
ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆ ಎರಡು ಕಾಲಮಿತಿಯಲ್ಲಿ ಒದಗಿಸುವುದು ಹಾಗೂ ಅನಿಯಮಿತ ವಿದ್ಯುತ್ ಪೂರೈಕೆ ಸಮಸ್ಯೆ ಬಗ್ಗೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಕೇಳಿದ ಪ್ರಶ್ನೆಗೆ ಉತ್ತರಿಸಿದ ಇಂಧನ ಸಚಿವ ಕೆ ಜೆ ಜಾರ್ಜ್(KJ George), ರೈತರಿಗೆ 7 ಗಂಟೆ ಹಗಲು ಹೊತ್ತಿನಲ್ಲೇ ವಿದ್ಯುತ್ ಪೂರೈಕೆ ಮಾಡಲಾಗ್ತಿದೆ ಎಂದಿದ್ದಾರೆ.

ಇದಕ್ಕೂ ಮೊದಲು ಎರಡು ಕಾಲಮಿತಿಯಲ್ಲಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆ ಮಾಡಲಾಗ್ತಿತ್ತು. ಆಗ ರೈತರೇ ನಿತಂತರವಾಗಿ ಒಂದೇ ಕಾಲಮಿತಿಯಲ್ಲಿ ವಿದ್ಯುತ್ ಪೂರೈಕೆ ಮಾಡುವಂತೆ ಮನವಿ ಮಾಡಿದ್ದರು. ಆದರೆ ಪ್ರದೇಶವಾರು ಅಲ್ಲೊಂದು ಇಲ್ಲೊಂದು ಕಾಲಮಿತಿ ನಿಗದಿ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.

ಇನ್ನು ಟ್ರಾನ್ಸ್‌ಫಾರಂ ಸುಟ್ಟು ಹೋಗ್ತಿರೋದು ಸಮಸ್ಯೆ ಆಗ್ತಿದೆ ಅನ್ನೋದಕ್ಕೆ ಟ್ರಾನ್ಸ್‌ಫಾರಂ ಸಾಮರ್ಥ್ಯ ಜಾಸ್ತಿ ಆಗಿ ಸುಟ್ಟುಹೋಗೋದು ಬೇರೆ. ಆದ್ರೆ ಅಕ್ರಮ ಸಕ್ರಮ ಬಂದು ಯಾರು ಬೇಕಾದರೂ ಹುಕ್ ಹಾಕಿ ಕನೆಕ್ಟ್ ಮಾಡ್ಕೋತಾರೆ, ಇದರಿಂದ ಸುಟ್ ಹೋಗುತ್ತೆ ಎಂದಿದ್ದಾರೆ. ಜೊತೆಗೆ ಅಕ್ರಮ ಸಕ್ರಮಕ್ಕೆ ಕಟಾಫ್ ದಿನಾಂಕ ಕೊಟ್ಟಿದ್ದೇವೆ. ಇನ್ನೊಂದು ವರ್ಷದಲ್ಲಿ ಸಮಸ್ಯೆ ಸರಿಪಡಿಸ್ತೇವೆ, ಅಷ್ಟು ಸಮಯ ಬೇಕು ಎಂದಿದ್ದಾರೆ ಸಚಿವ ಕೆ.ಜೆ ಜಾರ್ಜ್(KJ George). ಇದಕ್ಕಾಗಿಯೇ ಟ್ರಾನ್ಸ್‌ಫಾರಂ ಬ್ಯಾಂಕ್ ಮಾಡಿದ್ದೇವೆ ಅಂತಾನೂ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.