ಮೈಸೂರಿನ(mysore) ಜಿಲ್ಲಾ ಪತ್ರಕರ್ತರ ಸಂಘಧಲ್ಲಿ ನಡೆದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ,(siddaramaiah) BJP ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ(government) ಭ್ರಷ್ಟಾಚಾರ, ಹಗರಣ ನಡೆದಿಲ್ವ ಅಂತ ಬಿಜೆಪಿ(BJP) ನಾಯಕರು ಕೇಳ್ತಾರೆ ಇದನ್ನ ನಂಬೋದಕ್ಕೆ ಸಾಧ್ಯವಿದ್ಯಾ?

ಈ ಹಿಂದೆ ನಮ್ಮ ಸರ್ಕಾರ ಇದ್ದಾಗ ನಮ್ಮ ಪ್ರಣಾಳಿಕೆಯಲ್ಲಿದ್ದ ಎಲ್ಲಾ ಭರವಸೆಗಳನ್ನ ಈಡೇರಿಸಿದ್ದೇವೆ. ಬಿಜೆಪಿ 2018ರಲ್ಲಿ ಪ್ರಣಾಳಿಕೆಯಲ್ಲಿ(manifesto) ನೀಡಿದ್ದ ಎಲ್ಲಾ ಭರವಸೆಗಳನ್ನ ಈಡೇರಿಸಿದ್ದಾರಾ? ಎಂದು ಪ್ರಶ್ನೆ ಮಾಡಿದ್ರು.

ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರಗಳು(BJP government) ರಾಜ್ಯವನ್ನ ಸಾಲದಲ್ಲಿ ಮುಳುಗಿಸಿವೆ. ಕರ್ನಾಟಕದಲ್ಲಿ(karnataka) 2018 ರ ಮಾರ್ಚ್‌ವರೆಗೆ 2ಲಕ್ಷದ 42 ಸಾವಿರ ಕೋಟಿ ಇತ್ತು. ಇವಾಗ ರಾಜ್ಯದ ಸಾಲ 5 ಲಕ್ಷದ 64 ಸಾವಿರ ಕೋಟಿ ಆಗಿದೆ. ಅಂದ್ರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 3 ಲಕ್ಷದ 22 ಲಕ್ಷ ಕೋಟಿ ಆಗಿದೆ. ಮನಮೋಹನ್ ಸಿಂಗ್(manmohan singh) ಅವರು ಪ್ರಧಾನಿ(prime minister) ಆಗಿದ್ದಾಗ ದೇಶದ ಮೇಲೆ 52 ಲಕ್ಷ ಕೋಟಿ ಸಾಲ ಇತ್ತು. ಇವಾಗ ದೇಶದ ಸಾಲದ ಪ್ರಮಾಣ 152 ಲಕ್ಷ ಕೋಟಿ ಆಗಿದೆ.
			
                                
                                
                                
