ಇವರೆಲ್ಲಾ ಬೋಗಸ್ ಧರ್ಮ ಪ್ರಚಾರಕರು. ಅವರು ಸುಳ್ಳು ಹೇಳುತ್ತೀದ್ದಾರೆ. ನಾವು ಸತ್ಯವನ್ನು ಹೇಳುತ್ತಿದ್ದೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಹತ್ತಿರದಲ್ಲೇ ಇದೆ. ಆದ್ದರಿಂದ ನಾವು ಈಗಲೇ ಜನರ ಮುಂದೆ ಹೋಗಿ ಸತ್ಯವನ್ನು ಜನರ ಮುಂದೆ ಇಡುತ್ತೇವೆ ಎಂದರು.
ಜನರಲ್ಲಿ ಕೋಮು ಭಾವನೆ ಕೆರಳಿಸುತ್ತಿದ್ದಾರೆ. ಸುಳ್ಳುಗಳನ್ನು ಹೇಳುತ್ತಿದ್ದಾರೆ. ಧರ್ಮದ ವಿಚಾರದಲ್ಲಿ ಅಪಪ್ರಚಾರ ಮಾಡುತ್ತಿದ್ಧಾರೆ. ಈ ಎಲ್ಲಾ ವಿಷಯಗಳನ್ನು ಜನರ ಮುಂದಿಡಲಾಗುವುದು ಎಂದು ಅವರು ಹೇಳಿದರು.
ಯಾವುದೇ ಸರಕಾರಕ್ಕೆ ಜಾತಿ-ಧರ್ಮ ಇರುವುದಿಲ್ಲ. ಅದು ಜಾತ್ಯತೀತ. ನಮ್ಮ ಸಂವಿಧಾನ ಪ್ರಕಾರ ಆಡಳಿತ ನಡೆಸಬೇಕು. ಆದರೆ ಸರಕಾರ ಜಾತಿ-ಧರ್ಮ ಆಧಾರಿತ ಸುಳ್ಳು ಪ್ರಚಾರಕ್ಕೆ ಕುಮ್ಮಕ್ಕು ನೀಡುವ ಸರಕಾರವಾಗಿದೆ. ಇದೆಲ್ಲಾ ಚುನಾವಣಾ ಗಿಮಿಕ್ ಎಂದರು.
ರಾಜ್ಯದಲ್ಲಿ ಈ ರೀತಿ ಅಶಾಂತಿ ಸೃಷ್ಟಿಸಿದರೆ ಬಂಡವಾಳ ಹೂಡಿಕೆದಾರರು ಬರುತ್ತಾರಾ? ಎಲ್ಲರೂ ಹೊರಗೆ ಹೋಗುತ್ತಾರೆ. ಹೀಗೆ ಆದರೆ ಉದ್ಯೋಗ ಸೃಷ್ಟಿ ಹೇಗೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.