ಬೆಂಗಳೂರು ; ಈಗಾಗ್ಲೆ ರಾಜ್ಯದಲ್ಲಿ ಮಹಾ ಘಟ್‌ಬಂಧನ್‌ಗೆ ಬೇಕಾದ ಎಲ್ಲಾ ರೀತಿಯಾದ ತಯಾರಿಗಳು ಆರಂಭವಾಗಿದೆ. ಉತ್ತರ ಭಾರತದ ಹಲವು ನಾಯಕರು ಕರ್ನಾಟಕದಲ್ಲಿ ಬಂದು ಬೀಡು ಬಿಟ್ಟಿದ್ದಾರೆ. ಇಂದು ಮತ್ತು ನಾಳೆ ಸಭೆ ಮಹಾ ನಾಯಕರುಗಳ ಭೇಟಿಗೆ ವೇದಿಕೆ ಸಜ್ಜಾಗಿದೆ. ಆದರೆ ಕರ್ನಾಟಕದಲ್ಲಿಒಂದು ಕಾಲದಲ್ಲಿ ಪ್ರಬಲ ವಿಪಕ್ಷವಾಗಿ ಗುರುತಿಸಿಕೊಂಡು ದೇಶದ ರಾಜಕೀಯದಲ್ಲಿ ಹೊಸ ಭರವಸೆಯನ್ನ ಮೂಡಿಸಿದ್ದ ಕರ್ನಾಟಕದ ಸ್ಥಳೀಯ ಪಕ್ಷವಾದ ಜೆಡಿಎಸ್ ಈ ವಿಪಕ್ಷಗಳ ಸಭೆಯಿಂದ ಹೊರಗುಳಿದಿದೆ.
ಈ ಬೆಳವಣಿಗೆಯನ್ನ ಗಮನಿಸಿರುವ ರಾಜಕೀಯ ಪಂಡಿತರು ಮುಂದಿನ ದಿನಗಳಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಆಗೋದು ಖಚಿತ ಎನ್ನುತ್ತಿದ್ದಾರೆ. ಆದರೆ ಈ ಮೈತ್ರಿ ಬಗ್ಗೆ ಯಾವುದೇ ಮಾಹಿತಿಯನ್ನ ಅಧಿಕೃತವಾಗಿ ಎರಡೂ ಪಕ್ಷದ ಪ್ರಮುಖರು ಇದುವರೆಗೂ ಮಾಹಿತಿಯನ್ನ ನೀಡಿಲ್ಲ. ಇದು ಬಿಜೆಪಿಗೆ ಜೆಡಿಎಸ್‌ನ ನಡೆಯ ಬಗ್ಗೆ ಜನ ಸಾಮಾನ್ಯರಲ್ಲಿ ಹಲವು ಪ್ರಶ್ನೆಗಳನ್ನ ಮೂಡುವ ಹಾಗೆ ಮಾಡಿದೆ.
ಇದರ ನಡುವೆ ವಿಪಕ್ಷಗಳ ಸಭೆಗೆ ಜೆಡಿಎಸ್ ಭಾಗವಹಿದಿರುವ ಕುರಿತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಜೆಡಿಎಸ್‌ಗೆ ವಿಪಕ್ಷಗಳ ಸಭೆಗೆ ಇದುವರೆಗೂ ಯಾವುದೇ ರೀತಿಯಾದ ಅಹ್ವಾನವನ್ನ ನೀಡಲಾಗಿಲ್ಲ. ಹೀಗಾಗಿ ನಾವು ಭಾಗವಹಿಸುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಜೊತೆಗೆ ರಾಜ್ಯ ಸರ್ಕಾರವನ್ನ ಕೂಡ ಟೀಕೆ ಮಾಡಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ರಾಜ್ಯದಲ್ಲಿ 42 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ವರದಿ ಮಾಧ್ಯಮದ ಮೂಲಕ ನಾನು ಪಡೆದುಕೊಂಡು, ಈ ಬಗ್ಗೆ ಸರ್ಕಾರ ಕ್ರಮ ತೆಗೆದುಕೊಳ್ಳುವುದನ್ನ ಬಿಟ್ಟು ವಿಪಕ್ಷಗಳ ಸಭೆ ಅಂತ ಓಡಾಡುತ್ತಿದೆ.
ಸರ್ಕಾರದ ಈ ನಡೆ ಸರಿಯಲ್ಲ ಎಂದು ಸರ್ಕಾರದ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಆಕ್ರೋಶವನ್ನ ವ್ಯಕ್ತ ಪಡಿಸಿದ್ದಾರೆ. ಆದರೆ ಈ ವೇಳೆ ಬಿಜೆಪಿಯ ಜೊತೆ ಮೈತ್ರಿಯ ಕುರಿತು ಯಾವುದೇ ರೀತಿಯಾದ ಮಾಹಿತಿ ನೀಡಿದ ಮಾಜಿ ಮುಖ್ಯಮಂತ್ರಿಗಳು ಮುಂದಿನ ಜನ ನಮ್ಮನ್ನು ಹೋರಾಟಗಾರರ ಸ್ಥಾನದಲ್ಲಿ ನೋಡೋದಕ್ಕೆ ಇಷ್ಟ ಪಟ್ಟಿದ್ದಾರೆ ನಾವು ಹೋರಾಟವನ್ನ ಮಾಡುತ್ತೇವೆ ಎಂದು ಹೇಳಿಕೆಯನ್ನ ನೀಡಿದ್ದಾರೆ.