ಚನ್ನಪಟ್ಟಣ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಜೆಡಿಎಸ್ ಪಕ್ಷದಿಂದ ರಾಜ್ಯ ಅದ್ಯಕ್ಷ ಸಿಎಂ ಇಬ್ರಾಹಿಂ ಉಚ್ಚಾಟಿಸಿದ್ದಾರೆ ಎಂಬ ಪೋಸ್ಟ್ ಎಲ್ಲೆಡೆ ಅರಿದಾಡುತ್ತಿದೆ. ಇದರ ಹಿಂದಿನ ಸತ್ಯವನ್ನು ಅರಿಯದೆ ಅನೇಕರು ತಮ್ಮ ಸಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದು, ಇದರ ಹಿಂದಿನ ಸತ್ಯಾಸತ್ಯತೆ ಏನು ಎಂಬುದು ಈಗ ಬಯಲಾಗಿದೆ.
ಹೌದು, ಪ್ರತಿ ದಿನ ಜೆಡಿಎಸ್ ಪಕ್ಷದಲ್ಲಿ ಒಂದಲ್ಲ ಒಂದು ರೀತಿ ರಾಜಕೀಯ ಚಿತ್ರಣ ಬದಲಾಗುತ್ತಲೆ ಇದೆ. ವಿಧಾನಸಭಾ ಚುನಾವಣೆಯಲ್ಲಿ ಸೋತ ಸುಣ್ಣವಾಗಿರುವ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಕೂಡ ರಚಿಸಿದ್ದು, ಲೋಕ ಸಮರಕ್ಕೆ ಸಿದ್ದವಾಗಿದ್ದಾದೆ. ಆದರೆ ಅತೇಚ್ಚವಾಗಿ ಜೆಡಿಎಸ್ ಅನ್ನು ಬೆಂಬಲಿಸಿದ್ದ ಮುಸಲ್ಮಾನರ ಅಭಿಪ್ರಾಯ ತೆಗೆದುಕೊಳ್ಳದೆ ಬಿಜೆಪಿ ಜೊತೆ ಕೈ ಜೋಡಿಸಿದ್ದು ಈವ ವ್ಯಪಕ ಚರ್ಚೆಗೆ ಕಾರಣವಾಗಿದೆ.
ಜೆಡಿಎಸ್ ನ ರಾಜ್ಯ ಅಧ್ಯಕ್ಷ ಸಿಎಂ ಇಬ್ರಾಹಿಂ ಸಹ ಮುಸಲ್ಮಾನ ಸಮುದಾಯಕ್ಕೆ ಸೇರಿದ್ದು, ಆವರ ಅಭಿಪ್ರಾಯಯವೂ ಕೇಳದೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದೆ ಈಗ ಸಿಎಂ ಇಬ್ರಾಹಿಂ ದಿನದಿಂದ ದಿನಕ್ಕೆ ರಾಜಕೀಯವಾಗಿ ಹೇಳಿಕೆ ನೀಡುತ್ತಿದ್ದು, ಒರಿಜಿನಲ್ ಜೆಡಿಎಸ್ ನಮ್ಮದು ನಾನು ರಾಜ್ಯಧ್ಯಕ್ಷ ನಮ್ಮ ಬೆಂಬಲ INDIA ಕೂಟಕ್ಕೆ ಎಂದು ಹೇಳೆ ಕೊಟ್ಟ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಜೆಡಿಎಸ್ ನಿಂದ ಉಚ್ಚಾಟನೆಯಾಗಿದೆ ಎಂಬ ಸುದ್ದಿ ಹೊರಬಿದ್ದಿದೆ. ಈಗ ಈ ಸುದ್ದಿ ಸುಳ್ಳು ಎಂದು ತಿಳಿದುಬಂದಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಕುಮಾರಸ್ವಾಮಿ, ಸಿಎಂ ಇಬ್ರಾಹಿಂ ಅವರು ಒರಿಜಿನಲ್ ಜೆಡಿಎಸ್ ಎಂದು ಬೋರ್ಡ್ ಹಾಕಿಕೊಳ್ಳಲು ಹೇಳಿ, ನನ್ನನ್ನು ಉಚ್ಚಾಟನೆ ಮಾಡ್ತಾರಂತ ಮಾಡ್ಲಿ, ಏನಾದ್ರು ಮಾಡಿಕೊಳ್ಳಲಿ ಅದು ನಮ್ಮ ಪಕ್ಷ ಎಂದು ಹೇಳಿಕೆ ನೀಡಿದ್ದಾರೆ.
ಈ ಕುರಿತು ಜೆಡಿಎಸ್ ರಾಜ್ಯ ಅಧ್ಯಕ್ಷ ಸಿಎಂ ಇಬ್ರಾಹಿಂ ಆವರನ್ನೇ ಸ್ಪಷ್ಟೀಕರಣಕ್ಕೆ ಸಂಪರ್ಕಿಸಿದಾಗ, ನಾನು ಯಾರನ್ನು ಉಚ್ಚಾಟನೆ ಮಾಡಿಲ್ಲ. ನಾನು ರಾಜ್ಯ ಅಧ್ಯಕ್ಷ ಆಗಿರುವ ಪಕ್ಷ ಒರಿಜಿನಲ್ ಜೆಡಿಎಸ್ ಪಕ್ಷ. ನಮ್ಮ ಪಕ್ಷದ ನಿರ್ಧಾರವನ್ನು ನಾವೇ ತೆಗೆದುಕೊಳ್ಳುತ್ತೇವೆ. ಬಿಜೆಪಿ ಜೊತೆ ಮೈತ್ರಿ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ.