
ಹೇಗಿದೆ ಗೊತ್ತಾ ಪೊಲೀಸ್ ಸಿಬ್ಬಂದಿಗೆ ಹಿರಿಯ ಅಧಿಕಾರಿಗಳು ನೀಡಿರುವ ಸೂಚನೆ.. ಇಲಾಖೆ ವತಿಯಿಂದ ನೀಡಿರೋ ಎಲ್ಲಾ ಬೈಕ್ ಗಳನ್ನ ಮೊಬೈಲ್ ಪ್ಯಾಟ್ರೊಲಿಂಗ್ ಗೆ ಬಳಸಬೇಕು…ಆಯಾ ಡಿಸಿಪಿಗಳು ಸೆಕ್ಟರ್ ವೈಸ್ ಬಂದೋಬಸ್ತ್ ನೋಡಿಕೊಳ್ಳಬೇಕು…ಹೊಸ ವರ್ಷಾಚರಣೆ ವಿರೋಧಿಸುವ ಸಂಘ ಸಂಸ್ಥೆಗಳ ಚಲನವಲನ ಗಮನಿಸಬೇಕು…

ಶಾಪಿಂಗ್ ಕಾಂಪ್ಲೆಕ್ಸ್ ಮಾಲ್ ಗಳ ಒಳಬರುವ ವ್ಯಕ್ತಿಗಳ ಬ್ಯಾಗೇಜ್ ಪರಿಶೀಲನೆ. HHMD/ DFMD ಅಳವಡಿಕೆ ಬಗ್ಗೆ ತಿಳಿಸುವುದು…ಮಾಲ್ ಗಳ ಅಳವಡಿಸಿರುವ ಸಿಸಿಟಿವಿ ಬಗ್ಗೆ ಪರಿಶೀಲಿಸಿ ಸೂಕ್ತ ಮಾರ್ಗದರ್ಶನ ನೀಡುವುದು…ಡಿಸೆಂಬರ್ 31 ರ ರಾತ್ರಿ ಆಯಾ ಠಾಣೆ ವ್ಯಾಪ್ತಿಯಲ್ಲಿ ಇನ್ಸ್’ಪೆಕ್ಟರ್ ಬಂದೋಬಸ್ತ್ ಉಸ್ತುವಾರಿ…ಬಂದೋಬಸ್ತ್ ನೇಮಕವಾದ ಸಿಬ್ಬಂದಿಗಳು ಮೇಲಾಧಿಕಾರಿಗಳ ಆದೇಶವಿಲ್ಲದೇ ಸ್ಥಳ ಬಿಡಬಾರದು…ಪ್ರತಿ ಠಾಣೆ ವ್ಯಾಪ್ತಿಯಲ್ಲೂ ತಪಾಸಣೆ ಪಾಯಿಂಟ್ ನಲ್ಲಿ ಸಿಬ್ಬಂದಿ ನಿಯೋಜನೆ..
ಬಂದೋಬಸ್ತ್ ಗೆ ನೇಮಕವಾದ ಎಲ್ಲಾ ಸಿಬ್ಬಂದಿ ಹೆಲ್ಮೆಟ್ ಲಾಠಿ ಸರ್ವಿಸ್ ರಿವಾಲ್ವಾರ್ ಹೊಂದಿರತಕ್ಕದ್ದು…ಎಲ್ಲಾ ಅಧಿಕಾರಿ ಜೆರ್ಸಿ ರೈನ್ ಕೋಟ್ ಹೊಂದಿರತಕ್ಕದ್ದು…ಹೊಸ ವರ್ಷಾಚರಣೆ ವೇಳೆ ಸಾರ್ವಜನಿಕರು ಮಧ್ಯಪಾನ ಸೇವೆನೆ ಸಾಧ್ಯತೆ ಹಿನ್ನಲೆ ಸೌಜನ್ಯದಿಂದ ವರ್ತಿಸಬೇಕು..ಎಂಜಿ ರೋಡ್ ಬ್ರಿಗೇಡ್ ರಸ್ತೆಯಲ್ಲಿ ಜನಸಂದಣಿ ಹೆಚ್ಚಾಗಿರತ್ತೆ…
ಜೇಬುಗಳ್ಳರು ಸರಗಳ್ಳರ ಮೇಲೆ ನಿಗಾ ಇಟ್ಟಿರಬೇಕು…ಹೆಣ್ಣು ಮಕ್ಕಳನ್ನ ಚುಡಾಯಿಸುವವರನ್ನ ಕೂಡಲೇ ಬಂಧಿಸಬೇಕು…ಕುಡಿದು ರಸ್ತೆ ಮೇಲೆ ಬಾಟಲಿ ಎಸೆಯೋರು ದಾಂಧಲೆ ಮಾಡೊರನ್ನ ಕೂಡಲೇ ವಶಕ್ಕೆ ಪಡೆಯಬೇಕು …ಮಧ್ಯಮಾರಾಟ ಮಾಡುವ ಎಲ್ಲಾ ಮಾರಾಟಗಾರರಿಗೆ ಕಲಂ೨೧ ಅಬಕಾರಿ ಕಾಯ್ದೆಯಡಿ ನೋಟಿಸ್.… ಆಯಾ ಸ್ಥಳಗಳಲ್ಲಿ ಯಾವುದೇ ಅಹಿತಕರ ಚಟುವಟಿಕೆ ನಡೆದ್ರೆ ಅವರೇ ಹೊಣೆ…ಜನ ಸೇರುವ ಸ್ಥಳಗಳಲ್ಲಿ ರಾತ್ರಿ ವೇಳೆ ರೆಕಾರ್ಡ್ ಆಗುವ ಸಿಸಿಟಿವಿ ಅಳವಡಿಕೆ ಮಾಡುವುದು..ಎಲ್ಲಾ ರಸ್ತೆಗಳಲ್ಲಿ ವಿದ್ಯತ್ ದೀಪ ಕೆಲಸ ಮಾಡುವಂತೆ ಆಯಾ ಇಲಾಖೆ ಅಧಿಕಾರಿ ಜೊತೆ ಗಮನ ಹರಿಸುವುದು..
ಡಿಸೆಂಬರ್ 31 ರ ಸಂಜೆ 6 ರಿಂದ ಜನವರಿ 1 ರ ಬೆಳಗ್ಗೆ 6 ರ ವರೆಗೂ ನಗರದಲ್ಲಿ ವಿದ್ಯುತ್ ಕಡಿತವಾಗದಂತೆ ಬೆಸ್ಕಾಂ ಅಧಿಕಾರಿಗಳ ಜೊತೆ ನಿಗಾ ವಹಿಸುವುದು..ಎಂಜಿ ರೋಡ್ ಬ್ರಿಗೇಡ್ ರಸ್ತೆಗಳಲ್ಲಿ ಸ್ಥಳಾವಕಾಶಕ್ಕೆ ಅನುಗುಣವಾಗಿ ಜನರ ಆಗಮನ ನಿರ್ಗಮನ ನಿಯಂತ್ರಿಸುವುದು…ಅಬಕಾರಿ ಅಧಿಕಾರಿಗಳ ಸಂಪರ್ಕದೊಂದಿಗೆ ಪಬ್ ರೆಸ್ಟೊರೆಂಟ್ ನಲ್ಲಿ ಅನಧಿಕೃತ ಮಾರಾಟ ಬಗ್ಗೆ ಜಂಟಿ ತಪಾಸಣೆ.
ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಿದ ಎಲ್ಲಾ ಅಧಿಕಾರಿಗಳು ತಮ್ಮ ವಾಹನಗಳಿಗೆ ಪಿ.ಎ ಸಿಸ್ಟಮ್ ಅಳವಡಿಸುವುದು…ಗಸ್ತು ಮತ್ತು ಪಾಯಿಂಟ್ ಗಳಲ್ಲಿರುವ ಸಿಬ್ಬಂದಿ ಏನೇ ವ್ಯತ್ಯಾಸ ಕಂಡುಬಂದಲ್ಲಿ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು…ಇತ್ತೀಚಿನ ಭಯೋತ್ಪಾದಕ ಚಟುವಟಿಕೆ ಹಿನ್ನಲೆ ಕೆಲವು ಸಮಾಜಘಾತುಕ ಶಕ್ತಿಗಳಿಂದ ಶಾಂತಿ ಭಂಗ ಮಾಡುವ ಸಂಭವವಿದ್ದು ಸೂಕ್ತ ನಿಗಾ ವಹಿಸುವುದು..
ಠಾಣೆಯ ಎಲ್ಲಾ ಹೊಯ್ಸಳ ಹಾಗೂ ಚೀತಾ ವಾಹನಗಳು ಚುರುಕಾದ ಗಸ್ತು ಕಾರ್ಯ ಮಾಡಬೇಕು…ಬಂದೋಬಸ್ತ್ ಕರ್ತವ್ಯಕ್ಕೆ ಅಗತ್ಯವಿರುವ ಹೋಂ ಗಾರ್ಡ್ಸ್ ಸಿವಿಲ್ ಡಿಫೆನ್ಸ್ ಅಗ್ನಿಶಾಮಕ ಆಂಬುಲೆನ್ಸ್ ಗಳ ಬಗ್ಗೆ ಕಮಿಷನರ್ ಕಚೇರಿಗೆ ಡಿಸಿಪಿಗಳು ತಿಳಿಸಬೇಕು..ಡಿಸಿಪಿಗಳು KSRP/ CAR ತುಕಡಿಗಳನ್ನ ಅಗತ್ಯಗನುಗುಣವಾಗಿ ನಿಗಧಿತ ಸ್ಥಳಗಳಲ್ಲಿ ನಿಯೋಜಿಸುವುದು..ಪೊಲೀಸ್ ಇನ್ಸ್’ಪೆಕ್ಟರ್ ಗಳು ಠಾಣೆ ವ್ಯಾಪ್ತಿಯ ಸೂಕ್ಷ್ಮ ಅತಿಸೂಕ್ಷ್ಮ ಪ್ರದೇಶಕ್ಕೆ ನಿಬ್ಬಂದಿ ನಿಯೋಜನೆ…ಆಯಾ ಡಿಸಿಪಿ ಎಸಿಪಿಗಳಿಗೆ ಆಯಾ ವಿಭಾಗ ಉಪವಿಭಾಗದ ಬಂದೋಬಸ್ತ್ ಉಸ್ತುವಾರಿ ಹೀಗೆ ಎಲ್ಲಾ ಪೋಲಿಸ್ ಅಧಿಕಾರಿಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಿದ ಹಿರಿಯ ಅಧಿಕಾರಿಗಳು.