ಇತ್ತೀಚೆಗೆ ದೇಶದಾದ್ಯಂತ ಮೇಲಿಂದ ಮೇಲೆ ವಿಮಾನ ನಿಲ್ದಾಣಗಳಿಗೆ (Airport) ಬೆದರಿಕೆ ಕರೆಗಳು ಸಾಕಷ್ಟು ಸಂಖ್ಯೆಯಲ್ಲಿ ಬರುತ್ತಿರುಉದು ಆತಂಕಕ್ಕೆ ಕಾರಣವಾಗಿದೆ. ಹುಸಿ ಬಾಂಬ್ ಬೆದರಿಕೆ ಕರೆಯಿಂದ ನಿನ್ನೆ ಒಂದೇ ದಿನ 100ಕ್ಕೂ ಹೆಚ್ಚು ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ ಅಂತ ಇಂಡಿಯನ್ ಏರ್ಲೈನ್ಸ್ (Indian airlines) ತಿಳಿಸಿದೆ.

ಏರ್ ಇಂಡಿಯಾಗೆ (Air India) 36 ಬೆದರಿಕೆ ಸಂದೇಶಗಳು ಬಂದಿದ್ದು, ಇಂಡಿಗೋ ಹಾಗೂ ವಿಸ್ತಾರ ಏರ್ ಲೈನ್ಸ್ಗೆ (Vistara airlines) ಕ್ರಮವಾಗಿ 35 ಮತ್ತು 32 ಬೆದರಿಕೆಗಳನ್ನು ಕಳುಹಿಸಲಾಗಿದೆ. ಕಳೆದ 16 ದಿನಗಳಲ್ಲಿ 510 ವಿಮಾನಗಳಿಗೆ ಬೆದರಿಕೆ ಕರೆ ಎದುರಿಸಿವೆ.
ಆದ್ರೆ ಇವೆಲ್ಲವೂ ಹುಸಿ ಬೆದರಿಕೆ ಕರೆಗಳಾಗಿದ್ದು ಸೋಷಿಯಲ್ ಮೀಡಿಯಾ ಫ್ಲಾಟ್ಫಾರಂ ಬಳಸಿಕೊಂಡು ಬೆದರಿಕೆ ಸಂದೇಶಗಳನ್ನು ಕಳುಹಿಸಲಾಗಿದೆ.