ಕಳೆದ ಕೆಲ ದಿನಗಳಿಂದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ( K. S. Eshwarappa ) ಕೆಲವೊಂದು ಹೇಳಿಕೆಗಳಿಂದ ಸದ್ದು ಮಾಡುತ್ತಿದ್ದಾರೆ. ಅದರಲ್ಲೂ ಇತ್ತೀಚೆಗೆ ಪಕ್ಷದಲ್ಲಿನ ಬೆಳವಣಿಗೆ ( party development ) ಹಾಗೂ ಈ ಬಾರಿಯ ವಿಧಾನಸಭೆಯ ಚುನಾವಣೆಯಲ್ಲಿ ಬಿಜೆಪಿಯ ( BJP ) ಸೋಲಿನ ಬಗ್ಗೆ ಮಾತನಾಡಿ ವಿವಾದಕ್ಕೆ ಸಿಲುಕಿಕೊಂಡಿದ್ದಾರೆ. ಅದರಲ್ಲೂ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ವಲಸಿಗರ ಬಗ್ಗೆ ವಿವಾದ ಸೃಷ್ಠಿಸಿದ್ದಾರೆ ಎಂಬ ಸುದ್ದಿ ಬಿಜೆಪಿಗರ ಆಕ್ರೋಶಕ್ಕೆ ಕೂಡ ಕಾರಣವಾಗಿದೆ.
ಈ ಬಗ್ಗೆ ಸ್ಪಷ್ಟನೆ ( clarification ) ನೀಡಿರುವ ಮಾಜಿ ಸಚಿವರಾದ ಕೆ.ಎಸ್.ಈಶ್ವರಪ್ಪ ಕಾಂಗ್ರೆಸ್‌ನಿಂದ ( congress ) ವಲಸೆ ಬಂದವರಿಂದ ಬಿಜೆಪಿಯಲ್ಲಿ ಶಿಸ್ತು ಹಾಳಾಯಿತು ಎಂದು ನಾನು ಎಲ್ಲಿಯೂ ಹೇಳಿಲ್ಲ. ಆದರೆ ವಾಹಿನಿಯೊಂದು ( news channel ) ಹಾಗೆ ಸುಳ್ಳು ಸುದ್ದಿ ( Fake News ) ಬಿತ್ತರಿಸಿದ್ದರಿಂದ ಗೊಂದಲ ಸೃಷ್ಟಿಯಾಗಿದೆ’ ಅಂತ ಈಶ್ವರಪ್ಪ ಸ್ಪಷ್ಟನೆಯನ್ನ ನೀಡಿದ್ದಾರೆ.
ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ ಮಾಜಿ ಸಚಿವರು, ಹುಬ್ಬಳ್ಳಿಯಲ್ಲಿ ನಾನು ಆ ರೀತಿ ಹೇಳಿಕೆ ನೀಡಿದ್ದೇನೆ ಎಂಬ ಸುದ್ದಿಯನ್ನ ಸುದ್ದಿ ವಾಹಿನಿಯೊಂದು ಮೊದಲು ಪ್ರಸಾರ ಮಾಡಿತ್ತು. ಆ ಬಗ್ಗೆ ಸಂಬಂಧಿಸಿದ ಮಾಧ್ಯಮದ ವರದಿಗಾರರಿಗೆ ಈ ಬಗ್ಗೆ ಪ್ರಶ್ನಿಸಿದ್ದೆ. ಆಗ ಅದಕ್ಕೆ ಆತ ನಾನು ಆ ರೀತಿಯ ಸುದ್ದಿಯನ್ನ ಕಳಿಸಿಯೇ ಇಲ್ಲ. ಆದರೂ ಬೆಂಗಳೂರಿನಿಂದ ಹಾಗೆ ಸುದ್ದಿ ಬಿತ್ತರಿಸುತ್ತಿದ್ದಾರೆ ಎಂದಿದ್ದ. ಆ ಬಗ್ಗೆ ನಾನು ಸ್ಪಷ್ಟನೆ ಕೊಟ್ಟಿದ್ದರೂ, ಆ ಸುದ್ದಿ ವಾಹಿನಿ ನನ್ನ ಸ್ಪಷ್ಟನೆಯನ್ನ ಪ್ರಕಟಿಸಿರಲಿಲ್ಲ’ ಎಂದು ಮಾಜಿ ಸಚಿವ ಈಶ್ವರಪ್ಪ ಹೇಳಿಕೆಯನ್ನ ನೀಡಿದ್ದಾರೆ.
‘ಈ ರೀತಿ ಸುಳ್ಳು ಸುದ್ದಿಯನ್ನ ಆ ಮಾಧ್ಯಮ ಪ್ರಸಾರ ಮಾಡಿದ್ದರಿಂದ ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದಿದ್ದ ನಮ್ಮ ಹಲವು ಮಿತ್ರರಿಗೆ ಬಹಳ ನೋವಾಗಿದೆ. ಈ ಘಟನೆಯಿಂದ ನನಗೂ ದುಃಖವಾಗಿದೆ. ಈ ಬಗ್ಗೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಿಗೂ ಮಾಹಿತಿ ನೀಡಿದ್ದೇನೆ’ ಎಂದು ಸ್ಪಷ್ಟನೆಯನ್ನ ನೀಡಿದ್ದಾರೆ.
ಒಟ್ಟಾರೆಯಾಗಿ ಮಾಧ್ಯಮವೊಂದು ಪ್ರಕಟಿಸಿದ ಸುಳ್ಳು ಸುದ್ದಿಯಿಂದ ಸಚಿವ ಈಶ್ವರಪ್ಪನವರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದು ಈ ಬಗ್ಗೆ ಈಗ ಸ್ಪಷ್ಟನೆಯನ್ನ ನೀಡಿ ಗೊಂದಲವನ್ನ ಬಗೆ ಹರಿಸುವಲ್ಲಿ ಪ್ರಯತ್ನ ಪಟ್ಟಿದ್ದಾರೆ..