ಸಿಎಂ ಸಿದ್ದರಾಮಯ್ಯಗೆ ಲೋಕಾಯುಕ್ತರು ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ ಸಂಕಷ್ಟ ದೂರವಾಗಲಿ ಎಂದು ಅಭಿಮಾನಿಗಳು ಬರಿಗಾಲಲ್ಲಿ ಚಾಮುಂಡಿ ಬೆಟ್ಟ ಹತ್ತಿದ್ದಾರೆ. ಚಾಮುಂಡಿ ಬೆಟ್ಟ ಹತ್ತುವ ಮುನ್ನ 101 ಈಡುಗಾಯಿ ಒಡೆದಿದ್ದಾರೆ.

ಮುಡಾ ಹಗರಣದಿಂದ ಸಿದ್ದರಾಮಯ್ಯ ಅವರನ್ನು ಸಂಕಷ್ಟದಿಂದ ಪಾರು ಮಾಡು ಹಾಗು ಸಿದ್ದರಾಮಯ್ಯ ವಿರೋಧಿಗಳು ನಾಶವಾಗಲಿ, ಸತ್ಯಕ್ಕೆ ಜಯ ಸಿಗಲಿ ಎಂದು ತಾಯಿ ಚಾಮುಂಡಿ ಬಳಿ ಪ್ರಾರ್ಥಿಸಿದ್ದಾರೆ. ಸಿಎಂ ಸಿದ್ದರಾಮಯ್ಯಗೆ ಲೋಕಾಯುಕ್ತ ನೋಟಿಸ್ ಕೊಟ್ಟಿದ್ದು, ನಾಳೆ ವಿಚಾರಣೆ ಹಾಜರಾಗಲಿದ್ದಾರೆ. ಎಲ್ಲಾ ಸಂಕಷ್ಟಗಳು ದೂರವಾಗಲಿ ಎಂದು ಕೋರಿದ್ದಾರೆ.
