ಮನುಷ್ಯನ ದೇಹದಲ್ಲಿ ಕಿಡ್ನಿ ಕೂಡ ಪ್ರಮುಖ ಅಂಗ ಹೆಚ್ಚು ಹೆಚ್ಚು ಜನಕ್ಕೆ ಕಿಡ್ನಿ ಗೆ ಸಂಬಂಧಪಟ್ಟ ಸಾಕಷ್ಟು ಸಮಸ್ಯೆಗಳಿವೆ. ಕಿಡ್ನಿ ಆರೋಗ್ಯದ ಬಗ್ಗೆ ಪ್ರತಿಯೊಬ್ಬರೂ ಕೂಡ ಕಾಳಜಿ ವಹಿಸಿದು ಅಗತ್ಯ. ಇನ್ನು ನಾವು ಸೇವಿಸುವಂತಹ ಆಹಾರದಲ್ಲಿಯೂ ಕೂಡ ನಮ್ಮ ಆರೋಗ್ಯದಲ್ಲಿ ಏರುಪೇರು ಆಗುವಂತ ಚಾನ್ಸಸ್ ಜಾಸ್ತಿ ಇರುತ್ತದೆ.ಸೇವಿಸುವಂತಹ ಕೆಲವು ಪದಾರ್ಥಗಳು ಕಿಡ್ನಿ ಮೇಲೆ ಒತ್ತಡವನ್ನು ಹಾಕುತ್ತದೆ ಅಂತಹ ಅಂತಹ ಪದಾರ್ಥಗಳನ್ನು ಅವಾಯ್ಡ್ ಮಾಡುವುದು ಉತ್ತಮ..ಹಾಗಿದ್ರೆ ಆ ಫುಡ್ ಯಾವುವು?

ಸಂಸ್ಕರಿಸಿದ ಮಾಂಸ
ಕಿಡ್ನಿ ಆರೋಗ್ಯಕ್ಕೆ ಸಂಸ್ಕರಿಸಿದ ಮಾಂಸವನ್ನು ಸೇವಿಸುವುದು ಒಳ್ಳೆಯದಲ್ಲ..ಅದ್ರಲ್ಲೂ ಬೇಕನ್, ಸಾಸೇಜ್ ನಂತಹ ಪೂರ್ವಸಿದ್ಧ ಮಾಂಸಗಳಲ್ಲಿ ಸೋಡಿಯಂ ಮತ್ತು ಸಂರಕ್ಷಕಗಳು ಅಧಿಕವಾಗಿರುತ್ತವೆ.ಇದು ಕಿಡ್ನಿಗೆ ಒಳ್ಳೆಯದಲ್ಲ.
ಸಕ್ಕರೆ ಪಾನಕ
ಸಕ್ಕರೆ ಅಂಶ ಹೆಚ್ಚಿರುವಂತಹ ಪಾನಕಗಳನ್ನ ಸೇವಿಸುವುದು ಕೂಡ ಒಳಿತಲ್ಲ. ಅದರಲ್ಲೂ ಸ್ಪೋರ್ಟ್ಸ್ ಡ್ರಿಂಕ್, ಕಾಫಿ, ಟೀ ಹಾಗೂ ಅಂತ ಪದಾರ್ಥ ಕೂಡ ಒಳ್ಳೆಯದಲ್ಲ .

ಬೇಕಡ್ ಐಟಂ
ಕೇಕ್‌ಗಳು, ಕುಕೀಸ್ ಮತ್ತು ಪೇಸ್ಟ್ರಿಗಳಲ್ಲಿ ಸಕ್ಕರೆ ಮತ್ತು ಅನಾರೋಗ್ಯಕರ ಕೊಬ್ಬು ಅಧಿಕವಾಗಿರುತ್ತದೆ.ಇದು ಕಿಡ್ನಿ ಆರೋಗ್ಯವನ್ನು ಹದಗೆಡಿಸುತ್ತದೆ.
ಬಾಳೆಹಣ್ಣು
ಬಾಳೆಹಣ್ಣು ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು..ಆದ್ರೆ ಅದ್ರಲ್ಲಿ ಪೊಟಾಷಿಯಂ ಅಂಶ ಹೆಚ್ಚಿರುತ್ತದೆ. ಮೂತ್ರಪಿಂಡದ ಕಾಯಿಲೆ ಇದ್ದರೆ ಅವುಗಳ ಸೇವನೆಯನ್ನು ಮಿತಿಗೊಳಿಸಿ ಅಥವಾ ತಪ್ಪಿಸಿ.

ಆವಕಾಡೊಗಳು, ಸಿಹಿ ಗೆಣಸು, ಹಾಲಿನ ಉತ್ಪನ್ನಗಳು, ಫ್ರೈಡ್ ಆಹಾರಗಳು, ಕೆಂಪು ಮಾಂಸ ಈ ಪದಾರ್ಥಗಳನ್ನು ಮಿತಿಗೊಳಿಸುವುದು ಉತ್ತಮ.






