ಹಗ್ಗ ಜಗ್ಗಾಟದ ನಡುವೆ ಕೊನೆಗೂ ಸುಮಲತಾ (sumalatha) ಅಂಬರೀಶ್ ಇಂದು ಬಿಜೆಪಿ (BJP) ಬಾವುಟ ಹಾರಿಸಿದ್ದಾರೆ ಆ ಮೂಲಕ ಪಕ್ಷ ಸೇರ್ಪಡೆ ಆಗಿದ್ದಾರೆ. ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, (BS Yediyurappa) ಸುಮಲತಾಗೆ ಕೇಸರಿ ಶಾಲು ಹಾಕಿ ತಮ್ಮ ಪಕ್ಷಕ್ಕೆ ಸ್ವಾಗತ ಕೋರಿದ್ರು. ಇನ್ನು ಸುಮಲತಾ ಬಿಜೆಪಿಗೆ ಸೇರ್ಪಡೆ ಆಗೋ ವೇಳೆ ವೇದಿಕೆ ಮೇಲೆ ಮಾಜಿ ಸಿಎಂ. ಬಿಎಸ್ ಯಡಿಯೂರಪ್ಪ, ವಿಪಕ್ಷ ನಾಯಕ ಆರ್.ಅಶೋಕ್(R Ashok) , ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY vijayendra) ಮಾಜಿ ಸಚಿವ ಸಿಟಿ ರವಿ ಉಪಸ್ಥಿತರಿದ್ದರು.

ಸಂಸದೆ ಸುಮಲತಾ ಅಂಬರೀಶ್ ಇಂದು ಬಿಜೆಪಿ ಸೇರ್ಪಡೆಯಾದ ಕುರಿತು ಬಿಜೆಪಿ ಸೇರಿರೋದ್ರಿಂದ ಬಿಜೆಪಿಗೆ ಶಕ್ತಿ ಬಂದಿದೆ. ಇಡೀ ರಾಜ್ಯದಲ್ಲಿ ಶಕ್ತಿ ಬಂದಂತಾಗಿದ್ದು, ಬಿಜೆಪಿ ಎಲ್ಲಾ ಸೀಟುಗಳನ್ನ • ವಿಜಯೇಂದ್ರ ಮಾತನಾಡಿದ್ದಾರೆ. ಮಂಡ್ಯದಲ್ಲಿ ಅಂಬರೀಶ್ ಅವರ ಜನಪ್ರಿಯತೆ, ಸುಮಲತಾ ಅಂಬರೀಶ್ ಅವರ ಕಾರ್ಯ ಜನಪ್ರಿಯತೆ (popularity) ತಂದು ಕೊಟ್ಟಿದೆ. ಈಗ ಅವರು ಸೇರ್ಪಡೆಯಾಗಿರೋದ್ರಿಂದ ಪಕ್ಷ ಬೆಳವಣಿಗೆಯಗಲಿದೆ ಅಂತ ಹೇಳಿದ್ರು.

ಇನ್ನೂ ಬಿಜೆಪಿ ಸೇರ್ಪಡೆ ಬಳಿಕ ಸುಮಲತಾ ಮಾತನಾಡಿ, ಇಂದು ರಾಜಕೀಯ ಜೀವನದಲ್ಲಿ ಮಹತ್ವ ಪಡೆದುಕೊಂಡ ಸುದಿನ. 5 ವರ್ಷಗಳ(5 years) ಹಿಂದೆ ಐತಿಹಾಸಿಕ ಗೆಲುವು ಸಿಕ್ಕಿತ್ತು. ಮಂಡ್ಯದಲ್ಲಿ ಗೆಲುವು ಸಿಕ್ಕಿತ್ತು, ಆ ಚುನಾವಣೆ, ಆ ಸಂದರ್ಭ ಮರೆಯುವಂತಿಲ್ಲ. ಮಂಡ್ಯದ ನನ್ನ ಕಾರ್ಯಕರ್ತರು, ಅಂಬರೀಶ್ ಅಭಿಮಾನಿಗಳು ನನ್ನ ಜೊತೆಗೆ ನಿಂತ್ರು. ಈ 5 ವರ್ಷದ ಪ್ರಯಾಣದಲ್ಲಿ ತುಂಬಾ ಕಲಿತಿದ್ದೇವೆ ಅಂತಾ ಹೇಳಿದ್ರು. ನನಗೆ ಪ್ರೇರಣೆ (Inspiration) ಪ್ರಧಾನಿ ನರೇಂದ್ರ ಮೋದಿ, ಅವ್ರ ಒಂದೊಂದು ಭಾಷಣವೂ ನನಗೆ ಸ್ಪೂರ್ತಿ ಅಂತಾ ಮೋದಿಯನ್ನ ಹಾಡಿ ಹೊಗಳಿದ್ರು.



