ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ಏರ್ ಫೋರ್ಟ್ ಮತ್ತು ನಗರದ ಕೆಲವು ಮಾಲ್ ಗಳನ್ನ ಸ್ಫೋಟಿಸುವುದಾಗಿ ಹುಸಿ ಇ- ಮೇಲ್ ಮಾಡಲಾಗಿದೆ. ಈ ಸಂಬಂಧ ಕೇಂದ್ರ ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನ.30 ರಂದು ನಗರ ಪೊಲೀಸ್ ಆಯಕ್ತರ ಇ-ಮೇಲ್ ಗೆ ಮೋಹಿತ್ ಕುಮಾರ್ ಎಂಬ ವಿಳಾಸದಿಂದ ಹುಸಿ ಬಾಂಬ್ ಇಮೇಲ್ ಮಾಡಲಾಗಿತ್ತು. ಜೈಷಾ ಮೊಹಮ್ಮದ್ ಸಂಘಟನೆಯಿಂದ ಇಮೇಲ್ ಮಾಡುತ್ತಿರುವುದಾಗಿ, ಏರ್ ಪೋರ್ಟ್ ಸೇರಿದಂತೆ ಕೆಲವು ಮಾಲ್ ಗಳನ್ನ ಸಂಜೆ ಸ್ಪೋಟಿಸುವುದಾಗಿ ಸಂದೇಶ ಕಳುಹಿಸಲಾಗಿತ್ತು.

ಈ ಇಮೇಲ್ ಸಂಬಂಧ mohitkumar.er989799@gmail.com ಎಂಬ ಐಡಿ ಬಳಕೆದಾರನ ಮೇಲೆ ಕೇಂದ್ರ ಸೈಬರ್ ಕ್ರೈಂ ಪೊಲೀಸ್ ಸ್ಟೇಷನ್ ನಲ್ಲಿ FIR ದಾಕಲಾಗಿದ್ದು, ತನಿಖೆ ನಡೆಸಲಾಗ್ತಿದೆ.












