• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, September 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

WATCH : ವೃದ್ಧಾಶ್ರಮದಿಂದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ : ಭಾವುಕ ವಿಡಿಯೋ ವೈರಲ್ | VINOD KAMBLI

ಪ್ರತಿಧ್ವನಿ by ಪ್ರತಿಧ್ವನಿ
September 27, 2026
in Top Story, ಕ್ರೀಡೆ, ದೇಶ
0
Former cricketer Vinod Kambli from old age home
Share on WhatsAppShare on FacebookShare on Telegram

ಭಾರತ ತಂಡದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ (Vinod Kambli) ಅವರು ವೃದ್ಧಾಶ್ರಮವೊಂದರಲ್ಲಿ ಕಾಲ ಕಳೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral) ಆಗಿದ್ದು, ಅವರ ಆರೋಗ್ಯದ ಸ್ಥಿತಿ ಕಂಡು ಕ್ರಿಕೆಟ್ ಅಭಿಮಾನಿಗಳು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ADVERTISEMENT
Congress Protest : ರಾಹುಲ್ ಗಾಂಧಿ ಟೀಕೆಗೆ ರಾಜೀವ್ ಚಂದ್ರಶೇಖರ್‌ಗೆ ನೈತಿಕ ಹಕ್ಕಿಲ್ಲ! #rahulgandhi #congress

ಕಳೆದ ಕೆಲ ಸಮಯದಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಕಾಂಬ್ಳಿ, 2024ರ ಡಿಸೆಂಬರ್‌ನಲ್ಲಿ ಮೂತ್ರದ ಸೋಂಕು ಹಾಗೂ ರಕ್ತದೊತ್ತಡದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದು ಪತ್ತೆಯಾಗಿತ್ತು. ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕವೂ ಅವರು ನಡೆದಾಡಲು ಪರದಾಡುತ್ತಿದ್ದ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದವು.

ಪ್ರಸ್ತುತ ವೈರಲ್ ಆಗಿರುವ ವಿಡಿಯೋದಲ್ಲಿ ಮಾತನಾಡಲು ಕೊಂಚ ಕಷ್ಟಪಡುತ್ತಿರುವ ಕಾಂಬ್ಳಿ, ತಾವಿರುವ ವೃದ್ಧಾಶ್ರಮದ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ನಾನಿಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಇಲ್ಲಿನ ಸೌಲಭ್ಯಗಳು ಅತ್ಯುತ್ತಮವಾಗಿದ್ದು, ಮನೆಯಿಂದ ದೂರವಿದ್ದೇನೆ ಎಂಬ ಭಾವನೆಯೇ ಬರುತ್ತಿಲ್ಲ. ಇಲ್ಲಿನ ಜನರಿಂದ ನನಗೆ ಅಪಾರ ಪ್ರೀತಿ ಮತ್ತು ಗೌರವ ಸಿಗುತ್ತಿದೆ. ನಾನಿಲ್ಲಿ ನೆಮ್ಮದಿಯಾಗಿದ್ದೇನೆ,” ಎಂದು ಅವರು ಹೇಳಿಕೊಂಡಿದ್ದಾರೆ.

ಹಿಂದೆ ಧೂಮಪಾನ ಹಾಗೂ ಮದ್ಯಪಾನದ ದುಶ್ಚಟಗಳಿಂದ ಆರೋಗ್ಯ ಹಾಳುಮಾಡಿಕೊಂಡಿದ್ದ ಕಾಂಬ್ಳಿ, ಇದೀಗ ಕುಟುಂಬ ಮತ್ತು ಸ್ನೇಹಿತರ ನೆರವಿನಿಂದ ಮದ್ಯ ಸೇವನೆಯನ್ನು ಸಂಪೂರ್ಣವಾಗಿ ತ್ಯಜಿಸಿದ್ದಾರೆ. ಆದರೆ ಜ್ಞಾಪಕಶಕ್ತಿಯ ಸಮಸ್ಯೆಯಿಂದಾಗಿ ಕೆಲವೊಮ್ಮೆ ತಾವು ಧೂಮಪಾನ ಮಾಡಬಾರದು ಎಂಬುದನ್ನೇ ಮರೆತುಬಿಡುತ್ತಾರೆ ಎನ್ನಲಾಗಿದೆ.

HD Kumaraswamy : ಬಿಡದಿ ಟೌನ್‌ಶಿಪ್‌ ವಿರುದ್ಧ ಹೋರಾಟ ರೈತರ ಮೇಲೆ FIRಗೆ ಕುಮಾರಸ್ವಾಮಿ ಗರಂ..! #dkshivakumar

ಈ ನಡುವೆ, ಬಿಸಿಸಿಐ ಮಾಜಿ ಅಂಪೈರ್ ಹಾಗೂ ಕಾಂಬ್ಳಿ ಅವರ ಆಪ್ತ ಸ್ನೇಹಿತ ಮಾರ್ಕಸ್ ಕೌಟೊ ಮಾತನಾಡಿ, ಕಾಂಬ್ಳಿ ಅವರ ಆರ್ಥಿಕ ಮತ್ತು ವೈದ್ಯಕೀಯ ನೆರವಿಗಾಗಿ ಕ್ರಿಕೆಟಿಗರನ್ನೊಳಗೊಂಡ ವಾಟ್ಸಾಪ್ ಗ್ರೂಪ್ ರಚಿಸಲಾಗಿದ್ದು, ಹಲವು ಮಾಜಿ ಆಟಗಾರರು ಹೆಸರು ಬಹಿರಂಗಪಡಿಸದೆ ಅವರಿಗೆ ಆರ್ಥಿಕ ಸಹಾಯ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಕಾಂಬ್ಳಿ ಅವರ ಮೆದುಳಿನಲ್ಲಿರುವ ರಕ್ತದ ಗಂಟುಗಳನ್ನು ಸದ್ಯಕ್ಕೆ ತೆಗೆದುಹಾಕಲು ಸಾಧ್ಯವಿಲ್ಲವೆಂದು ವೈದ್ಯರು ತಿಳಿಸಿದ್ದು, ಅವರಿಗೆ ಮತ್ತೆ ಪಾರ್ಶ್ವವಾಯು (ಬ್ರೈನ್ ಸ್ಟ್ರೋಕ್) ಸಂಭವಿಸುವ ಸಾಧ್ಯತೆಯಿದೆ ಎಂದು ಎಚ್ಚರಿಸಿದ್ದಾರೆ. ಸದ್ಯ ಕಾಂಬ್ಳಿ ತಮ್ಮ ಅಪಾರ ಇಚ್ಛಾಶಕ್ತಿಯಿಂದಲೇ ಈ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.

ತೆರಿಗೆ ವಂಚಕ ರಾಜೀವ್ ಚಂದ್ರಶೇಖರ್ ಗೆ ರಾಹುಲ್ ಗಾಂಧಿಯನ್ನು ಟೀಕಿಸುವ ಯಾವುದೇ ನೈತಿಕ ಹಕ್ಕಿಲ್ಲ: ಎಸ್. ಮನೋಹರ್

सचिन तेंदुलकर के बचपन के दोस्त विनोद कांबली आज वृद्धा आश्रम मे रह रहे है, उन्होंने ने भावुक कर देने वाला सन्देश दिया है….

कभी एक बड़े क्रिकेटर थे जो आज वृद्धा आश्रम मे रह रहे है…. ईश्वर की भी अजब लीला है 🙏🏻 pic.twitter.com/nhK6yiVaCl

— Adesh_26 (@SonOfBharat_88) September 26, 2026

Tags: cricketerold age homesVinod Kambli
Previous Post

ತೆರಿಗೆ ವಂಚಕ ರಾಜೀವ್ ಚಂದ್ರಶೇಖರ್ ಗೆ ರಾಹುಲ್ ಗಾಂಧಿಯನ್ನು ಟೀಕಿಸುವ ಯಾವುದೇ ನೈತಿಕ ಹಕ್ಕಿಲ್ಲ: ಎಸ್. ಮನೋಹರ್

Next Post

ರಾಜ್ಯ ಸರ್ಕಾರ ವೀರಶೈವ ಲಿಂಗಾಯತ ಧರ್ಮ ಗುರುಗಳ ತಂಗುದಾಣಕ್ಕೆ 5 ಕೋಟಿ ರೂ.ನೀಡಬೇಕು: ಲಕ್ಷ್ಮೀ ಹೆಬ್ಬಾಳಕರ್ ಮನವಿ | LAKSHMI HEBBALKAR

Related Posts

The Controversy Surrounding the NICE Project: A Brief Overview
Top Story

ನೈಸ್ ಯೋಜನೆ ಸುತ್ತಲಿನ ವಿವಾದ: ಒಂದು ಸಂಕ್ಷಿಪ್ತ ಕಿರುನೋಟ | NICE

by ಪ್ರತಿಧ್ವನಿ
September 29, 2026
0

ಬೆಂಗಳೂರು: ಮೂರು ದಶಕಗಳ ಹಿಂದೆ ರೂಪುಗೊಂಡ ನೈಸ್‌ (NICE) ರಸ್ತೆ ಯೋಜನೆ, ಕರ್ನಾಟಕದ (Karnataka) ಮೂಲಸೌಕರ್ಯ ಅಭಿವೃದ್ಧಿಯ ಇತಿಹಾಸದಲ್ಲೇ ಅತ್ಯಂತ ಚರ್ಚೆಗೆ ಈಡಾದ ಯೋಜನೆಗಳಲ್ಲಿ ಒಂದು. ಬೆಂಗಳೂರು...

Read moreDetails
Parents sell their one-month-old infant to buy gold jewelry and a smartphone

SHOCKING : ಚಿನ್ನಾಭರಣ, ಸ್ಮಾರ್ಟ್‌ಫೋನ್‌ ಖರೀದಿಸಿಲು 1 ತಿಂಗಳ ಹಸುಗೂಸನ್ನೇ ಮಾರಿದ ಹೆತ್ತವರು.!

September 29, 2026
Gyanesh Kumar is a puppet of the Centre Mallikarjun Kharge

ಜ್ಞಾನೇಶ್ ಕುಮಾರ್ ಕೇಂದ್ರದ ಕೈಗೊಂಬೆ, ತಕ್ಷಣ ರಾಜೀನಾಮೆ ನೀಡಲಿ: ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ | Mallikarjun Kharge

September 29, 2026
Centre approves 1,650 new MBBS seats in Karnataka

ವೈದ್ಯಕೀಯ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಕರ್ನಾಟಕದಲ್ಲಿ ಹೊಸ 1,650 ಹೊಸ MBBS ಸೀಟುಗಳಿಗೆ ಕೇಂದ್ರ ಅನುಮೋದನೆ | MBBS

September 29, 2026
How to change the mobile number linked to FASTag

`ಫಾಸ್ಟ್‌ ಟ್ಯಾಗ್’ ಜೊತೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಬದಲಾಯಿಸುವುದು ಹೇಗೆ? ಇಲ್ಲಿದೆ ಮಾಹಿತಿ | FASTag

September 29, 2026
Next Post
State government should provide ₹5 crore for the transit home for Veerashaiva Lingayat religious heads

ರಾಜ್ಯ ಸರ್ಕಾರ ವೀರಶೈವ ಲಿಂಗಾಯತ ಧರ್ಮ ಗುರುಗಳ ತಂಗುದಾಣಕ್ಕೆ 5 ಕೋಟಿ ರೂ.ನೀಡಬೇಕು: ಲಕ್ಷ್ಮೀ ಹೆಬ್ಬಾಳಕರ್ ಮನವಿ | LAKSHMI HEBBALKAR

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada