ಬೆಂಗಳೂರು:ಗುತ್ತಿಗೆದಾರ ಚೆಲುವರಾಜ್ಗೆ Cheluvaraj ಜೀವ ಬೆದರಿಕೆ threat ಹಾಕಿದ್ದು ಅಲ್ಲದೇ, ಜಾತಿ ನಿಂದನೆ Caste abuse ಆರೋಪದಡಿ Accused ಆರ್.ಆರ್.ನಗರದ ಬಿಜೆಪಿ ಶಾಸಕ ಮುನಿರತ್ನ (BJP MLA Muniratna)ವಿರುದ್ಧ 2 FIR ದಾಖಲಾಗುತ್ತಿದ್ದಂತೆ, ಅವರು ನಾಪತ್ತೆಯಾಗಿದ್ದಾರೆ.
ವೈಯ್ಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮುನಿರತ್ನಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದು, ಅವರ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದೆ ಎಂದು ತಿಳಿದುಬಂದಿದೆ.
ಗುತ್ತಿಗೆದಾರನ ಬಳಿ ಲಂಚ ಕೇಳುವಾಗ ಮುನಿರತ್ನ, ಅವಾಚ್ಯ ಶಬ್ದಗಳಿಂದ ಮಾತನಾಡಿದ್ದಲ್ಲದೇ ಜಾತಿ ನಿಂದನೆಯೂ ಮಾಡಿದ್ದಾರೆಂಬ ಆಡಿಯೋವೊಂದು ನಿನ್ನೆ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ದೂರು ದಾಖಲಾಗಿದ್ದು, ಮುನಿರತ್ನ ನಾಪತ್ತೆಯಾಗಿದ್ದಾರೆ.ಸದ್ಯ ಮುನಿರತ್ನ ನಿವಾಸದಲ್ಲಿ ಪೊಲೀಸರು ಮಹಜರ್ ಮಾಡುತ್ತಿದ್ದು, ಮನೆ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.