ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ವೀರಮರಣವನ್ನಪ್ಪಿದ್ದ ಕ್ಯಾಪ್ಟನ್ ಅರ್ಜುನನ್ನು (Elephant arjuna) ಸಕಲೇಶಪುರ (Sakaleshapura) ತಾಲೂಕಿನ ಯಸಳೂರು ಅರಣ್ಯದ ದಬ್ಬಳ್ಳಿಕಟ್ಟೆಯ ನೆಡುತೋಪಿನಲ್ಲಿ ಸಮಾಧಿ ಮಾಡಲಾಗಿತ್ತು. ಅದರಂತೆ ಅಂಬಾರಿ ಆನೆ ಅರ್ಜುನನ ಸಮಾಧಿ ಸ್ಥಳದಲ್ಲೇ ಇದೀಗ ಸ್ಮಾರಕ ನಿರ್ಮಾಣಕ್ಕೆ ಅರಣ್ಯ ಸಚಿವ ಈಶ್ವರ್ ಖಂಡ್ರೆ (Forest minister eshwar khandre) ನಿನ್ನೆ ಶಂಕುಸ್ಥಾಪನೆ ನೆರವೇರಿಸಿದರು.
ಕಳೆದ 2023 ಡಿಸೆಂಬರ್ 4 ರಂದು (December 4th 2023) ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಅರ್ಜುನ ಸಾವನ್ನಪ್ಪಿದ್ದ. ಜೊತೆಗೆ ಅರ್ಜುನನ ಸಮಾಧಿ ಬಳಿ ಸ್ಮಾರಕ ನಿರ್ಮಾಣ ಮಾಡುವಂತೆ ಆತನ ಅಭಿಮಾನಿಗಳು ಒತ್ತಾಯಿಸಿದ್ದರು.
ಇದೀಗ ಲಕ್ಷಾಂತರ ಅರ್ಜುನನ ಅಭಿಮಾನಿಗಳ ಆಸೆ ಈಡೇರಿದ್ದು, ಸಮರ್ಪಕವಾಗಿ ರಸ್ತೆ ಇಲ್ಲದ ಕಾರಣ ಕೆಸರಿಗದ್ದೆಯಂತಾದ ರಸ್ತೆಯಲ್ಲಿಯೇ ಆಗಮಿಸಿ ಸಚಿವ ಈಶ್ವರ್ ಖಂಡ್ರೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.ಈ ವೇಳೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ರಾಜಣ್ಣ, ಶಾಸಕ ಸಿಮೆಂಟ್ ಮಂಜು, ಸಿಇಒ ಪೂರ್ಣಿಮಾ, ಸಿಸಿಎಫ್ ರವಿಶಂಕರ್ ಉಪಸ್ಥಿತರಿದ್ದರು.