ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಹಾಗೂ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ (Nikhil kumaraswamy) ಮತ್ತು, ಸುರೇಶ್ ಬಾಬು (Suresh babu) ಮೂವರ ವಿರುದ್ಧ ಬೆಂಗಳೂರಿನ ಸಂಜಯ ನಗರ ಪೊಲೀಸ್ ಸ್ಟೇಷನ್ ದೂರು ದಾಕಲಾಗಿದ್ದು, FIR ಮಾಡಲಾಗಿದೆ.

ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ಐಪಿಎಸ್ ಅಧಿಕಾರಿ, ಎಸ್.ಐ.ಟಿ ಐಜಿ ಚಂದ್ರಶೇಖರ್ (IPS officer chandrashekar) ನಡುವಿನ ಹಗ್ಗಜಗ್ಗಾಟ ಈಗ ಕಾನೂನಾತ್ಮಕ ಸ್ವರೂಪ ಪಡೆದಿದೆ. ಕುಮಾರಸ್ವಾಮಿ ಹಾಗೂ ಉಳಿದವರ ವಿರುದ್ಧ ಐಪಿಎಸ್ ಅಧಿಕಾರಿ ಚಂದ್ರಶೇಕರ್ ಸಂಜಯ ನಗರ ಪೊಲೀಸ್ ಸ್ಟೇಷನ್ ನಲ್ಲಿ ದೂರು ದಾಕಲಿಸಿದ್ದಾರೆ.
ಈ ಹಿಂದೆ IPS ಅಧಿಕಾರಿಯನ್ನ ಕೆಣಕಿ HDK ಅಂದು ಸುದ್ದಿಗೋಷ್ಠಿಯಲ್ಲಿ ಆಡಿದ ಮಾತುಗಳು ಅವರಿಗೆ ದೊಡ್ಡ ಸಂಕಷ್ಟ ತಂದಿಟ್ಟಿರುವಂತಿದೆ. ಈ ವೇಳೆ ಐಪಿಎಸ್ ಅಧಿಕಾರಿ ಚಂದ್ರಶೇಖರ್ ವಿರುದ್ಧ ಭ್ರಷ್ಟಾಚಾರ ಮಾಡಿದ್ದ ಕುಮಾರಸ್ವಾಮಿ ಹಿಗ್ಗಾ-ಮುಗ್ಗಾ ವಾಗ್ದಾಳಿ ನಡೆಸಿದ್ದರು. ಈ ಆರೋಪಗಳಿಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದ ಚಂದ್ರಶೇಖರ್ ಬಹಳ ಕಠಿಣ ಪದಗಳನ್ನು ಬಳಸಿ ಕೇಂದ್ರ ಸಚಿವರ ವಿರುದ್ಧ ಸಮರ ಸಾರಿದ್ದರು. ಈಗ ಆ ಸಮರ ಮುಂದುವರೆಯುವಂತೆ ಕಾಣ್ತಿದೆ. ಇದೇ ವಿಚಾರವಾಗಿ ಅಧಿಕಾರಿ ಚಂದ್ರಶೇಖರ್ ದೂರು ದಾಖಲಿಸಿದ್ದಾರೆ.

ಹೌದು, 2006 ರಿಂದ 2008 ರ ಅವಧಿಗೆ ಹೆಚ್‌ಡಿಕೆ ಸಿಎಂ ಆಗಿದ್ದ ಸಂದರ್ಭದಲ್ಲಿ ಶ್ರೀ ಸಾಯಿ ವೆಂಕಟರೇಶ್ವರ ಮಿನರಲ್ಸ್ ಮೈನಿಂಗ್ ಕಂಪೆನಿಗೆ ಬಳ್ಳಾರಿಯಲ್ಲಿ (Bellary) ಅಕ್ರಮವಾಗಿ 550 ಎಕರೆ ಭೂಮಿ ಮಂಜೂರು ಮಾಡಿದ್ದ ಆರೋಪದಲ್ಲಿ ಕುಮಾರಸ್ವಾಮಿ ಮೇಲೆ ಕೇಸ್ ದಾಕಲಾಗಿದ್ದು, ಸದ್ಯ ಈ ಪ್ರಕರಣದಲ್ಲಿ ಕುಮಾರಸ್ವಾಮಿ ಜಾಮೀನಿನ ಮೇಲೆ ಹೊರಗಿದ್ದಾರೆ.
ಹೀಗಾಗಿ ಈಗಾಗಲೇ ಈ ಅಕ್ರಮ ಭೂಮಿ ಮಂಜೂರಾತಿ ಪ್ರಕರಣದಲ್ಲಿ ತನಿಖೆ ನಡೆದು, ವಿಚಾರಣೆಗಳು ಜರುಗಿ ಸದ್ಯ ಕುಮಾರಸ್ವಾಮಿ ಜಾಮೀನು ಪಡೆದು ಸೇಫ್ ಝೋನ್ ನಲ್ಲಿದ್ರು ಮತ್ತೊಂದೆಡೆ ತನಿಖೆ ಮಾತ್ರ ಮುಂದುವರೆದಿತ್ತು. ಆದ್ರೆ ಈ ಪ್ರಕರಣದ ತನಿಖೆ ನಡೆಸುತ್ತಿರುವ ಉನ್ನತ ಅಧಿಕಾರಿಗಳಿಗೆ ಕುಮಾರಸ್ವಾಮಿ ಪರೋಕ್ಷವಾಗಿ ಬೆದರಿಸುವ ಕೆಲಸ ಮಾಡಿದ್ದಾರೆ. ಆ ಮೂಲಕ ತನಿಖಾ ತಂಡದ ಸಿಬ್ಬಂದಿಯ ಸ್ಥೈರ್ಯವನ್ನು ಕುಗ್ಗಿಸುವ ಹುನ್ನಾರ ಮಾಡಿದ್ದಾರೆ. ಹೀಗಾಗಿ ತನಿಖಾ ಸಂಸ್ಥೆಯ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದಾರೆ ಎಂದು ಚಂದ್ರಶೇಖರ್ ದೂರು ದಾಕಲಿಸಿದ್ದಾರೆ.
ಈ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿರುವ ಕುಮಾರಸ್ವಾಮಿ, ಅವರ ಪುತ್ರ ನಿಖಿಲ್ , ಮತ್ತು ಸುರೇಶ್ ಬಾಬು ಮಾತುಗಳು ತನಿಖೆಗೆ, ತನಿಖಾದಿಖಾರಿಗಳಿಗೆ ಬೆದರಿಕೆಯೊಡ್ಡಿದಂತೆ ಇದ್ದು, ಇದ್ರಿಂದ ಕರ್ತವ್ಯಕ್ಕೆ ಅಡ್ಡಿಪಡಿಸುವ ಪ್ರಯತ್ನ ಮಾಡಿರುವುದರಿಂದ ಇದನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಐಪಿಎಸ್ ಅಧಿಕಾರಿ ಚಂದ್ರಶೇಕರ್ ಈ ದೂರು ದಾಖಲಿಸಿದ್ದಾರೆ.











