ಬೆಂಗಳೂರು: ವಿಧಾನ ಪರಿಷತ್ ಟಿಕೆಟ್ ಗಾಗಿ ಕಾಂಗ್ರೆಸ್ ನಲ್ಲಿ ದೊಡ್ಡ ಪೈಪೋಟಿ ನಡೆದಿದೆ. ಈ ಮಧ್ಯೆ ಕಾಂಗ್ರೆಸ್ ಹಲವರ ಹೆಸರು ಅಂತಿಮಗೊಳಿಸಲಾಗಿದೆ.
ಹನ್ನೊಂದು ಸ್ಥಾನಗಳ ಪೈಕಿ ಏಳು ಸ್ಥಾನಗಳನ್ನು ಗೆಲ್ಲುವ ಶಕ್ತಿ ಕಾಂಗ್ರೆಸ್ಸಿಗೆ ಇದೆ. ಈ ಮಧ್ಯೆ ಹಲವರ ಹೆಸರನ್ನು ಸಿದ್ಧರಾಮಯ್ಯ ಅವರ ಪುತ್ರ ಯತೀಂದ್ರ, ಸಚಿವ ಭೋಸರಾಜು, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ವಿನಯ್ ಕಾರ್ತಿಕ್ ಗೆ ಈಗಾಗಲೇ ಟಿಕೆಟ್ ಸಿಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.
ಇನ್ನುಲಿದಂತೆ ವಸಂತ್ ಕುಮಾರ್, ಆಘಾ ಸುಲ್ತಾನ್, ವಿ.ಆರ್. ಸುದರ್ಶನ್, ವಿನಯ ಕುಮಾರ್ ಸೊರಕೆ, ವಿಜಯ ಮುಳಗುಂದ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ವೀಣಾ ಕಾಶಪ್ಪನವರ, ಉಗ್ರಪ್ಪ, ಎಸ್.ಆರ್. ಪಾಟೀಲ್, ಕರಡಿ ಸಂಗಣ್ಣ, ವಿ.ಶಂಕರ್ ಸೇರಿದಂತೆ ಹಲವರ ಹೆಸರನ್ನು ಅಂತಿಮಗೊಳಿಸಲಾಗಿದೆ.