ಭಾರತದ ರಾಜಕಾರಣದಲ್ಲಿ ಹಲ್ ಚಲ್ ಸೃಷ್ಟಿ ಪ್ರಜ್ವಲ್ ರೇವಣ್ಣ ವಿಡಿಯೋಗಳು ಬಿಜೆಪಿ ಹಾಗು ಜೆಡಿಎಸ್ ಪಕ್ಷವನ್ನು ಮುಜುಗರಕ್ಕೆ ಈಡು ಮಾಡಿದೆ. ಆದರೆ ಕರ್ನಾಟಕದಲ್ಲಿ ನಡೆಯುತ್ತಿರುವ ಎಸ್ಐಟಿ ತನಿಖೆಯಲ್ಲಿ ಪ್ರಜ್ವಲ್ ರೇವಣ್ಣಗೆ ನೋಟಿಸ್ ಕೊಡಲಾಗಿದೆ. ಆದರೆ ಒಂದು ವಾರ ಕಾಲಾವಕಾಶ ಕೋರಲಾಗಿತ್ತು. ಆದರೆ ಎಸ್ಐಟಿ ಈ ಮನವಿಯನ್ನು ತಿರಸ್ಕಾರ ಮಾಡಿದೆ. ಈ ನಡುವೆ ಪ್ರಜ್ವಲ್ ರೇವಣ್ಣ ಭಾರತಕ್ಕೆ ಬರಲು ವಿಮಾನದ ಟಿಕೆಟ್ ಬುಕ್ ಮಾಡಿರುವುದು ಬಯಲಾಗಿದೆ.
ಮೇ 15 ರಂದು ಪ್ರಜ್ವಲ್ ರೇವಣ್ಣ ಭಾರತಕ್ಕೆ ವಾಪಸ್ ಬರುವುದಕ್ಕೆ ವಿಮಾನದ ಟಿಕೆಟ್ ಬುಕ್ಕಿಂಗ್ ಆಗಿದೆ. ಜರ್ಮನಿಯ ಮ್ಯೂನಿಚ್ನಿಂದ ಬೆಂಗಳೂರಿಗೆ ರಿಟರ್ನ್ ಟಿಕೆಟ್ ಬುಕ್ ಆಗಿದೆ. ಮೇ 15ರ ಮಧ್ಯಾಹ್ನ 12:15ಕ್ಕೆ ಮ್ಯೂನಿಚ್ನಿಂದ ಹೊರಡಲಿರೋ ವಿಮಾನ, ಮೇ16 ರ ರಾತ್ರಿ 1.30ಕ್ಕೆ ಬೆಂಗಳೂರಿಗೆ ಬಂದಿಳಿಯಲಿದ್ದಾರೆ.
ಜರ್ಮನಿಯ ಮ್ಯೂನಿಚ್ ವಿಮಾನ ನಿಲ್ದಾಣದಿಂದ ಟಿಕೆಟ್ ಬುಕ್ ಆಗಿದ್ದು ಟಿಕೆಟ್ ಪ್ರತಿ Prathidvanige.com ಗೆ ಲಭ್ಯವಾಗಿದೆ. ಪ್ರಜ್ವಲ್ ರೇವಣ್ಣ ಹೆಸರಿನಲ್ಲೇ ಟಿಕೆಟ್ ಬುಕ್ಕಿಂಗ್ ಆಗಿದೆ. ಆದರೆ ಮೇ 15 ಕ್ಕೆ ಟಿಕೆಟ್ ಬುಕ್ ಆಗಿದ್ರೂ ಕೇವಲ 7 ದಿನಗಳ ಕಾಲಾವಕಾಶ ಕೇಳಿದ್ದು ಯಾಕೆ..? ಅನ್ನೋ ಅನುಮಾನ SIT ಅಧಿಕಾರಿಗಳನ್ನೂ ಕಾಡುತ್ತಿದೆ.
ಈ ಟಿಕೆಟ್ ಮೊದಲೇ ಬುಕ್ಕಿಂಗ್ ಆಗಿರುವ ಸಾಧ್ಯತೆ ಇದೆ. ಅಥವಾ ವಿಚಾರಣೆಗೆ ಕಾಲಾವಕಾಶ ಕೊಟ್ಟರೆ ಟಿಕೆಟ್ ಕ್ಯಾನ್ಸಲ್ ಮಾಡ್ಕೊಂಡು ಮುಂಗಡವಾಗಿ ಬರುವ ಉದ್ದೇಶ ಇದ್ದರೂ ಇರಬಹುದು. ಅಥವಾ ಮೊದಲೇ ಟಿಕೆಟ್ ಬುಕ್ಕಿಂಗ್ ಆಗಿದ್ದರಿಂದ ಮೇ 15ಕ್ಕೆ ನಾನು ಬಂದಿದ್ದೇನೆ ಎಂದು ಸಮಜಾಯಿಸಿ ನೀಡುವುದಕ್ಕೂ ಬಳಸಬಹುದು ಎನ್ನಲಾಗ್ತಿದೆ.