ಕಾಂಗ್ರೆಸ್‌ನಿಂದ ಅಡ್ಡಮತದಾನ ಅಥವಾ ಅನರ್ಹ ಮತ ನಿರೀಕ್ಷೆ
ರಾಜ್ಯಸಭೆ ಚುನಾವಣಾ (rajyasabha election) ಅಖಾಡಕ್ಕೆ 5ನೇ ಅಭ್ಯರ್ಥಿ ಫಿಕ್ಸ್ ಆಗುವ ಸಾಧ್ಯತೆ ದಟ್ಟವಾಗಿದೆ. ಜೆಡಿಎಸ್ನಿಂದ (JDS) ಇಂದು ಕುಪ್ಪೇಂದ್ರ ರೆಡ್ಡಿ (kupendra reddy) ನಾಮಪತ್ರ ಸಲ್ಲಿಸುವ ಸಾಧ್ಯತೆಗಳಿವೆ. 5ನೇ ಅಭ್ಯರ್ಥಿ ಕಣಕ್ಕಿಳಿದ್ರೆ ರಾಜ್ಯಸಭೆ ಚುನಾವಣೆ ಮತ್ತಷ್ಟು ರಂಗೇರಲಿದೆ.
ಬಿಜೆಪಿಯಿಂದ ವಿ.ಸೋಮಣ್ಣ (v sommanna) ಅಥವಾ ಕುಪೇಂದ್ರ ರೆಡ್ಡಿ ಆಯ್ಕೆ ಮಾಡುವ ಸಾಧ್ಯತೆಯಿದೆ ಎನ್ನಲಾಗ್ತಿದೆ. ಆದರೆ 4ನೇ ಅಭ್ಯರ್ಥಿನಾ, 5ನೇ ಅಭ್ಯರ್ಥಿನಾ ಅಂತ ನನಗೆ ಗೊತ್ತಿಲ್ಲ. ದೇವೇಗೌಡ್ರು (h.d.devegowda) ಮತ್ತು ಕುಮಾರಸ್ವಾಮಿ (h.d.kumarswamy) ಫೈನಲ್ ಮಾಡ್ತಾರೆ ಎಂದಿದ್ದಾರೆ ಕುಪೇಂದ್ರ ರೆಡ್ಡಿ.
ಕುಪ್ಪೇಂದ್ರ ರೆಡ್ಡಿ ಕಣಕ್ಕಿಳಿಸಲು ಜೆಡಿಎಸ್ನಿಂದ ಎಲ್ಲಾ ತಯಾರಿಗಳು ನಡೆದಿವೆ ಎನ್ನಲಾಗ್ತಿದೆ. ಮೈತ್ರಿಪಕ್ಷ ಬಿಜೆಪಿ ವರಿಷ್ಠರ ಒಪ್ಪಿಗೆಗಾಗಿ ಕಾಯ್ತಿದ್ದಾರಂತೆ JDS ನಾಯಕರು. ಬಿಜೆಪಿ ವರಿಷ್ಠರು ಒಪ್ಪಿದ್ರೆ ಇಂದು ಕುಪೇಂದ್ರ ರೆಡ್ಡಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ವಿಧಾನಸಭೆಯ ಒಟ್ಟು ಸದಸ್ಯರ ಸಂಖ್ಯೆ 224 ಇದ್ದು, ರಾಜ್ಯಸಭೆ ಆಯ್ಕೆಗೆ ಬೇಕಾದರೆ ಒಬ್ಬರಿಗೆ ಕನಿಷ್ಠ 45 ಮತಗಳ ಅವಶ್ಯಕತೆ ಇರುತ್ತದೆ. 135 ಶಾಸಕರ ಬಲ ಹೊಂದಿರುವ ಕಾಂಗ್ರೆಸ್ ಈಗಾಗಲೇ ಮೂವರು ಅಭ್ಯರ್ಥಿಗಳ ಆಯ್ಕೆ ಮಾಡಿದೆ.
ಇನ್ನು ಬಿಜೆಪಿ 66 ಶಾಸಕರನ್ನು ಹೊಂದಿರುವ ಬಿಜೆಪಿ ಕೂಡ ಓರ್ವ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಆದರೆ ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಒಟ್ಟು ಗೂಡಿದ್ರೆ 85 ಮತಗಳು ಆಗುತ್ತವೆ. ಬಿಜೆಪಿ ಮೊದಲ ಅಭ್ಯರ್ಥಿ 45 ಮತ ಪಡೆದ ಬಳಿಕ ಇನ್ನೂ 40 ಮತ ಉಳಿಯುತ್ತವೆ. ಇಬ್ಬರು ಪಕ್ಷೇತರರು ಬೆಂಬಲ ಪಡೆದರೆ 42 ಮತಗಳಾಗುತ್ತವೆ. ಕಾಂಗ್ರೆಸ್ನ ಒಂದಿಬ್ಬರು ಅಡ್ಡಮತದಾನ ಮಾಡಿದರೆ ಅಥವಾ ಒಂದಿಬ್ಬರು ಶಾಸಕರ ಮತಗಳು ಅನರ್ಹ ಆದರೆ 5ನೇ ಅಭ್ಯರ್ಥಿ ಗೆಲ್ಲುವ ಸಾಧ್ಯತೆ ಇದೆ. ಇಂದು ನಾಮಪತ್ರ ಸಲ್ಲಿಕೆ ಆಗಲಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
#rajyasabhaelection #political #jds #bjp #bengaluru