• Home
  • About Us
  • ಕರ್ನಾಟಕ
Thursday, December 11, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ನನ್ನ ವಿರುದ್ಧ ಬರೆದರೂ ಚಿಂತೆಯಿಲ್ಲ, ಸತ್ಯಾಂಶ ಶೋಧಿಸಿ ಬರೆಯಿರಿ: ಡಿಸಿಎಂ ಡಿ.ಕೆ. ಶಿವಕುಮಾರ್

ಪ್ರತಿಧ್ವನಿ by ಪ್ರತಿಧ್ವನಿ
January 12, 2025
in Top Story, ಅಂಕಣ, ಇದೀಗ, ಕರ್ನಾಟಕ, ಜೀವನದ ಶೈಲಿ, ರಾಜಕೀಯ, ವಾಣಿಜ್ಯ, ವಿಶೇಷ, ಶೋಧ, ಸರ್ಕಾರಿ ಗೆಜೆಟ್
0
Share on WhatsAppShare on FacebookShare on Telegram

“ಮಾಧ್ಯಮಗಳು ನನ್ನ ವಿರುದ್ಧ ಬರೆದರೂ ಚಿಂತೆಯಿಲ್ಲ. ಆದರೆ ಸತ್ಯಾಂಶ ಶೋಧಿಸಿ ಬರೆಯಿರಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗಳಿಗೆ ಕಿವಿಮಾತು ಹೇಳಿದರು.

ADVERTISEMENT

ಬೆಂಗಳೂರು ಪ್ರೆಸ್ ಕ್ಲಬ್ ಶನಿವಾರದಂದು ಏರ್ಪಡಿಸಿದ್ದ ‘ಪ್ರೈಡ್ ಆಫ್ ಕರ್ನಾಟಕ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಿವಕುಮಾರ್ ಅವರು ಮಾತನಾಡಿದರು.

“ನಾನು ಚುನಾವಣಾ ರಾಜಕೀಯಕ್ಕೆ ಬಂದು 40 ವರ್ಷಗಳು ಕಳೆದಿವೆ. ಆದರೆ ಒಂದು ದಿನವೂ ಪ್ರೆಸ್ ಕ್ಲಬ್ ಗೆ ಕಾಲಿಟ್ಟಿರಲಿಲ್ಲ. ಕಳೆದ ವರ್ಷ ನನ್ನನ್ನು ಕರೆಸಿ ವರ್ಷದ ವ್ಯಕ್ತಿ ಪ್ರಶಸ್ತಿ ಕೊಟ್ಟಿದ್ದೀರಿ” ಎಂದರು.

“ನನ್ನ ರಾಜಕೀಯ ಜೀವನದ ಹಾದಿಯಲ್ಲಿ ಮಾಧ್ಯಮದವರು ನನಗೆ ಸಕಾರಾತ್ಮಕ ಪ್ರಚಾರವನ್ನು ನೀಡಿದ್ದೀರಿ, ನಕಾರಾತ್ಮಕ ಪ್ರಚಾರವನ್ನು ನೀಡಿದ್ದೀರಿ. ಈ ಹಿಂದೆ ರಾಜೀವ್ ಗಾಂಧಿ ಅವರು ಪ್ರಧಾನಮಂತ್ರಿಯಾಗಿದ್ದಾಗ ಪೆಂಗ್ಯೋಂಗ್ ನಲ್ಲಿ ನಡೆದಿದ್ದ ವಿಶ್ವ ಯುವ ಸಮ್ಮೇಳನಕ್ಕೆ ಕಳುಹಿಸಿಕೊಟ್ಟಿದ್ದರು. ಆ ಸಮಯದಲ್ಲಿ ವೆಂಕಟಸುಬ್ಬಯ್ಯ ಅವರು ರಾಜ್ಯಪಾಲರಾಗಿದ್ದರು. ಇಲ್ಲಿ ದೊಡ್ಡ ಸಮಾವೇಶ ನಡೆದ ನಂತರ ನಾನು ಕಬ್ಬನ್ ಪಾರ್ಕ್ ನಲ್ಲಿ ಬಂದು ಕೂತಿದ್ದೆ. ಪೊಲೀಸ್ ಆಯುಕ್ತರು ಒಬ್ಬರನ್ನು ಕಳುಹಿಸಿ ನನ್ನನ್ನು ಕರೆಸಿಕೊಂಡರು. ನಿಮ್ಮನ್ನು ವಿಶ್ವ ಯುವ ಸಮ್ಮೇಳನಕ್ಕೆ ಆಯ್ಕೆ ಮಾಡಿದ್ದಾರೆ ಎಂದು ಹೇಳಿದರು.

ಈ ಸಮ್ಮೇಳನದಲ್ಲಿ ಭಾಗವಹಿಸಲು ವಿಸಾಗೆ 3 ಸಾವಿರ ಕಟ್ಟಬೇಕು ಎಂದು ಹೇಳಿದ್ದರು. ಆಗ ನನ್ನ ಬಳಿ ದುಡ್ಡು ಇರಲಿಲ್ಲ. ನನ್ನ ಕತ್ತಿನಲ್ಲಿ ಇದ್ದ ಚಿನ್ನದ ಸರ ಅಡವಿಟ್ಟು ಪೊಲೀಸ್ ಆಯುಕ್ತರ ಕಚೇರಿಗೆ ಹೋಗಿ ಹಣ ಪಾವತಿಸಿದ್ದೆ. ಒಂದು ದಿನದ ನಂತರ ಸಮ್ಮೇಳನಕ್ಕೆ ಆಯ್ಕೆಯಾಗಿರುವ ಬಗ್ಗೆ ನನಗೆ ಟೆಲಿಗ್ರಾಮ್ ಬಂತು.

ಆಗ ಹೊರಡುವ ಮುನ್ನ 5 ಜನ ಸಂಸದರು ನೀವು ಇಂತಹ ಗೂಂಡಾಗಳನ್ನು ಕಳುಹಿಸುತ್ತಿದ್ದೀರಿ ಎಂದು ರಾಜೀವ್ ಗಾಂಧಿ ಅವರಿಗೆ ಹೇಳಿದರು. ಅಷ್ಟು ಹೊತ್ತಿಗೆ ನಾನು ದೇವೇಗೌಡರ ವಿರುದ್ಧ ಸ್ಪರ್ಧಿಸಿ ಸೋತಿದ್ದೆ. ಜಿಲ್ಲಾ ಪಂಚಾಯಿತಿ ಸದಸ್ಯನಾಗಿದ್ದೆ. ನಾವು ಹೊರಡುವ ಮುನ್ನ ನಮಗೆ ಔತಣ ಕೂಟ ನೀಡಿ ಕೆಲವು ಮಾರ್ಗದರ್ಶನ ನೀಡಿ ಕಳುಹಿಸಿದರು. ಅಂದು 5 ಸಂಸದರ ದೂರಿನ ಮೇರೆಗೆ ರಾಜೀವ್ ಗಾಂಧಿ ಅವರು ರಾಜ್ಯಪಾಲರಿಗೆ ಕರೆ ಮಾಡಿ ನನ್ನ ಬಗ್ಗೆ ವಿಚಾರಿಸಿದರು. ಅವರು ಏನು ಹೇಳಿದರೊ ಗೊತ್ತಿಲ್ಲ. ರಾಜೀವ್ ಗಾಂಧಿ ಅವರು 5 ಸಂಸದರು ಹಾಗೂ ನನ್ನನ್ನು ಕರೆಸಿ ವಿವಾದಾತ್ಮಕ ನಾಯಕರೇ ಹೆಚ್ಚು ಯಶಸ್ವಿಯಾಗುತ್ತಾರೆ ಎಂದು ಹೇಳಿ, ಹಣ ಕೊಟ್ಟು ನನ್ನನ್ನು ಸಮ್ಮೇಳನಕ್ಕೆ ಕಳುಹಿಸಿಕೊಟ್ಟಿದ್ದರು” ಎಂದು ಸ್ಮರಿಸಿದರು.

ಮೀಡಿಯಾ ಸ್ಕೂಲ್ ಆರಂಭಿಸಲು ತೀರ್ಮಾನ

“ಈಗಿನ ಮಾಧ್ಯಮಗಳು ಸತ್ಯವನ್ನು ಬರೆಯುವುದಕ್ಕಿಂತ ಹೆಚ್ಚಾಗಿ ವಿವಾದಾತ್ಮಕ ಸುದ್ದಿಯನ್ನೇ ಪ್ರಕಟಿಸುತ್ತೀರಿ. ನಾನು ಕಳೆದ 25 ವರ್ಷಗಳಿಂದ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದೆ. ಈಗ ಆ ಸಂಸ್ಥೆಗೆ ರಾಜೀನಾಮೆ ನೀಡಿ ಅದರ ಜವಾಬ್ದಾರಿಯನ್ನು ನನ್ನ ಕುಟುಂಬದವರಿಗೆ ನೀಡಿದ್ದೇನೆ. ಈಗಿನ ಮಾಧ್ಯಮಗಳನ್ನು ನೋಡಿ ನನ್ನ ಮಗಳು ಒಂದು ಮೀಡಿಯಾ ಸ್ಕೂಲ್ ಆರಂಭಿಸಬೇಕು ಎಂದು ಹೇಳಿದಳು. ನಾನು ಕೂಡ ಇದನ್ನು ಆರಂಭಿಸಲು ತೀರ್ಮಾನಿಸಿದ್ದೇನೆ” ಎಂದರು.

“ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾಂಗ ನಾಲ್ಕು ಆಧಾರ ಸ್ಥಂಭಗಳು. ಇಡೀ ದೇಶದಲ್ಲಿ ಶಾಸಕಾಂಗ ಹಾಗೂ ನ್ಯಾಯಾಂಗ ಎರಡೂ ಎದುರುಬದುರಾಗಿರುವುದು ಅವೆರಡರ ಮಧ್ಯೆ ಪ್ರೆಸ್ ಕ್ಲಬ್ ಇರುವುದು ಬೆಂಗಳೂರಿನಲ್ಲಿ ಮಾತ್ರ. ಕಾರ್ಯಾಂಗವು ಇದಕ್ಕೆ ಸಮೀಪದಲ್ಲಿದೆ. ಹೀಗಾಗಿ ನೀವು ಎಲ್ಲವನ್ನು ಹತ್ತಿರದಿಂದ ಕಾಣುತ್ತೀರಿ, ಜೊತೆಗೆ ಕುಟುಕುತ್ತೀರಿ. ನೀವು ನಿಮ್ಮ ಕರ್ತವ್ಯ ಮಾಡಿ. ಆದರೆ ನಾವು ಬಹಳ ಕಷ್ಟಪಟ್ಟು ಬೆಳೆದಿರುತ್ತೇವೆ, ಆದರೆ ಯಾರೋ ಒಬ್ಬ ಒಂದು ಸ್ಟೋರಿ ಪ್ಲಾಂಟ್ ಮಾಡಿದ ಎಂದು ಭವಿಷ್ಯ ನಾಶ ಮಾಡಲು ಮುಂದಾಗುತ್ತಿರುವುದನ್ನು ಗಮನಿಸಿದ್ದೇನೆ” ಎಂದು ಹೇಳಿದರು.

ನಾವು ಮಾಧ್ಯಮ ಬಿಡಲು ಆಗುವುದಿಲ್ಲ:

“ನಾನು ದೇವಸ್ಥಾನಕ್ಕೆ ಹೋದರೂ ಪ್ರಶ್ನೆ ಮಾಡುತ್ತಾರೆ. ಎಲ್ಲರೂ ತಮ್ಮದೇ ಆದ ಧರ್ಮ ಪಾಲನೆ ಮಾಡುತ್ತಾರೆ. ನನ್ನ ಹೆಸರಿನಲ್ಲಿ ಶಿವ ಇದೆ. ನಾನು ಹುಟ್ಟುವಾಗ ಇದೇ ಜಾತಿ, ಧರ್ಮದಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿ ಹುಟ್ಟುವುದಿಲ್ಲ. ನಾವು ಜಾತಿ ಧರ್ಮ ಬೇಡ ಎಂದರೂ ನಾವು ಹುಟ್ಟಿದಾಗ ಹಾಗೂ ಸತ್ತಾಗ ನಮ್ಮ ಸಂಪ್ರದಾಯ, ಆಚರಣೆಗಳು ನಮ್ಮ ಜಾತಿ ಧರ್ಮವನ್ನು ಬಿಡುವುದಿಲ್ಲ.

ಅದೇ ರೀತಿ ಮಾಧ್ಯಮಗಳು ಬೇಡ ಎಂದರು ರಾಜಕಾರಣಿಗಳು ಮಾಧ್ಯಮಗಳನ್ನು ಬಿಡಲು ಆಗುವುದಿಲ್ಲ. ಹೀಗಾಗಿ ಶೃಂಗೇರಿ ಕಾರ್ಯಕ್ರಮ ಮುಗಿಸಿಕೊಂಡು ನೇರವಾಗಿ ಇಲ್ಲಿಗೆ ಆಗಮಿಸಿದ್ದೇನೆ. ನಿಮ್ಮ ಜೊತೆ ನಾನು ಇದ್ದೇನೆ ಎಂದು ಹೇಳಲು ಬಂದಿದ್ದೇನೆ” ಎಂದು ತಿಳಿಸಿದರು.

“ಮಹಾತ್ಮಾ ಗಾಂಧೀಜಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ದೇಶದ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿಕೊಂಡು ನೂರು ವರ್ಷಗಳಾಗಿವೆ. ಅವರು ಕೂಡ ಮಾಧ್ಯಮಕ್ಕೆ ಆದ್ಯತೆ ನೀಡಿದವರು ಹರಿಜನ ಪತ್ರಿಕೆ ಆರಂಭಿಸಿ ಪತ್ರಿಕಾರಂಗದಲ್ಲಿ ತೊಡಗಿಸಿಕೊಂಡಿದ್ದರು. ಅವರು ಹಾಕಿಕೊಟ್ಟ ದಾರಿಯನ್ನು ಸ್ಮರಿಸಿ, ಸಮಾಜಕ್ಕೆ ನೀವು ಮಾರ್ಗದರ್ಶನ ನೀಡುವ ಶಕ್ತಿಯನ್ನು ಭಗವಂತ ನಿಮಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದರು.

“ಪ್ರಶಸ್ತಿ ಪಡೆಯುತ್ತಿರುವವರ ಪಟ್ಟಿ ನೋಡಿ ಸಂತೋಷವಾಗಿದೆ. ಈ ಹಾರ ಬಹಳ ಭಾರ. ಸನ್ಮಾನ ಮಾಡಿಸಿಕೊಂಡ ನಂತರ ಜವಾಬ್ದಾರಿ ಹೆಚ್ಚುತ್ತದೆ. ಈ ಜವಾಬ್ದಾರಿ ಭಾರ ಹೊತ್ತು ಸಮಾಜಕ್ಕೆ ಮತ್ತಷ್ಟು ಸೇವೆ ಮಾಡಲಿ ಎಂದು ಶುಭಕೋರುತ್ತೇನೆ. ನಿಮ್ಮೆಲ್ಲರಿಗೂ ಒಳ್ಳೆಯದಾಗಲಿ” ಎಂದು ತಿಳಿಸಿದರು.

Tags: aishwarya shivakumarBangalorecongressDK Shiva KumarKarnatakamahathma gandhijiMedia schoolneharuPress clubRahul Gandhisiddaramaiah
Previous Post

ಇಂಚಗೇರಿ ಮಠಕ್ಕೆ ಹಿರಿಯ ನಟ ದೊಡ್ಡಣ್ಣ ಭೇಟಿ

Next Post

“ಕೇಳೋ ಮಚ್ಚಾ” : ಎರಡನೇ ಹಾಡನ್ನು ಘೋಷಿಸಿದ “ಜಸ್ಟ್ ಮ್ಯಾರೀಡ್” ತಂಡ

Related Posts

“ಚಿನ್ನಸ್ವಾಮಿ”ಯಲ್ಲಿ ಕ್ರಿಕೆಟ್.. ಸಂಪುಟ ಸಭೆಯಲ್ಲಿಂದು ತೀರ್ಮಾನ
ಇದೀಗ

“ಚಿನ್ನಸ್ವಾಮಿ”ಯಲ್ಲಿ ಕ್ರಿಕೆಟ್.. ಸಂಪುಟ ಸಭೆಯಲ್ಲಿಂದು ತೀರ್ಮಾನ

by ಪ್ರತಿಧ್ವನಿ
December 11, 2025
0

ಬೆಳಗಾವಿ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳಿಗೆ ಅನುಮತಿ ನೀಡುವ ಬಗ್ಗೆ ಇಂದು ನಡೆಯುವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. RCB ದುರಂತದ ನಂತರ ಚಿನ್ನಸ್ವಾಮಿ...

Read moreDetails
Daily Horoscope: ಇಂದು ವ್ಯಾಪಾರದಲ್ಲಿ ಲಾಭಗಳಿಸುವ ರಾಶಿಗಳಿವು..!

Daily Horoscope: ಇಂದು ವ್ಯಾಪಾರದಲ್ಲಿ ಲಾಭಗಳಿಸುವ ರಾಶಿಗಳಿವು..!

December 11, 2025
ಕೊನೆಗೂ ಭಡ್ತಿ.. ಕಾರಾಗೃಹ ಇಲಾಖೆಗೆ ಅಲೋಕ್ ಕುಮಾರ್ ಡಿಜಿಪಿ

ಕೊನೆಗೂ ಭಡ್ತಿ.. ಕಾರಾಗೃಹ ಇಲಾಖೆಗೆ ಅಲೋಕ್ ಕುಮಾರ್ ಡಿಜಿಪಿ

December 10, 2025
Winter Session 2025: ಸರ್ಕಾರ ಯುವಜನರ ಆಶಯಕ್ಕೆ ಮಣ್ಣೆರಚುವ ಕೆಲಸ ಮಾಡುತ್ತಿದೆ- ಬಿ.ವೈ ವಿಜಯೇಂದ್ರ

Winter Session 2025: ಸರ್ಕಾರ ಯುವಜನರ ಆಶಯಕ್ಕೆ ಮಣ್ಣೆರಚುವ ಕೆಲಸ ಮಾಡುತ್ತಿದೆ- ಬಿ.ವೈ ವಿಜಯೇಂದ್ರ

December 10, 2025
ಕೊಲೆ ಆರೋಪಿ ನಟ ದರ್ಶನ್ ಗೆ ಟಿವಿ ಭಾಗ್ಯ

ಕೊಲೆ ಆರೋಪಿ ನಟ ದರ್ಶನ್ ಗೆ ಟಿವಿ ಭಾಗ್ಯ

December 10, 2025
Next Post

"ಕೇಳೋ ಮಚ್ಚಾ" : ಎರಡನೇ ಹಾಡನ್ನು ಘೋಷಿಸಿದ "ಜಸ್ಟ್ ಮ್ಯಾರೀಡ್" ತಂಡ

Recent News

Daily Horoscope: ಇಂದು ವ್ಯಾಪಾರದಲ್ಲಿ ಲಾಭಗಳಿಸುವ ರಾಶಿಗಳಿವು..!
Top Story

Daily Horoscope: ಇಂದು ವ್ಯಾಪಾರದಲ್ಲಿ ಲಾಭಗಳಿಸುವ ರಾಶಿಗಳಿವು..!

by ಪ್ರತಿಧ್ವನಿ
December 11, 2025
Winter Session 2025: ಸರ್ಕಾರ ಯುವಜನರ ಆಶಯಕ್ಕೆ ಮಣ್ಣೆರಚುವ ಕೆಲಸ ಮಾಡುತ್ತಿದೆ- ಬಿ.ವೈ ವಿಜಯೇಂದ್ರ
Top Story

Winter Session 2025: ಸರ್ಕಾರ ಯುವಜನರ ಆಶಯಕ್ಕೆ ಮಣ್ಣೆರಚುವ ಕೆಲಸ ಮಾಡುತ್ತಿದೆ- ಬಿ.ವೈ ವಿಜಯೇಂದ್ರ

by ಪ್ರತಿಧ್ವನಿ
December 10, 2025
ಚಿತ್ರೀಕರಣ ಮುಗಿಸಿದ ʼಮಹಾಕವಿʼ: ವಿಭಿನ್ನ ಪಾತ್ರದಲ್ಲಿ ಕಿಶೋರ್‌, ಅನುಷಾ ರೈ
Top Story

ಚಿತ್ರೀಕರಣ ಮುಗಿಸಿದ ʼಮಹಾಕವಿʼ: ವಿಭಿನ್ನ ಪಾತ್ರದಲ್ಲಿ ಕಿಶೋರ್‌, ಅನುಷಾ ರೈ

by ಪ್ರತಿಧ್ವನಿ
December 10, 2025
ಸೆರೆಮನೆಯಲ್ಲಿದ್ರೂ ದರ್ಶನ್‌ ಹೆಸರು ಹಾಳು ಮಾಡಲು ನಡೆಯಿತಾ ಹುನ್ನಾರ..?
Top Story

ಸೆರೆಮನೆಯಲ್ಲಿದ್ರೂ ದರ್ಶನ್‌ ಹೆಸರು ಹಾಳು ಮಾಡಲು ನಡೆಯಿತಾ ಹುನ್ನಾರ..?

by ಪ್ರತಿಧ್ವನಿ
December 10, 2025
Winter Session 2025: ʼರೈತರಿಗೆ ಬೆಳೆ ವಿಮೆ ಪರಿಹಾರ ವಿತರಿಸುವಲ್ಲಿ ಇತಿಹಾಸ ನಿರ್ಮಿಸಿದ ರಾಜ್ಯ ಸರ್ಕಾರʼ
Top Story

Winter Session 2025: ʼರೈತರಿಗೆ ಬೆಳೆ ವಿಮೆ ಪರಿಹಾರ ವಿತರಿಸುವಲ್ಲಿ ಇತಿಹಾಸ ನಿರ್ಮಿಸಿದ ರಾಜ್ಯ ಸರ್ಕಾರʼ

by ಪ್ರತಿಧ್ವನಿ
December 10, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

“ಚಿನ್ನಸ್ವಾಮಿ”ಯಲ್ಲಿ ಕ್ರಿಕೆಟ್.. ಸಂಪುಟ ಸಭೆಯಲ್ಲಿಂದು ತೀರ್ಮಾನ

“ಚಿನ್ನಸ್ವಾಮಿ”ಯಲ್ಲಿ ಕ್ರಿಕೆಟ್.. ಸಂಪುಟ ಸಭೆಯಲ್ಲಿಂದು ತೀರ್ಮಾನ

December 11, 2025
Daily Horoscope: ಇಂದು ವ್ಯಾಪಾರದಲ್ಲಿ ಲಾಭಗಳಿಸುವ ರಾಶಿಗಳಿವು..!

Daily Horoscope: ಇಂದು ವ್ಯಾಪಾರದಲ್ಲಿ ಲಾಭಗಳಿಸುವ ರಾಶಿಗಳಿವು..!

December 11, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada