ಸದಾ ಅನ್ಯರ ತಪ್ಪು ಹುಡುಕುವ ಸಿದ್ದರಾಮಯ್ಯ ಅವರ ಸುತ್ತ ಪರಮ ಭ್ರಷ್ಟರೇ ತುಂಬಿದ್ದಾರೆ. ಗೋವಿಂದ ರಾಜ್, ಕೆ.ಜೆ.ಜಾರ್ಜ್, ಬೈರತಿ ಸುರೇಶ್, ಡಾ.ಎಚ್.ಸಿ.ಮಹಾದೇವಪ್ಪ, ಕೆಂಪಯ್ಯ, ಜಮೀರ್ ಎಲ್ಲರೂ ತೆರಿಗೆ ಕಳ್ಳರು, ಪರಮ ಭ್ರಷ್ಟರು. ನಿಮ್ಮ ಸುತ್ತಲಿರುವ ಜನರಿಂದ ನೀವು ಎಂಥವರು ಎಂದು ನಿರ್ಧರಿಸಬಹುದಲ್ಲವೇ, ಸಿದ್ದರಾಮಯ್ಯ? ಎಂದು ರಾಜ್ಯ ಬಿಜೆಪಿ ತಮ್ಮ ಅಧಿಕೃತ ಟ್ವೀಟರ್ ಖಾತೆಯಲ್ಲಿ ಟ್ವೀಟ್ ಮಾಡಿ ಪ್ರಶ್ನಿಸಿತ್ತು. ಇದಕ್ಕೆ ಸಕ್ಕತ್ತಾಗೆ ಚಾಟಿ ಬೀಸಿರುವರಾಜ್ಯ ಕಾಂಗ್ರೇಸ್ ಬಿಜೆಪಿಯಲ್ಲಿ ಬಗೆಬಗೆಯ ಯುದ್ಧ ನಡೆಯುತ್ತಿದೆ ಆದರೂ ಕಂಡವರ ಮನೆಯ ಕಿಟಕಿ ಇಣುಕುವ ಚಟ ಎಂದು ಟ್ವೀಟ್ ಮಾಡಿ ಟಾಂಗ್ ನೀಡಿದೆ.
ಬಿಜೆಪಿಯಲ್ಲಿ ಬಗೆಬಗೆಯ ಯುದ್ಧ ನಡೆಯುತ್ತಿದೆ ಸೋಮಣ್ಣ vs ಅಶೋಕಣ್ಣ – ಜಂಗೀಕುಸ್ತಿ, ಬೊಮ್ಮಾಯಿ vs ಕಟೀಲ್ – ದೃಷ್ಟಿಯುದ್ದ, BSY vs BJP – ಮುಷ್ಠಿಯುದ್ಧ ಮತ್ತು ಯತ್ನಾಳ್ vs ವಿಜಯೇಂದ್ರ – ಮಲ್ಲಯುದ್ದ ರಾಜ್ಯ ಬಿಜೆಪಿಯ ಸ್ಥಿತಿ ಮಾನ ಮುಚ್ಚಿಕೊಳ್ಳಲಾಗದ ಹರಿದ ಬನಿಯನ್‌ಗಿಂತಲೂ ಕಡೆಯಾಗಿರುವಾಗ ಕಂಡವರ ಮನೆಯ ಕಿಟಕಿ ಇಣುಕುವ ಚಟವೇಕೆ!? ಡಎಂದು ಟೀಕಿಸಿದೆ.