ರಾಜ್ಯದಲ್ಲಿ ಮೊದಲ ಹಂತದ ಲೋಕಸಭೆ ಚುನಾವಣೆಗೆ ಮತದಾನಕ್ಕೆ (voting) ಕ್ಷಣಗಣನೆ ಶುರುವಾಗಿದೆ. ನಾಳೆ 14 ಲೋಕಸಭಾ ಕ್ಷೇತ್ರಗಳಿಗೆ (14 constituencies) ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಲಿದ್ದು ಸಂಜೆ 6 ಗಂಟೆವರೆಗೂ ನಡೆಯಲಿದೆ. ಈಗಾಗಲೇ ಮತಪೆಟ್ಟಿಗೆಗಳನ್ನು ಮತಗಟ್ಟೆಗೆ ರವಾನಿಸಿ ಮತದಾನಕ್ಕೆ ಸಿದ್ಧತೆ ಮಾಡಲಾಗಿದೆ. ಮಾತ್ರವಲ್ಲದೆ ಮಸ್ಟರಿಂಗ್ ಕೇಂದ್ರಗಳಲ್ಲಿ (mustring centre) ಚುನಾವಣಾ ಸಿಬ್ಬಂದಿಗೆ ಮತದಾನ ಪ್ರಕ್ರಿಯೆ ಹೇಗೆ ನಡೆಸಬೇಕೆಂದು ಮಾರ್ಗದರ್ಶನ ನೀಡಲಾಗಿದೆ.
ಇನ್ನು ನಾಳೆ ಚುನಾವಣೆ ಹಿನ್ನೆಲೆ ಪೊಲೀಸರ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂ (strong room) ಓಪನ್ ಮಾಡಲಾಗಿದೆ. ನಾಳೆ ಮತದಾನಕ್ಕೆ ಬೇಕಾದ ವಿವಿ ಪ್ಯಾಟ್ (VV Pat), ಇವಿಎಂ (EVM) ಹಾಗೂ ಇತರೆ ಸಾಮಾಗ್ರಿಗಳನ್ನು ಬೂತ್ ಲೆವಲ್ ಅಧಿಕಾರಿಗಳಿಗೆ ವಿತರಣೆ ಮಾಡಲಾಗಿದೆ. ಮಾತ್ರವಲ್ಲದೆ ಸಲಕರಣೆಗಳ ಸಮೇತ ಮತಗಟ್ಟೆಗಳಿಗೆ ಸಿಬ್ಬಂದಿ ಇಂದೇ ತೆರಳಿದ್ದಾರೆ. ನಾಳಿನ ಮತದಾನಕ್ಕೆ ಚುನಾವಣಾ ಸಿಬ್ಬಂದಿಗೆ ಮತಗಟ್ಟೆಗಳ ಹಂಚಿಕೆ ಕಾರ್ಯ ನಡೆಸಲಾಗಿದೆ.
ಯಾರು, ಯಾವ ಮತಗಟ್ಟೆಗೆ ತೆರಳಬೇಕು ಎಂಬ ಮಾಹಿತಿ ನೀಡಲಾಗಿದೆ. ಈ ಬಗ್ಗೆ ಬೋರ್ಡ್ ಹಾಕಿ ಚುನಾವಣಾ ಆಯೋಗ ಪ್ರಕಟಣೆ ನೀಡಿದೆ. ಮಾತ್ರವಲ್ಲದೆ ಮಸ್ಟರಿಂಗ್ ಸೆಂಟರ್‌ನಲ್ಲಿ EVM ಡೆಮೊ ಇಟ್ಟಿದೆ. ಸಿಬ್ಬಂದಿಯ ಅನುಮಾನ ಬಗೆಹರಿಸಲು EVMಗಳ ಡೆಮೊ ಮಾಡಲಾಗಿದೆ. ಬೆಂಗಳೂರಿನಲ್ಲಿ ಚುನಾವಣಾ ಸಿಬ್ಬಂದಿ ಪ್ರಯಾಣಕ್ಕೆ 50ಕ್ಕೂ ಹೆಚ್ಚು ಬಿಎಂಟಿಸಿ ಬಸ್‌ಗಳು ಸಿದ್ಧವಾಗಿವೆ. ಈ ಬಗ್ಗೆ ಬೆಂಗಳೂರು (Bangalore) ನಗರ ಡಿಸಿ ದಯಾನಂದ್ ಮಾಹಿತಿ ನೀಡಿದ್ದಾರೆ.