ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿ ಪಡೆದಿದ್ದ ಟ್ರಾವೆಲ್ ಇನ್ಫ್ಲುಯೆನ್ಸರ್ ಅನುನಯ್ ಸೂದ್ ನಿಧನರಾಗಿದ್ದಾರೆ. ಅನುನಯ್ ಸೂದ್ ಸಾವಿನ ಬಗ್ಗೆ ಎಲ್ಲೆಡೆ ಸುದ್ದಿ ಹರಿದಾಡಲು ಆರಂಭಿಸಿತ್ತು ಮೊದಲು ಇದನ್ನು ಸುಳ್ಳು ಎನ್ನಲಾಗಿತ್ತು ಆದರೆ ಇದೀಗ ಸ್ವತಃ ಅನುನಯ್ ಸೂದ್ ಕುಟುಂಬದವರು ಹಾಗೂ ಗೆಳೆಯರು ಇನ್ಸ್ಟಾಗ್ರಾಮ್ನಲ್ಲಿ ಈ ವಿಚಾರವನ್ನು ತಿಳಿಸಿದ್ದಾರೆ.

ಅನುನಯ್ ಸೂದ್ ನಿಧನದ ಸುದ್ದಿ ನೆಟ್ಟಿಗರನ್ನು ದಿಗ್ಭ್ರಮೆ ಗೊಳಿಸಿದೆ. ಯಾಕೆಂದರೆ ಕಳೆದ ಎರಡು ದಿನಗಳ ಹಿಂದಷ್ಟೇ ಲಾಸ್ ವೇಗಸ್ನಲ್ಲಿ ವೀಕೆಂಡ್ ಕಳೆಯುತ್ತಿರುವ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದರು.

ಟ್ರಾವೆಲ್ ಇನ್ಫ್ಲುಯೆನ್ಸರ್ ಹಾಗೂ ಫೋಟೋಗ್ರಾಫರ್ ಅನುನಯ್ ಸೂದ್ ಅವರು ಇನ್ಸ್ಟಾಗ್ರಾಮ್ನಲ್ಲಿ ಹಾಗೂ ಯೂಟ್ಯೂಬ್ನಲ್ಲಿ ಹೆಚ್ಚಿನ ಜನಪ್ರಿಯತೆ ಪಡೆದಿದ್ದರು. ಅವರ ಟ್ರಾವೆಲ್ ವಿಡಿಯೋಗಳನ್ನು ನೆಟ್ಟಿಗರು ಕಾದು ನೋಡುತ್ತಿದ್ದರು. ಅನುನಯ್ ಸೂದ್ ಸದ್ಯ ಇನ್ಸ್ಟಾಗ್ರಾಮ್ನಲ್ಲಿ 14 ಲಕ್ಷ ಫಾಲೋವರ್ಸ್ ಹಾಗೂ ಯೂಟ್ಯೂಬ್ನಲ್ಲಿ 38 ಲಕ್ಷ ಸಬ್ಸ್ಕ್ರೈಬರ್ಸ್ ಹೊಂದಿದ್ದಾರೆ.


