ರಾಜ್ಯ ಬಿಜೆಪಿ(state bjp) ಪಾಲಿಗೆ ತುಮಕೂರು (Tumkur)ಬಂಡಾಯದ ಟೆನ್ಶನ್ ದೂರವಾದಂತಿದೆ. ಈಗಾಗಲೇ ಪಕ್ಷ ವಿ.ಸೋಮಣ್ಣರನ್ನ (V.somanna) ಅಭ್ಯರ್ಥಿಯಾಗಿ ಘೋಷಿಸಿದ್ದ ಪರಿಣಾಮ ಅಸಮಾಧಾನ ವ್ಯಕ್ತಪಡಿಸಿದ್ದ ಮಾಜಿ ಸಚಿವ ಜೆಸಿ ಮಾಧುಸ್ವಾಮಿ (JC maadhuswamy) ಮಾಧ್ಯಮಗಳನ್ನ ಉದ್ದೇಶಿಸಿ ಮಾತನಾಡಿದ್ರು. ತಾವು ಪಕ್ಷ ಬಿಡುವ ನಿರ್ಧಾರ ಮಾಡೋದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಇದೇ ಸಂದರ್ಭದಲ್ಲಿ ತುಮಕೂರು ಲೋಕಸಭಾ ಟಿಕೆಟ್ (parliment ticket) ಬಗ್ಗೆ ಮಾತನಾಡಿದ ಮಾಧುಸ್ವಾಮಿ , ಮೊದಲಿಗೆ ನಾನು ಲೋಕಸಭಾ ಟಿಕ್ಯಾಟ್ ಆಕಾಂಕ್ಷಿಯೇ ಆಗಿರಲಿಲ್ಲ. ಆದ್ರೆ ಪಕ್ಷದ ನಾಯಕರೇ ನನಗೆ ಲೋಕಸಭೆಗೆ ನಿಲ್ಲುವಂತೆ ಈ ಮೊದಲು ಹೇಳಿದ್ದರು. ಆದ್ರೆ ಈಗ ಏಕಾ-ಏಕಿ ವಿ.ಸೋಮಣ್ಣಗೆ ಟಿಕೆಟ್ ಘೋಷಣೆ ಮಾಡಿದ್ದಾರೆ. ವ್ಯವಧಾನಕ್ಕೂ ನನ್ನನ್ನು ಸಂಪರ್ಕ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಾನು ಯಡಿಯೂರಪ್ಪನವರ (Yediyurappa) ನಾಯಕತ್ವ ನಂಬಿ JDU ಬಿಟ್ಟು KJP ಗೆ ಬಂದೆ. ನಂತರ KJP ಇಂದ BJP ಗೆ ಬಂದೆ. ಇದೀಗ ಅವರೇ ನನ್ನ ಜೊತೆ ಮಾತನಾಡಿದ್ದು , ಇದೇ ಅಂತಿಮವಲ್ಲ, ಪಕ್ಷ ಬಿಡುವ ನಿರ್ಧಾರ ಬೇಡ ಎದು ಸಲಹೆ ಕೊಟ್ಟಿದ್ದು ಸದ್ಯಕ್ಕೆ ಪಕ್ಷ ಬಿಡುವುದಿಲ್ಲ ಎಂದು ಹೇಳಿದ್ದಾರೆ.