• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, February 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಮಡಿಕೇರಿ | ದಾಖಲಾತಿ ಪಡೆಯದೇ ಕೆಲಸ ಕೊಡದಿರಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಪ್ರತಿಧ್ವನಿ by ಪ್ರತಿಧ್ವನಿ
August 24, 2024
in Top Story, ಇತರೆ / Others, ಕರ್ನಾಟಕ
0
ಮಡಿಕೇರಿ | ದಾಖಲಾತಿ ಪಡೆಯದೇ ಕೆಲಸ ಕೊಡದಿರಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
Share on WhatsAppShare on FacebookShare on Telegram

ಮಡಿಕೇರಿ: ಅಸ್ಸಾಂ ಮಾತ್ರವಲ್ಲ ಹೊರ ರಾಜ್ಯದಿಂದ ಬಂದ ಯಾರಿಗೇ ಆಗಲಿ ಕೆಲಸ ಕೊಡುವುದಕ್ಕೂ ಮುನ್ನ ಅವರಿಂದ ಅಗತ್ಯ ದಾಖಲಾತಿಗಳನ್ನು ಪಡೆದು ಸಂಪೂರ್ಣ ವಿವರಗಳನ್ನು ದಾಖಲಿಸಿಕೊಂಡಿರಬೇಕು. ಇಲ್ಲದಿದ್ದರೆ, ಆ ಕಾರ್ಮಿಕರಿಂದ ಯಾವುದಾದರೂ ಅಪರಾಧ ಚಟುವಟಿಕೆಗಳು ನಡೆದರೆ ತೋಟದ ಮಾಲೀಕರ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ರಾಮರಾಜನ್ ಎಚ್ಚರಿಸಿದರು.

ADVERTISEMENT

ಎರಡು ಅಪರಾಧ ಚಟುವಟಿಕೆಗಳನ್ನು ಅತಿ ಶೀಘ್ರವಾಗಿ ಬೇಧಿಸಿರುವ ಸಂಬಂಧ ಇಲ್ಲಿನ ನಗರ ಠಾಣೆಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.ಇಲ್ಲಿನ ಕೋಟೆ ಮಾರಿಯಮ್ಮ ದೇಗುಲದಲ್ಲಿ ಕಳ್ಳತನ ಮಾಡಿದ ಇಬ್ಬರು ಆರೋಪಿಗಳೂ ಅಸ್ಸಾಂ ರಾಜ್ಯದವರು. ಜೊತೆಗೆ, ಅಸ್ಸಾಂನಿಂದ ಬಂದವರಿಂದ ಹೆಚ್ಚು ಅಪರಾಧ ಪ್ರಕರಣಗಳು ನಡೆಯುತ್ತಿವೆ. ಹೀಗಾಗಿ, ಇಂತಹ ಕ್ರಮ ಅನಿವಾರ್ಯ ಎಂದರು.

‘ಅಸ್ಸಾಂನವರು ಎಂದು ಹೇಳಿಕೊಂಡು ಬಾಂಗ್ಲಾದೇಶದವರು ಬಂದಿರುವ ಕುರಿತು ಯಾವುದೇ ಮಾಹಿತಿ ಇಲ್ಲ’ ಎಂದು ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ‘ಯಾವುದೇ ವ್ಯಕ್ತಿಯ ಸಂಬಂಧ ಬಾಂಗ್ಲಾದೇಶಿಗರು ಎಂಬ ಅನುಮಾನ ಬಂದರೆ ಕೂಡಲೇ ಮಾಹಿತಿ ನೀಡಬೇಕು’ ಎಂದು ಅವರು ಮನವಿ ಮಾಡಿದರು.

ಅಸ್ಸಾಂನಿಂದಾಗಲಿ ಅಥವಾ ಭಾರತದ ಯಾವುದೇ ರಾಜ್ಯದಿಂದಾಗಲಿ ಕಾರ್ಮಿಕರನ್ನು ಬರಬೇಡಿ ಎಂದು ಹೇಳುವುದು ಸರಿಯಲ್ಲ. ಸಂವಿಧಾನ ದೇಶದ ಎಲ್ಲಿ ಬೇಕಾದರೂ ವಾಸಿಸುವ, ಕೆಲಸ ಮಾಡುವ ಹಕ್ಕು ನೀಡಿದೆ. ಪೊಲೀಸರು ಯಾರನ್ನೂ ತಡೆಯಲು ಸಾಧ್ಯವಿಲ್ಲ. ಆದರೆ, ಕೆಲಸ ಕೊಡುವವರು ತಾವು ಯಾರಿಗೆ ಕೆಲಸ ಕೊಡುತ್ತಾರೋ ಅವರಿಂದ ದಾಖಲಾತಿಗಳನ್ನು ಪಡೆದುಕೊಳ್ಳಬೇಕು’ ಎಂದು ಹೇಳಿದರು.

‘ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಸಂಪೂರ್ಣ ವಿಳಾಸ, ಅವರ ಸಂಬಂಧಿಕರ ಮೊಬೈಲ್ ಸಂಖ್ಯೆಗಳನ್ನು ಪಡೆದುಕೊಳ್ಳಬೇಕು. ಆ ಸಂಖ್ಯೆಗಳು ಸರಿ ಇದೆಯೇ ಎಂದು ಪರಿಶೀಲಿಸಿಕೊಂಡಿರಬೇಕು. ಎಲ್ಲವೂ ಖಚಿತವಾದ ನಂತರವಷ್ಟೇ ಕೆಲಸ ಕೊಡಬೇಕು’ ಎಂದು ಅವರು ತಿಳಿಸಿದರು.

‘ಒಂದು ವೇಳೆ ತೋಟದಲ್ಲಿರುವ ಹೊರರಾಜ್ಯದ ಕಾರ್ಮಿಕರಿಂದ ಯಾವುದಾದರೂ ಅಪರಾಧ ಕೃತ್ಯಗಳು ನಡೆದರೆ, ಆ ಕಾರ್ಮಿಕರನ್ನು ಪತ್ತೆ ಮಾಡಲು ನಮಗೆ ಮಾಲೀಕರು ಕಾರ್ಮಿಕರ ಅಗತ್ಯ ದಾಖಲಾತಿಗಳನ್ನು ನೀಡದೇ ಹೋದರೆ, ಮಾಲೀಕರ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದು. ಹಾಗಾಗಿ, ಕಡಿಮೆ ಕೂಲಿ ಎಂದು ಮಾರು ಹೋಗಿ ವಿಳಾಸ, ದಾಖಲಾತಿ ಇಲ್ಲದೇ ಯಾವುದೇ ಕಾರಣಕ್ಕೂ ಕೆಲಸ ಕೊಡಬಾರದು’ ಎಂದು ಸ್ಪಷ್ಟವಾಗಿ ಸೂಚಿಸಿದರು.

ದೇವಸ್ಥಾನ ಕಳವು ಅಸ್ಸಾಂನ ಇಬ್ಬರು ಬಂಧನ ಮಡಿಕೇರಿಯ ಕೋಟೆ ಮಾರಿಯಮ್ಮ ದೇಗುಲದಲ್ಲಿ ಆ. 16ರಂದು ಮಧ್ಯರಾತ್ರಿ ಕಳವು ಮಾಡಿದ್ದ ಅಸ್ಸಾಂನ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಅಲ್ತಾಬ್ ಆಲಿ (27) ಹಾಗೂ ಮೀರ್ ಹುಸೇನ್ (36) ಬಂಧಿತರು. ಇವರ ಪೈಕಿ ಅಲ್ತಾಬ್ ಆಲಿ 10 ವರ್ಷಗಳಿಂದ ಕೊಡಗಿನಲ್ಲೆ ವಾಸವಿದ್ದ. ಸದ್ಯ ತನ್ನ ಸಂಬಂಧಿಕರ ಜೊತೆಯಲ್ಲಿ ಆತ ಕಾಂತೂರು – ಮೂರ್ನಾಡುವಿನಲ್ಲಿ ತೋಟವೊಂದರ ಲೈನ್‌ಮನೆಯಲ್ಲಿದ್ದ. ಈತ ಕಳವಿಗಾಗಿಯೇ ಅಸ್ಸಾಂನಿಂದ ಬಂದಿದ್ದ ಮೀರ್ ಹುಸೇನ್ ಜೊತೆ ಸೇರಿ ಕೃತ್ಯ ಎಸಗಿದ್ದ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದರು. ಕಳವು ಮಾಡಿದ್ದ 3 ಗ್ರಾಂ ತೂಕದ ಚಿನ್ನದ ಮಾಂಗಲ್ಯ 111 ಗ್ರಾಂ ಬೆಳ್ಳಿಯ ಕಿರೀಟ 59 ಗ್ರಾಂ ತೂಕದ ಬೆಳ್ಳಿಯ ದೃಷ್ಟಿಬೊಟ್ಟು ಹಾಗೂ ಹುಂಡಿಯಲ್ಲಿದ್ದ ₹ 95501 ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

Tags: #police departmentHome minister Dr G Parameshwara
Previous Post

ಪೆಪೆಗೆ ಬಲ ನೀಡಿದ ಭೀಮ:ಕೆಲವು ಮಾತುಕಥೆ..!

Next Post

ಒಂದೇ ಮಹಿಳೆಗೆ ಅಪ್ಪ-ಮಗ ನಿಂದ ಲೈಂಗಿಕ ದೌರ್ಜನ್ಯ ! ಎಸ್.ಐ.ಟಿ ತನಿಖೆಯಲ್ಲಿ ಆರೋಪ ಸಾಬೀತು ! 

Related Posts

ಕೇಳಚಂದ್ರ ಫೌಂಡೇಷನ್‌ ನಿಂದ ಕೌಶಲ್ಯ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ
Top Story

ಕೇಳಚಂದ್ರ ಫೌಂಡೇಷನ್‌ ನಿಂದ ಕೌಶಲ್ಯ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ

by ಪ್ರತಿಧ್ವನಿ
February 10, 2026
0

  ಬೆಂಗಳೂರು, ಫೆ. 10, 2026: ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಕೆ.ಜಿ. ಹಳ್ಳಿಯ ಕೇಳಚಂದ್ರ ಕೌಶಲ್ಯ ಅಭಿವೃದ್ಧಿ ಕೇಂದ್ರದಲ್ಲಿ ವಿವಿಧ ಕೌಶಲಗಳ ತರಬೇತಿ ಪೂರ್ಣಗೊಳಿಸಿದ ಮಹಿಳೆಯರಿಗೆ ಕೇಳಚಂದ್ರ...

Read moreDetails
ಅಯೋಧ್ಯೆ ರಾಮ ಮಂದಿರದ  ದಾಳಿಗೆ ಸಂಚು ರೂಪಿಸಿದ್ದ ಉಗ್ರ ಅಬ್ದುಲ್ ರೆಹ್ಮಾನ್  ಹತ್ಯೆ..!

ಅಯೋಧ್ಯೆ ರಾಮ ಮಂದಿರದ  ದಾಳಿಗೆ ಸಂಚು ರೂಪಿಸಿದ್ದ ಉಗ್ರ ಅಬ್ದುಲ್ ರೆಹ್ಮಾನ್  ಹತ್ಯೆ..!

February 10, 2026
RAICHURU:ಅಧಿಕಾರಿಗಳ ಎಡವಟ್ಟು: ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಗೊಂದಲ

RAICHURU:ಅಧಿಕಾರಿಗಳ ಎಡವಟ್ಟು: ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಗೊಂದಲ

February 8, 2026
ʼರಾಯರ ದರ್ಶನʼ: ರಜನಿಕಾಂತ್, ಶಿವಣ್ಣ ಸೇರಿದಂತೆ 25ಕ್ಕೂ ಹೆಚ್ಚು ತಾರೆಯರ ಮಹಾಸಂಗಮ

ʼರಾಯರ ದರ್ಶನʼ: ರಜನಿಕಾಂತ್, ಶಿವಣ್ಣ ಸೇರಿದಂತೆ 25ಕ್ಕೂ ಹೆಚ್ಚು ತಾರೆಯರ ಮಹಾಸಂಗಮ

February 8, 2026
ಜಿ.ಟಿ ದೇವೇಗೌಡ ಈಗ ಮಹಾನ್ ನಾಯಕರ ಜೊತೆ ಇದ್ದಾರೆ: ಕುಮಾರಸ್ವಾಮಿ ವಾಗ್ದಾಳಿ

ಜಿ.ಟಿ ದೇವೇಗೌಡ ಈಗ ಮಹಾನ್ ನಾಯಕರ ಜೊತೆ ಇದ್ದಾರೆ: ಕುಮಾರಸ್ವಾಮಿ ವಾಗ್ದಾಳಿ

February 8, 2026
Next Post
ಒಂದೇ ಮಹಿಳೆಗೆ ಅಪ್ಪ-ಮಗ ನಿಂದ ಲೈಂಗಿಕ ದೌರ್ಜನ್ಯ ! ಎಸ್.ಐ.ಟಿ ತನಿಖೆಯಲ್ಲಿ ಆರೋಪ ಸಾಬೀತು ! 

ಒಂದೇ ಮಹಿಳೆಗೆ ಅಪ್ಪ-ಮಗ ನಿಂದ ಲೈಂಗಿಕ ದೌರ್ಜನ್ಯ ! ಎಸ್.ಐ.ಟಿ ತನಿಖೆಯಲ್ಲಿ ಆರೋಪ ಸಾಬೀತು ! 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada