ನವದೆಹಲಿ: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಜೈಲಿನಲ್ಲಿ ಹತ್ಯೆ ಮಾಡಲಾಗಿದೆ ಎನ್ನುವ ಸುದ್ದಿಗಳು ಹರಿದಾಡುತ್ತಿದೆ. ಸದ್ಯ ಪಾಕಿಸ್ತಾನದ ಬಂಧನದಲ್ಲಿರುವ ಇಮ್ರಾನ್ ಖಾನ್ ಅವರನ್ನು ಅಸಿಮ್ ಮುನೀರ್ ಮತ್ತು ಅವರ ಐಎಸ್ಐ ಆಡಳಿತವು ಜೈಲಿನಲ್ಲಿ ಹಿಂಸೆ ನೀಡಿ ಕೊಲೆ ಮಾಡಿದೆ ಎಂದು ಕೆಲ ಸುದ್ದಿ ವಾಹಿನಿಗಳು ವರದಿ ಮಾಡುತ್ತಿವೆ.

2023ರಿಂದ ಜೈಲಿನಲ್ಲಿರುವ ಇಮ್ರಾನ್ ಖಾನ್ ಅವರನ್ನು ಕೆಲವು ತಿಂಗಳಿನಿಂದ ಕುಟುಂಬದವರು ಭೇಟಿಯಾಗಲು ಅಘೋಷಿತ ನಿಷೇಧ ಹೇರಿದೆ ಎನ್ನಲಾಗಿದ್ದು, ಇದು ಇನ್ನಷ್ಟು ಅನುಮಾನವನ್ನು ಹೆಚ್ಚಿಸಿದೆ.
ಬಲೂಚಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧೀಕೃತ ಎಕ್ಸ್ ಖಾತೆಯಲ್ಲಿ ಫೋಟೋವೊಂದನ್ನು ಹಂಚಿಕೊಳ್ಳಲಾಗಿದ್ದು, ಅದು ಇಮ್ರಾನ್ ಖಾನ್ ಅವರ ಮೃತದೇಹದ ಫೋಟೋ ಎನ್ನಲಾಗುತ್ತಿದೆ.

ಇನ್ನು ಪಾಕಿಸ್ತಾನದ ಪಂಜಾಬ್ ಜೈಲುಗಳ ಒಳಗಿನಿಂದ ಈಗ ವರದಿಗಳು ಬರುತ್ತಿವೆ, ಬಂಧನದಲ್ಲಿದ್ದ ಇಮ್ರಾನ್ ಖಾನ್ ಅವರನ್ನು ಅಸಿಮ್ ಮುನೀರ್ ಮತ್ತು ಅವರ ಐಎಸ್ಐ ಆಡಳಿತವು ಕೊಂದಿದೆ ಎಂದು ಹಲವಾರು ಸುದ್ದಿವಾಹಿನಿಗಳು ತಿಳಿಸಿವೆ. ಈ ಮಾಹಿತಿ ನಿಜವೆಂದು ದೃಢಪಟ್ಟರೆ, ಅದು ಭಯೋತ್ಪಾದಕ ಪಾಕಿಸ್ತಾನದ ಸಂಪೂರ್ಣ ಅಂತ್ಯವನ್ನು ಸೂಚಿಸುತ್ತದೆ. ಸತ್ಯವು ಜಗತ್ತಿಗೆ ಬಹಿರಂಗವಾದ ಕ್ಷಣದಿಂದ ಅದರ ಕಾನೂನುಬದ್ಧತೆಯ ಕುಸಿತ ಪ್ರಾರಂಭವಾಗುತ್ತದೆ ಎಂದು ಲೂಚಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.












