ಮಂಡ್ಯ ಜಿಲ್ಲೆಯ ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ಅವರನ್ನು ಜೆಡಿಎಸ್ ಪಕ್ಷದಿಂದ ಉಚ್ಚಾಟನೆ ಮಾಡಿ ಆದೇಶಿಸಲಾಗಿದೆ.
ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಮಂಡ್ಯ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ಅವರನ್ನು ಜೆಡಿಎಸ್ ಉಚ್ಛಾಟಿಸಿದೆ. ಈ ಕುರಿತು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಹೆಚ್ ಕೆ ಕುಮಾಸ್ವಾಮಿ ಪಕ್ಷದ ವರಿಷ್ಠರ ಸೂಚನೆ ಮೇರೆಗೆ ಇಂದು ಆದೇಶ ಜಾರಿ ಮಾಡಿದ್ದಾರೆ.
ಹಿರಿಯ ನಾಯಕ, ಹೋರಾಟಗಾರರು ಮತ್ತು ಮಾಜಿ ಸಂಸದ ಮಾದೇಗೌಡ ವಿರುದ್ಧ ಶಿವರಾಮೇಗೌಡ ಲಘುವಾಗಿ ಮಾತಾಡಿದ್ದರು ಎಂಬ ಕಾರದಿಂದಾಗಿ ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಆಕ್ರೋಶಗೊಂಡಿದ್ದರು ನಂತರ ಅವರನ್ನು ಪಕ್ಷದಿಂದ ಉಚ್ಚಾಟಿಸಲು ಸೂಚಿಸಿದ್ದರು. ಈಗ ಅದರ ಅಧಿಕೃತ ಆದೇಶ ಹೊರಬಿದಿದ್ದು ಶಿವರಾಮೇಗೌಡರನ್ನು ಉಚ್ಚಾಟಿಸಲಾಗಿದೆ.