ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಚುನಾವಣೆಯಲ್ಲಿ ನೀಡುತ್ತಿರುವ ಹೇಳಿಕೆಗಳು ವಿಶೇಷ ವಿಶ್ಲೇಷಣೆಗೆ ಒಳಗಾಗುತ್ತಿವೆ. ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿ ಮಾಧ್ಯಮ ಸಂದರ್ಶನ ಒಂದರಲ್ಲಿ ದೇವರೇ ನನ್ನನ್ನ ಇಲ್ಲಿಗೆ ಕಳುಹಿಸಿದ್ದಾರೆ ಎಂದು ಹೇಳಿಕೆ ನೀಡಿದ್ದರು.

ಈ ಹೇಳಿಕೆ ಆಧಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ರಾಹುಲ್ ಗಾಂಧಿ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಜೊತೆಗೆ ನೇರವಾಗಿ ಪರಮಾತ್ಮನ ಜೊತೆ ಸಂಪರ್ಕ ಇದೆ ಎಂದ ಮೇಲೆ ಈ ಸಂವಿಧಾನ ಯಾಕೆ ಬೇಕು ಅಂತ ಪ್ರಶ್ನೆ ಮಾಡಿದ್ದಾರೆ. ನನಗೆ ಪರಮಾತ್ಮ ಮಾರ್ಗದರ್ಶನ ಮಾಡ್ತಾನೆ ಎಂದಿದ್ದಾರೆ. ಇದನ್ನು ಯಾರೋ ಸೃಷ್ಟಿಸಿದ್ದಲ್ಲ. ಸ್ವತಃ ಮೋದಿ ಅವರೇ ಹೇಳಿಕೊಂಡಿದ್ಧಾರೆ. ಒಬ್ಬ ವ್ಯಕ್ತಿ ದೇವರೊಂದಿಗೆ ಸಂಪರ್ಕ ಹೊಂದಿದ್ರೆ, ಸಂವಿಧಾನದ ಅವಶ್ಯಕತೆ ಏನಿದೆ..? ಅವರು ಡೈರೆಕ್ಟ್ ಆಗಿ ದೇವರ ಜೊತೆ ಮಾತಾಡ್ತಿದ್ದಾರೆ ಅಂದ್ರೆ ನನಗೆ ಸ್ವಲ್ಪ ಭಯವಾಗ್ತಿದೆ ಎಂದು ಕಿಚಾಯಿಸಿದ್ದಾರೆ. ಬಿಹಾರದಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ AICC ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಬಿಜೆಪಿ ನಾಯಕರಿಗೆ ಟಾಂಗ್ ನೀಡಿದ್ದಾರೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ವಿಚಿತ್ರವಾದ ಮಾತಾಡ್ತಿದ್ದಾರೆ. ದೇಶದ ಪ್ರಧಾನಮಂತ್ರಿಯಾಗಿ ಹೀಗೆ ಮಾತಾಡಬಾರದು.

2 ಎಮ್ಮೆ ಇದ್ರೆ ಅದರಲ್ಲಿ ಮುಸ್ಲಿಮರಿಗೆ 1 ಕೊಡ್ತಾರೆ ಅಂದ್ರು. 2 ಎಕರೆ ಜಮೀನು ಇದ್ರೆ 1 ಎಕರೆ ಕಾಂಗ್ರೆಸ್ ಕಸಿದುಕೊಳ್ಳುತ್ತೆ ಅಂದ್ರು. ಮಂಗಳ ಸೂತ್ರವನ್ನೂ ಕಾಂಗ್ರೆಸ್ ಕಿತ್ತುಕೊಳ್ಳುತ್ತದೆ ಅಂದ್ರು. ಇದೆಲ್ಲಾ ಒಬ್ಬ ಪ್ರಧಾನಿ ಆಗಿ ಮಾತನಾಡುವುದು ತರವಲ್ಲ ಎಂದು ಕಿವಿಮಾತು ಹೇಳಿದ್ದಾರೆ. ವೋಟ್ಗಾಗಿ ಇಂಡಿ ಕೂಟ ನೃತ್ಯ ಬೇಕಾದ್ರೂ ಮಾಡೋದಕ್ಕೆ ರೆಡಿಯಿದೆ ಎಂದಿದ್ದ ಪ್ರಧಾನಿ ಮೋದಿಗೆ, ಉತ್ತರ ಪ್ರದೇಶ ಬಲಿಯಾದಲ್ಲಿ ಮಾಜಿ ಸಿಎಂ ಅಖಿಲೇಶ್ ಯಾದವ್ ತಿರುಗೇಟು ಕೊಟ್ಟಿದ್ದಾರೆ. ಮೋದಿ ಆತ್ಮವಿಶ್ವಾಸ ಕುಸಿದಿದ್ದು, ಅವರ ಭಾಷಣದಲ್ಲೇ ಅದು ಕಾಣಿಸುತ್ತಿದೆ. ವಿಶ್ವಾಸ ಕಳೆದುಕೊಂಡಾಗ ಈ ರೀತಿ ಮಾತುಗಳು ಹೊರಬರುತ್ತವೆ. ಬಿಜೆಪಿ ಸೋಲುತ್ತೆ ಎನ್ನುವುದು ಸ್ವತಃ ಬಿಜೆಪಿ ನಾಯಕರಿಗೂ ಗೊತ್ತಾಗಿದೆ. ಅದೇ ಕಾರಣಕ್ಕೆ ಹೇಗೆ ಬೇಕೋ ಹಾಗೆ ಮಾತನಾಡುತ್ತಿದ್ದಾರೆ. ಆತ್ಮವಿಶ್ವಾಸವು ನಡುಗಿದಾಗ, ಭಾಷಣವೂ ನಡುಗುತ್ತದೆ.

ಬಿಜೆಪಿಯನ್ನು ಈ ಬಾರಿ ದೇಶದ ಜನರು ತೊಲಗಿಸುತ್ತಾರೆ ಎಂದಿದ್ದಾರೆ. ಚುನಾವಣಾ ಪ್ರಚಾರದ ನಡುವೆಯೇ ಹಿಮಾಚಲ ಪ್ರದೇಶದ ಉನಾದಲ್ಲಿರುವ ಗುರುದ್ವಾರಕ್ಕೆ ರಾಹುಲ್ ಗಾಂಧಿ ಭೇಟಿ ಕೊಟ್ಟಿದ್ರು. ಕಿಲಾ ಬಾಬಾ ಬೇಡಿ ಸಾಹಿಬ್‌ನಲ್ಲಿ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿದ್ದಾರೆ. ಈ ವೇಳೆ ಸುಖಬಿಂದರ್ ಸಿಂಗ್ ಕೂಡ ಸಾಥ್ ನೀಡಿದ್ದಾರೆ. ಇದಕ್ಕೂ ಮುನ್ನ ನಡೆದ ರ್ಯಾಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮಹಿಳಾ ಸಬಲೀಕರಣದ ಮಾತಾಡಿದರು. ಹಿಮಾಚಲ ಪ್ರದೇಶದ ಸಮಾವೇಶದಲ್ಲಿ ಮಾತನಾಡಿದ ರಾಹುಲ್, ಜೂನ್‌ನಲ್ಲಿ ಫಲಿತಾಂಶ ಬಂದು ಕಾಂಗ್ರೆಸ್ ನೇತೃತ್ವದ INDIA ಸರ್ಕಾರ ಅಸ್ತಿತ್ವಕ್ಕೆ ಬರಲಿದ್ದು, ಜುಲೈನಿಂದ ಮಹಿಳೆಯರ ಖಾತೆಗೆ ಹಣ ಟಕಾ ಟಕ್ ಟಕಾ ಟಕ್ ಅಂತಾ ಅಕೌಂಟ್‌ಗೆ ಗ್ಯಾರಂಟಿ ಹಣ ಬೀಳ್ತಿರುತ್ತೆ ಎಂದಿದ್ದಾರೆ. ಕೃಷ್ಣಮಣಿ