ಮೈಸೂರು ಜಿಲ್ಲೆಯ ಹೆಚ್‌ಡಿ ಕೋಟೆ (HD Kote) ತಾಲ್ಲೂಕಿನ ಹೌಸಿಂಗ್ ಬೋರ್ಡ್ ಬಳಿ ಗಂಡು ಚಿರತೆಯೊಂದು (Male leopard) ಬೋನಿಗೆ ಬಿದ್ದಿದೆ. ಈ ಮೂಲಕ ಒಂದು ತಿಂಗಳಲ್ಲಿ, ಒಂದೇ ಸ್ಥಳದಲ್ಲಿ ಬೋನಿಗೆ ಬಿದ್ದ ಐದನೇ ಚಿರತೆ ಇದಾಗಿದೆ.
ಅರಣ್ಯ ಇಲಾಖೆ ಸಿಬ್ಬಂದಿ ಈ ಚಿರತೆಯನ್ನು ಸೆರೆ ಹಿಡಿದಿದ್ದಾರೆ. ಕಳೆದ 1 ವರ್ಷದಿಂದ ಈ ಭಾಗದಲ್ಲಿ ಸಾಕು ಪ್ರಾಣಿಗಳ ಮೇಲೆ ಚಿರತೆ ದಾಳಿ ಹೆಚ್ಚಾಗಿತ್ತು. ಈ ಬೆನ್ನಲ್ಲೇ ಈಗಾಗಲೇ ಈ ಭಾಗದಲ್ಲಿ ಅರಣ್ಯ ಇಲಾಖೆ (Forest department) ಕಾರ್ಯಾಚರಣೆ ನಡೆಸಿ ನಾಲ್ಕು ಚಿರತೆಗಳನ್ನ ಸೆರೆಹಿಡಿದಿತ್ತು.
ಇದೀಗ ಮತ್ತೊಂದು ಚಿರತೆ ಕೂಡ ಇದೇ ಭಾಗದ ಜಮೀನಿನಲ್ಲಿ ಸೆರೆಯಾಗಿದೆ. ಮಾಜಿ ಶಾಸಕ ದಿವಂಗತ ಎನ್.ನಾಗರಾಜು ಜಮೀನಿನಲ್ಲಿ ಈ ಚಿರತೆ ಬೋನಿಗೆ ಬಿದ್ದಿತ್ತು, ಹೀಗೆ ಬೋನಿನಲ್ಲಿ ಸೆರೆ ಸಿಕ್ಕ ಚಿರತೆ ನೋಡಲು ಸಾಕಷ್ಟು ಜನರು ಜಮಾಯಿಸಿದ್ರು