ಮನೆ ಕೆಲಸದಾಕೆಯ ಕಿಡ್ನಾಪ್ (Kidnap) ಮಾಡಿದ ಆರೋಪದ ಕೇಸ್ ಗೆ ಸಂಬಂಧಪಟ್ಟಂತೆ ಇಂದು ಭವಾನಿ ರೇವಣ್ಣ (Bhavani revanna) ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
![](https://pratidhvani.com/wp-content/uploads/2024/05/bhavani-revanna-1-1024x576.webp)
ತಮ್ಮ ವಕೀಲರ ಮೂಲಕ ಹೈಕೋರ್ಟ್ ಗೆ (Highcourt) ಅರ್ಜಿ ಸಲ್ಲಿಸಿರುವ ಭವಾನಿ ರೇವಣ್ಣ ಜಾಮೀನಿಗಾಗಿ ಮತ್ತೊಂದು ಪ್ರಯತ್ನ ನಡೆಸಿದ್ದಾರೆ. ಸೆಷನ್ಸ್ ಕೋರ್ಟ್ (Sessions court) ನಲ್ಲಿ ಬೇಲ್ ಸಿಗದ ಕಾರಣ,ಆದೇಶ ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ಸೆಷನ್ಸ್ ಕೋರ್ಟ್ ನಲ್ಲಿ ಜಾಮೀನು ಅರ್ಜಿ ವಜಾ ಆಗಿತ್ತು , ಹೀಗಾಗಿ ಹೈಕೋರ್ಟ್ ಮೊರೆ ಹೋಗಿದ್ದು, ಇಂದೇ ಅರ್ಜಿಯ ವಿಚಾರಣೆಗೆ ಬರುವ ಸಾಧ್ಯತೆ ಇದೆ. ಸದ್ಯ ಭವಾನಿ ರೇವಣ್ಣ ತಲೆಮರೆಸಿಕೊಂಡಿದ್ದು, ಇಂದಿನ ಬೆಳವಣಿಗೆ ನೋಡಿಕೊಂಡು ಮುಂದಿನ ಹೆಜ್ಜೆ ನಿರ್ಧರಿಸಲಿದ್ದಾರೆ.