ಅರಣ್ಯ ಇಲಾಖೆಯ ಸಚಿವರಾಗಿರುವ ಈಶ್ವರ ಖಂಡ್ರೆ ಇಂದು ಮೈಸೂರಿನಲ್ಲಿ ಪ್ರತಿಕಾಗೋಷ್ಟಿಯನ್ನು ನಡೆಸಿದರು. ಮಾಧ್ಯಮಗಳ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ಆನೆಗಳನ್ನ ಪಳಗಿಸುವುದು, ನೋಡಿಕೊಳ್ಳುವುದು ದೊಡ್ಡ ಸವಾಲಾಗಿದ್ದು, 2025 ರ ನಾಡ ಹಬ್ಬ ದಸರಾ ಸಡಗರ, ಸಂಭ್ರಮ, ಮತ್ತು ವಿಜೃಂಭನೆಯಿಂದ ಸಾಗುತ್ತಿದೆ.
ನಾಡ ಹಬ್ಬಕ್ಕೆ 500 ವರ್ಷದ ಇತಿಹಾಸವಿದ್ದು, 10 ದಿನಗಳ ಕಾಲ ವಿಭಿನ್ನ ಹಾಗೂ ವಿಶೇಷ ಕಾರ್ಯಕ್ರಮಗಳು ನಡೆಯುತ್ತಿದೆ. ನಾಡ ದೇವತೆಯಾಗಿರುವ ಚಾಮುಂಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ರಾಜ್ಯದ ಜನತೆಯ ಒಳತಗಾಲೆಂದು ಪ್ರಾರ್ಥಿನೆ ಮಾಡಿದ್ದೇವೆ ಎಂದು ಹೇಳಿದರು. ಇನ್ನು ಮಾನವ ಮತ್ತು ಆನೆ ಸಂಘರ್ಷ ವಿಚಾರವಾಗಿ ಮಾತನಾಡಿದ ಸಚಿವರು ಈ ಸಂರ್ಘಗಳು ಕಡಿಮೆಯಾಗಬೇಕು.
ಹಾಗೂ ಈ ಕಾರ್ಯಚರಣೆ ವೇಳೆ ಅನೇಕ ಸಿಬ್ಬಂದಿಗಳು, ಕಾವಾಡಿಗಳು ಹಾಗೂ ಮಾವುತರು ಕೂಡ ಸಾವಿಗೀಡಾಗಿದ್ದಾರೆ. ಕಾಡನೆ ದಾಳಿಯ ಕಾರ್ಯಚರಣೆಯಲ್ಲಿ ತೊಡಗಿಸಿಕೊಳ್ಳುವ ಸಾಮರ್ಥ್ಯವಿರುವುದು ಕರ್ನಾಟಕದ ಆನೆಗಳಿಗೆ ಮತ್ತು ಈ ಕಾರ್ಯಚರಣೆಯಲ್ಲಿ ಭಾಗಿಯಾಗಿವ ಸಿಬ್ಬಂದಿಗಳಲ್ಲಿ ಮಾತ್ರ ಎಂದು ಹೇಳುವ ಮೂಲಕ ಅವರಿಗೆ ಸಮಸ್ಯೆಯ ಗಂಭೀರತೆ ಅರ್ಥವಾಗಿದ್ದು ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಜ್ಞಾನ ಹೊಂದಿದ್ದೇನೆಂದು ಈ ಮೂಲಕ ತಿಳಿಸುವ ಪ್ರಯತ್ನ ಮಾಡಿದರು.
ಇದು ಮಾನವ ಮತ್ತು ಆನೆಗಳ ಸಂಘರ್ಷ ಕೇವಲ ನಮ್ಮ ರಾಜ್ಯಕ್ಕೆ ಮಾತ್ರ ಸಮೀತಿವಾಗಿಲ್ಲ, ಇದು ಎಲ್ಲಾ ರಾಜ್ಯಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆ ಇದಾಗಿದೆ ಎಂದು ಹೇಳಿದರು. ಇತ್ತ ನೆರೆಯ ರಾಜ್ಯಗಳಲ್ಲೂ ಈ ಸಂಘರ್ಷ ಮುಂದುವರೆದಿದ್ದೂ ಅವರು ನಮ್ಮ ರಾಜ್ಯದ ಬಳಿ ಸಹಾಯ ಕೇಳಿಕೊಂಡು ಬಂದು, ನಮ್ಮ ಕುಮ್ಕಿ ಆನೆಗಳಿಗೆ ಬೇಡಿಕೆ ಮುಂದಿಟ್ಟಾಗ ರಾಜ್ಯದ ಘನತೆ ಮತ್ತು ಗೌರವಗಳು ಹೆಚ್ಚಿಸಿದಂತಾಗಿದೆ ಎಂದು ಹೇಳಿದರು. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಅರಣ್ಯ ಪ್ರದೇಶಗಳನ್ನು ಹೆಚ್ಚಿಸುವ ಕ್ರಮಗಳನ್ನು ಕೈಗೊಳ್ಳಲಾಗಿದೆ, ಸದ್ಯ ದೇಶದಲ್ಲಿ ಅತಿ ಹೆಚ್ಚು ಆನೆಗಳಿರುವುದು ನಮ್ಮ ರಾಜ್ಯದಲ್ಲಿ . ಹಾಗೂ ಆನೆ ರಕ್ಷಣೆಯಲ್ಲಿ ತೊಡಗಿರುವ ಸಿಬ್ಬಂದಿಗಳ ಸಮಸ್ಯೆ ಮತ್ತು ಬೇಡಿಕೆ ನಿಮ್ಮದು ಅನೇಕ ಬೇಡಿಕೆಗಳಿವೆ. ಹಾಗೂ ನಿಮಗೆ ಬಡ್ತಿ ನೀಡುವುದು ಸರ್ಕಾರ ಕರ್ತವ್ಯ , ಈ ದೃಷ್ಠಿಯಿಂದ ಡಿ ಆರ್ ಎಫ್ ಹುದ್ದೆಗೆ ಏರಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ಸಬ್ಬಿಂದಿಗಳಿಗೆ ರೂ 8 ಸಾವಿರ ಮೌಲದ್ಯ ಕಿಟ್‌ಗಳನ್ನು ವಿತರಿಸಲಾಗುವುದೆಂದು ಸಚಿವರು ತಿಳಿಸಿದರು.







