ಬೆಂಗಳೂರು 27 : ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ಇಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆಗಳ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿದ್ದಾರೆ.
ಈ ವೇಳೆ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ತಮ್ಮ ಗ್ರಾಮವಾದ ನಾಗತಿಹಳ್ಳಿಯಲ್ಲಿ ತಾವು ವೈಯಕ್ತಿಕವಾಗಿ ಅಭಿವೃದ್ಧಿ ಪಡಿಸಿರುವ ಗ್ರಂಥಾಲಯವನ್ನು ಗ್ರಾಮ ಪಂಚಾಯತಿ ಅಧೀನಕ್ಕೆ ತೆಗೆದುಕೊಳ್ಳುವಂತೆ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿಯನ್ನ ಮಾಡಿದ್ರು.. ಈ ವೇಳೆ ವಿಚಾರ ಪ್ರಚೋದಕ ಕೃತಿಗಳು ಸೇರಿದಂತೆ ವಿವಿಧ ಪ್ರತಿಷ್ಠಿತ ಲೇಖಕರ ಸುಮಾರು 10,000 ಪುಸ್ತಕಗಳನ್ನು ಗ್ರಂಥಾಲಯ ಹೊಂದಿದೆಯೆಂದು ನಾಗತಿಹಳ್ಳಿ ಸಚಿವರಿಗೆ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಗಣಿ ಗುತ್ತಿಗೆ ಸಂಸ್ಥೆಗಳ ಹಲವು ಸಮಸ್ಯೆಗಳಿಗೆ ಏಕಗವಾಕ್ಷಿ ವ್ಯವಸ್ಥೆ ಮಾದರಿಯಲ್ಲಿ ಬಗೆಹರಿಸಲು ಸಿಎಂ ಸೂಚನೆ
ಸಚಿವ ಶ್ರೀ ಖರ್ಗೆ ಅವರು ಗ್ರಂಥಾಲಯವನ್ನು ಪಂಚಾಯತಿ ವ್ಯಾಪ್ತಿಗೆ ತೆಗೆದುಕೊಳ್ಳಲು ಕ್ರಮ ಕೈಗೊಳ್ಳುವುದಾಗಿ ಮಾಹಿತಿಯನ್ನ ನೀಡಿದ್ದಾರೆ.. ಇನ್ನು ನಾಗತಿಹಳ್ಳಿ ಚಂದ್ರಶೇಖರ್ ಅವರ ಈ ನಿಲುವಿಗೆ ಸಾಕಷ್ಟು ಮಂದಿ ಸಂತಸವನ್ನ ವ್ಯಕ್ತ ಪಡಿಸಿದ್ದು, ಗ್ರಂಥಾಲಯವನ್ನ ನೀಡುತ್ತಿರುವುದು ಒಳ್ಳೆಯ ವಿಚಾರ ಎಂದು ಹಲವರು ಅಭಿಫ್ರಾಯವನ್ನ ವ್ಯಕ್ತ ಪಡಿಸುತ್ತಿದ್ದಾರೆ. ಇನ್ನು ಈ ವೇಳೆ ಕಲಾವಿದ ಶ್ರೀ ಮುತ್ತುರಾಜು ನಾಗತಿಹಳ್ಳಿ ಅವರೊಂದಿಗಿದ್ದರು.