ಲಂಡನ್(London): ಕುಟುಂಬದ ಜೊತೆಗೆ ಲಂಡನ್ ಪ್ರವಾಸದಲ್ಲಿರುವ ಕರ್ನಾಟಕದ ಮಾಜಿ ಮುಖ್ಯಮಂತ್ರಿ Former Chief Minister)ಮತ್ತು ಸಂಸದರಾದ ಬಸವರಾಜ ಬೊಮ್ಮಾಯಿ Basavaraja Bommai)ಅವರು ಲಂಡನ್‌ನಲ್ಲಿ ಬಸವೇಶ್ವರ ಮೂರ್ತಿಗೆ ಗೌರವ ನಮನ ಸಲ್ಲಿಸಿದರು.ಈ ಕಾರ್ಯಕ್ರಮವನ್ನು ಲಂಬೆತ್ ಬಸವೇಶ್ವರ ಫೌಂಡೇಶನ್ ಹಾಗೂ ಯುನೈಟೆಡ್ ಕಿಂಗ್ಲಮ್‌ನ ಬಸವ ಸಮಿತಿಯು ಜಂಟಿಯಾಗಿ (Basava Committee jointly)ಆಯೋಜಿಸಿತ್ತು ಕನ್ನಡ ಬಳಗ, ಕನ್ನಡಿಗರು ಯುಕೆ ಮತ್ತು ಭಾರತೀಯ ವಿದ್ಯಾ ಭವನದ ಗಣ್ಯರು ಭಾಗವಹಿಸಿದ್ದರು.
ಲ್ಯಾಂಬೆತ್ ಮಾಜಿ ಮೇಯರ್ ಡಾ. ನೀರಾಜ್ ಪಾಟೀಲ್, ಬಸವ ಸಮಿತಿಯ ಅಧಿಕಾರಿಗಳಾದ ಅಭಿಜಿತ್ ಸಾಲಿಯಂಥ್ ಮತ್ತು ರಂಗನಾಥ ಮಿರ್ಜಿ ಅವರು ಬ್ರಿಟಿಷ್ ಭಾರತೀಯ ಮತ್ತು ಕನ್ನಡ ಸಮುದಾಯವನ್ನು ಪ್ರತಿನಿಧಿಸುತ್ತಾ ಸಮಾರಂಭದ ಅತಿಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ಐತಿಹಾಸಿಕ ಸ್ಮಾರಕದ ದಶಮಾನೋತ್ಸವದ ಆಚರಣೆಗಾಗಿ ಪ್ರಧಾನಮಂತ್ರಿಯವರನ್ನು ಆಹ್ವಾನಿಸಲು ತೀರ್ಮಾನಿಸಿದ್ದು, ಪ್ರಧಾನ ಮಂತ್ರಿಗಳು ದಶಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೂಲಕ ಅಧಿಕೃತ ಆಹ್ವಾನ ಪತ್ರವನ್ನು ನೀಡಿದ್ದು, ಅದನ್ನು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಹಸ್ತಾಂತರಿಸಲು ವಿನಂತಿ ಮಾಡಿಕೊಂಡಿದ್ದಾರೆ.
2015ರ ನವೆಂಬರ್ 14ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಅನಾವರಣಗೊಂಡು ಐತಿಹಾಸಿಕವಾದ ಈ ಮೂರ್ತಿ, ಯುಕೆ statutes Act 1854 ಅಡಿಯಲ್ಲಿ ಬ್ರಿಟಿಷ್ ಕ್ಯಾಬಿನೆಟ್ ಅಂಕಿತಗೊಳಿಸಿದ ಮೊದಲ ಕನ್ಸೆಪ್ಟ್ ಸ್ಮಾರಕಗಳಲ್ಲೊಂದಾಗಿದೆ. ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು 2023ರ ಮಾರ್ಚ್ 5 ರಂದು ಲಾರ್ಡ್ ಬಸವೇಶ್ವರ ಮೂರ್ತಿಗೆ ನಮನ ಸಲ್ಲಿಸಿದ್ದರು ಎಂದು ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ತಿಳಿಸಿದೆ. ಲಂಡನ್‌ನ ಮಾಜಿ ಉಪಮೇಯರ್ ರಾಜೇಶ್ ಅಗರ್ವಾಲ್ ಈ ಸಂದರ್ಭದಲ್ಲಿ ಹಾಜರಿದ್ದರು.