಭೀರ ಗಾಯಗೊಂಡಿದ್ದ ಅರುಣ್ ಕೋಪರ್ಡೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಪ್ರಯಾಗ್ ರಾಜ್ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಅರುಣ್ ಕೋಪರ್ಡೆ ಅವರಿಗೆ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆರ. ಅರುಣ್ ಕೋಪರ್ಡೆ ಮನೆಗೆ ತಹಶಿಲ್ದಾರ್ ಕಚೇರಿ ಸಿಬ್ಬಂದಿ ಭೇಟಿ ಸಾಂತ್ವನ ಹೇಳಿದ್ದಾರೆ. ಅರುಣ್ ನಿವಾಸದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಸಿಎಂ ಪರಿಹಾರ ನಿಧಿಯಿಂದ 2 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ.
3 ದಿನಗಳ ಹಿಂದೆ ಮೂವತ್ತು ಜನ ಕುಂಭಮೇಳಕ್ಕೆ ಹೋಗಿದ್ದರು. ಕಾಲ್ತುಳಿತದಲ್ಲಿ ನನ್ನ ಪತ್ನಿ ಸಾವನ್ನಪ್ಪಿದ್ದಾಳೆ, ಆದ್ರೆ ಶವ ಸಿಕ್ಕಿಲ್ಲ ಎಂದು ಕಾಲ್ತುಳಿತದಲ್ಲಿ ಸಾವನ್ನಪ್ಪಿದ ಮಹದೇವಿ ಪತಿ ಹೇಳಿದ್ದಾರೆ. ಬೆಳಗಾವಿ ಶಿವಾಜಿ ನಗರದ ನಿವಾಸಿಯಾಗಿರೋ ಮಹಾದೇವಿ ಹಾಗು ಅರುಣ್ ಕುಟುಂಬಸ್ಥರಿಗೆ ಶಾಸಕ ರಾಜು ಸೇಠ್ ಸಾಂತ್ವನ ಹೇಳಿದ್ದಾರೆ. ವಿಷಯ ತಿಳಿದು ಮನೆಗೆ ಆಗಮಿಸುತ್ತಿರೋ ಸಂಬಂಧಿಕರು, ಮೃತರ ತಾಯಿ, ಮಗಳ ನಿವಾಸಕ್ಕೆ ಶಾಸಕ ಅಭಯ ಪಾಟೀಲ್ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.