ಆಗಸ್ಟ್ 16 ಕ್ಕೆ ಎಲ್ಲೆಡೆ ವರಮಹಾಲಕ್ಷ್ಮಿ ಹಬ್ಬವನ್ನು ಅಬ್ಬರದಿಂದ ಆಚರಿಸುತ್ತಾರೆ. ವರಮಹಾಲಕ್ಷ್ಮಿ ಹಬ್ಬ ಅಂತ ಹೇಳಿದ್ರೆ ಹೆಣ್ಣು ಮಕ್ಕಳು ತುಂಬಾನೇ ಇಷ್ಟಪಟ್ಟು ಆಚರಿಸುವಂತಹ ಒಂದು ಹಬ್ಬವಾಗಿದೆ. ಮನೆಯಲ್ಲಿ ಲಕ್ಷ್ಮಿ ಕೂರಿಸಿ ಅದ್ದೂರಿಯಾಗಿ ಅಲಂಕಾರ ಮಾಡಿ ,ಸಿಹಿ ತಿನಿಸುಗಳನ್ನ ಹಾಗೂ ಸಾಕಷ್ಟು ಅಡಿಗೆಗಳನ್ನ ಮಾಡಿ ಹೆಣ್ಣುಮಕ್ಕಳನ್ನು ಕುಂಕುಮಕ್ಕೆ ಕರೆದುಹಬ್ಬವನ್ನು ಸೆಲೆಬ್ರೇಟ್ ಮಾಡ್ತಾರೆ.
ಹಿಂದೆಲ್ಲಾ ಲಕ್ಷ್ಮಿ ಕೂರಿಸುವುದೆಂದ್ರೆ ಒಂದು ಚೊಂಬಿಗೆ ಐದು ಎಲೆಗಳನ್ನು ಇಟ್ಟು ಒಂದು ತೆಂಗಿನಕಾಯಿಯನ್ನು ಪೂಜೆಯನ್ನು ಮಾಡ್ತಾ ಇದ್ರೂ.ಒಂದಿಷ್ಟು ವರ್ಷಗಳ ಬಳಿಕ ತೆಂಗಿನಕಾಯಿಗೆ ಲಕ್ಷ್ಮಿ ಮುಕವನ್ನು ಇಟ್ಟು ಚೊಂಬಿಗೆ ಸೀರೆಯನ್ನು ಉಡಿಸಿ ಮನೆಯಲ್ಲಿರುವ ಒಡವೆಗಳನ್ನ ಹಾಕಿ ಅಲಂಕಾರ ಮಾಡ್ತಾ ..ಆದ್ರೆ ಈಗ ರೆಡಿಮೇಡ್ಯುಗ ಕಾಸೋದಿಂದ್ರೆ ಎಲ್ಲವೂ ಸಿಗುತ್ತದೆ..
ಹೌದು ಸದ್ಯ ಎಲ್ಲಕಡೆ ಸತ್ಯ ಎಲ್ಲಿದೆ ಕಂಪ್ಲೀಟ್ ಅಲಂಕೃತ ಗೊಂಡಿರುವ ರೆಡಿಮೇಡ್ ವರಮಹಾಲಕ್ಷ್ಮಿಯ ಉತ್ಸವ ಮೂರ್ತಿಗಳು ರಾರಾಜಿಸುತ್ತಿವೆ.. ಇತ್ತೀಚಿನ ದಿನಗಳಲ್ಲಿ ಎಲ್ಲರೂ ಕೂಡ ಬಿಸಿ ಲೈಫ್ ಗೆ ಒಳಗಾಗಿರುತ್ತಾರೆ. ನಾನು ಆ ಕೆಲಸಗಳಲ್ಲಿ ತೊಡಗಿಕೊಂಡಿರುತ್ತಾರೆ. ಹಾಗಾಗಿ ಮನೆಯಲ್ಲಿ ಈ ಅಲಂಕಾರಗಳಿಗೆ ಸಮಯವಿಲ್ಲದೆ ಇರುವ ಕಾರಣ, ದುಡ್ಡು ಕೊಟ್ಟು ರೆಡಿಮೇಡ್ ವರಮಹಾಲಕ್ಷ್ಮಿಯನ್ನು ತೆಗೆದುಕೊಂಡು ಹೋಗಿ ಅದಕ್ಕೆ ಪೂಜೆ ಮಾಡ್ತಾರೆ.
ಆಹಾ ಈ ಪರಮಾ ಲಕ್ಷ್ಮಿಯ ಉತ್ಸವ ಮೂರ್ತಿಗಳನ್ನ ನೋಡಲು ಎರಡು ಕಣ್ಣುಗಳು ಸಾಲದು. ಲಕ್ಷ್ಮಿಯ ಮುಖದಲ್ಲಿರುವ ಕಳೆ ಹಾಗೂ ಅಲಂಕಾರ ಎಲ್ಲವೂ ಕೂಡ ಒಂದಕ್ಕಿಂತ ಒಂದು ಅದ್ಭುತವಾಗಿರುತ್ತದೆ.
ಇನ್ನು ಕೆಲವರು ಮನೆಯಲ್ಲಿ ಹಬ್ಬವನ್ನು ಆಚರಿಸುವಾಗ ಒಂದು ಥೀಮ್ ಇಟ್ಟುಕೊಂಡಿರುತ್ತಾರೆ ಅದಕ್ಕೆ ತಕ್ಕಂತೆ ಲಕ್ಷ್ಮಿಯ ಸೀರೆ ಬಣ್ಣ ,ಆಭರಣಗಳು ಹಾಗೂ ಆ ಉಸ್ತವಮೂರ್ತಿ ಮುಂದೆ ಇಡುವಂತಹ ಅಲಂಕಾರಿಕ ವಸ್ತುಗಳು ಒಂದೇ ಥೀಮ್ ನಲ್ಲಿ ಇರುತ್ತದೆ. ಉದಾಹರಣೆಗೆ ಕೆಂಪು ಸೀರೆ, ಕೆಂಪುಗೆ ಬಳೆಗಳು, ಕೆಂಪು ಆಭರಣಗಳು ಹೀಗೆ ಎಲ್ಲವೂ ಕೂಡ ಕೆಂಪು ಬಣ್ಣದ ಆಗಿರುತ್ತದೆ. ನಿಮಗೆ ಬೇಕಾದ ರೀತಿಯ ಥೀಮ್ ನಲ್ಲಿ ಇರುವಂತಹ ವರಮಹಾಲಕ್ಷ್ಮಿ ಉತ್ಸವ ಮೂರ್ತಿ ದೊರೆಯುತ್ತದೆ ಹಾಗೂ ಅಲಂಕಾರಿಕ ವಸ್ತುಗಳು ಕೂಡ ದೊರೆಯುತ್ತವೆ.
ಇನ್ನು ಈ ರೆಡಿಮೇಡ್ ವರಮಹಾಲಕ್ಷ್ಮಿಯಾ ಬೆಲೆ ಬಗ್ಗೆ ಹೇಳೋದಾದರೆ ಸೈಜ್ ಹಾಗೂ ಡೆಕೋರೇಷನ್ ಗೆ ತಕ್ಕಂತೆ ನಿಗದಿಯಾಗಿರುತ್ತದೆ. ಚಿಕ್ಕ ಉತ್ಸವ ಮೂರ್ತಿ ಆಗಿದ್ದರೆ ಕಡಿಮೆ ರೇಟ್ ಹಾಗೂ ದೊಡ್ಡ ಉತ್ಸವ ಮೂರ್ತಿಯಾಗಿದ್ದರೆ ಹೆಚ್ಚು ರೇಟು ಇರುತ್ತದೆ .ಅದರಲ್ಲೂ ಕೂಡ 1000 ದಿಂದ 50,000 ವರೆಗೂ ಕೂಡ ಉತ್ಸವ ಮೂರ್ತಿಗಳನ್ನ ನೀವು ನೋಡಬಹುದು.
ಒಟ್ಟಿನಲ್ಲಿ ಪ್ರತಿಬಾರಿಗಿಂತ ಈ ಬಾರಿ ಮಾರುಕಟ್ಟೆಯಲ್ಲಿ ವಿಶೇಷವಾಗಿ ವರಮಹಾಲಕ್ಷ್ಮಿಯ ಉತ್ಸವ ಮೂರ್ತಿಗಳು ಅಲಂಕಾರಿಕ ವಸ್ತುಗಳು ಒಡವೆಗಳು ಪೂಜೆ ವಸ್ತುಗಳು ಎಲ್ಲವೂ ಕೂಡ ಅದ್ದೂರಿಯಾಗಿದೆ.