ಚನ್ನಪಟ್ಟಣ ಉಪಚುನಾವಣೆಯಲ್ಲಿ(Chennapattana bl election) ಡಿಕೆ ಸುರೇಶ್ (Dk suresh) ಸ್ಪರ್ಧೆ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ (Dcm Dk shivakumar) ಪ್ರತಿಕ್ರಿಯಿಸಿದ್ದಾರೆ. ಮಂಗಳೂರಿನಲ್ಲಿ (Mangalore) ಮಾತನಾಡಿದ ಡಿಕೆಶಿ ನನ್ನ ತಮ್ಮನಿಗೆ ಚುನಾವಣೆಯಲ್ಲಿ ಆಸಕ್ತಿ ಇಲ್ಲ. ಜನ ಅವನಿಗೆ ರೆಸ್ಟ್ ಕೊಡೋಕೆ ಹೇಳಿದ್ದಾರೆ. ಆದ್ರೆ ಪಾರ್ಟಿ ಕೆಲಸ ಮಾಡಬೇಕೆಂಬ ಆಸೆಯಿದೆ ಎಂದ್ರು.

ಇನ್ನು ಇದೇ ವೇಳೆ ನಾನು ಚನ್ನಪಟ್ಟಣಕ್ಕೆ ಏನೂ ಮಾಡಿಲ್ಲ ಎಂದು ಕುಮಾರಸ್ವಾಮಿಗೆ (Kumaraswamy) ಏನು ಗೊತ್ತು. ಅವರಿಗಿಂತ 10 ವರ್ಷ ಮೊದಲೇ ನನಗೆ ಚನ್ನಪಟ್ಟಣ ಗೊತ್ತು. ಕುಮಾರಸ್ವಾಮಿ ಬಹಳ ಲೇಟಾಗಿ ರಾಜಕಾರಣಕ್ಕೆ ಬಂದವರು ಅಂತ ಕೆಂದ್ರ ಸಚಿವ ಕುಮಾರಸ್ವಾಮಿಗೆ ಟಾಂಗ್ ನೀಡಿದ್ರು.

ಇನ್ನೂ ಡಿಸಿಎಂ ಡಿ.ಕೆ.ಶಿವಕುಮಾರ್ ಟಾಂಗ್‌ಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ದೆಹಲಿಯಲ್ಲಿ (Delhi) ಕೌಂಟರ್ ಕೊಟ್ಟಿದ್ದಾರೆ. ನಾನು ರಾಜಕಾರಣಕ್ಕೆ ಬಂದದ್ದು ಲೇಟ್. ನಾನು ಕುಮಾರಸ್ವಾಮಿ ಗಿಂತಾ ಸೀನಿಯರ್ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಆದ್ರೆ ಚನ್ನಪಟ್ಟಣಕ್ಕೂ ನನಗೂ ಸಂಬಂಧ ಈಗ ಪ್ರಾರಂಭವಾಗಿಲ್ಲ,1985ರಲ್ಲೆ ದೇವೇಗೌಡರ (Devegowda) ಚುನಾವಣಾ ಉಸ್ತುವಾರಿ ನಾನು ವಹಿಸಿದ್ದೆ ಎಂದು ತಿರುಗೇಟು ಕೊಟ್ರು.