14 ವರ್ಷದ ಬಾಲಕಿಗೆ ಮಧ್ಯ ಕುಡಿಸಿ ಅತ್ಯಾಚಾರ ಮಾಡಿದ ಬ್ರಿಟನ್ ಫುಟ್ಬಾಲ್ ಮಾಜಿ ಆಟಗಾರ ಟೈರೆಲ್ ರಾಬಿನ್ಸನ್ ಗೆ ಅಲ್ಲಿನ ನ್ಯಾಯಾಲಯ ಜನವರಿ27 ರಂದು ವಿಚಾರಣೆ ನಡೆಸಿ ಮೂರುವರೆ ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ ಎಂದು ಆದೇಶ ಹೊರಡಿಸಿದೆ.
ಬ್ರಿಟನ್ನ ಫುಟ್ಬಾಲ್ ಆಟಗಾರ ರಾಬಿನ್ಸನ್(23ವರ್ಷ) ಲೈಂಗಿಕ ದೌರ್ಜನ್ಯದ ಆರೋಪದಡಿ ಆಗಸ್ಟ್ 2018 ರಲ್ಲಿ ಬಂಧಿಸಲಾಗಿತ್ತು. 14 ವರ್ಷದ ಬಾಲಕಿಗೆ ಓಡ್ಕಾ ಕುಡಿಸಿ ಅತ್ಯಾಚಾರ ವೆಸಗಿದ್ದ, ಜೊತೆಗೆ ಅಸಭ್ಯ ಪೋಟೋಗಳನ್ನು ಸ್ನ್ಯಾಪ್ಚಾಟ್ ಮೂಲಕ ಹಂಚಲಾಗಿತ್ತು. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ನಂತರ ಪೊಲೀಸರು ತನಿಖೆ ನಡೆಸಿ ಆತನನ್ನು ಬಂಧಿಸಿದ್ದರು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಹಿಂದೆ ಬಾಲಕಿಯ ಪೋಟೊಗಳನ್ನು ನಾನೇ ಶೇರ್ ಮಾಡಿದ್ದು ಎಂದು ಆರೋಪಿ ನ್ಯಾಯಾಲಕ್ಕೆ ತಿಳಿಸಿದ್ದ, ಇದೀಗ ನಾನೇ ಬಾಲಕಿಗೆ ಮದ್ಯ ಕುಡಿಸಿ ಅತ್ಯಾಚಾರ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ರಾಬಿನ್ಸನ್ನ ಬಂಧನದ ನಂತರವೇ ಅಲ್ಲಿನ ಲೀಗ್ ಟು ಬ್ರಾಡ್ಫೋರ್ಡ್ ಸಿಟಿ ಫುಟ್ಬಾಲ್ ಕ್ಲಬ್ ಆಟಗಾರನನ್ನು ಕಾರ್ಯವೈಖರಿಯಿಂದ ವಜಾಗೊಳಿಸಲಾಗಿದೆ ಮತ್ತು ರಾಬಿನ್ಸನ್ ನೊಂದಿಗೆ ಮಾಡಿಕೊಂಡ ಒಪ್ಪಂದಗಳನ್ನು ವಜಾಗೊಳಿಸಲಾಗಿದೆ ಎಂದು ತಿಳಿಸಿದೆ.
ಜನವರಿ27 ರಂದು ಬ್ರಿಟನ್ ನ್ಯಾಯಾಲಯ ಅಂತಿಮ ವಿಚಾರಣೆ ನಡೆಸಿ ಅಪರಾಧಿಗೆ ಮೂರುವರೆ ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸಿದೆ.