ಅಯ್ಯೋಧ್ಯೆ: ಕೋಟ್ಯಾಂತರ ಭಕ್ತರು ಕಾಯುತ್ತಿರುವ ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದು, ದೇಶದಲ್ಲೆಡೆ ಸಂಭ್ರಮದ ವಾತಾವರಣ ನಿರ್ಮಾಣವಾಗುತ್ತಿದೆ.

ಈ ನಡುವೆ ಜನವರಿ 22 ರಂದು ಪ್ರಾಣ ಪ್ರತಿಷ್ಠಾಪನೆಗೊಳ್ಳಲಿರುವ ಅಯೋಧ್ಯೆಯ ರಾಮಮಂದಿರದಲ್ಲಿನ ಶ್ರೀ ರಾಮಲಲ್ಲಾನ ಮೊದಲ ಚಿತ್ರ ಹೊರಬಿದ್ದಿದೆ. ಇನ್ನು ಮೈಸೂರು ಮೂಲದ ಅರುಣ್ ಯೋಗಿರಾಜ್ ಅವರ ಕೆತ್ತನೆಯಲ್ಲಿ ಮೂಡಿ ಬಂದಿರುವ ಮೂರ್ತಿ ಇದಾಗಿದ್ದು, ನಿನ್ನೆ ಬಿಗಿ ಭದ್ರತೆಯಲ್ಲಿ ಈ ಮೂರ್ತಿಯನ್ನು ರಾಮಮಂದಿರದೊಳಗೆ ತರಲಾಗಿದೆ. ಆದರೆ ಬಾಲರಾಮನ ಮೂರ್ತಿಯನ್ನು ಸಂಪೂರ್ಣವಾಗಿ ಬಹಿರಂಗಪಡಿಸದೆ ದೇವರ ಮುಖವನ್ನು ಮುಚ್ಚಲಾಗಿದ್ದು, ಇದು ರಾಮನಮೂರ್ತಿಯ ಮುಖದ ಲಕ್ಷಣವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿರುವ ಭಕ್ತಾಧಿಗಳಲ್ಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಇನ್ನು ಜನವರಿ 22 ರಂದು ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನಡೆಯಲಿದ್ದು, ಇಡೀ ದೇಶದ ಜನತೆ ಆ ಕ್ಷಣ ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ.