ಅಂದವಾಗಿ ಕಾಣಬೇಕು ಎಂದು ಬಯಸುವವರು ತ್ವಚೆಯ ಆರೈಕೆ ಬಗ್ಗೆ ಹೆಚ್ಚು ಗಮನವನ್ನು ವಹಿಸಬೇಕು.ಮುಖದ ಮೇಲೆ ಚಿಕ್ಕ ಕಲೆಗಳಾದರೂ ಬೇಸರವಾಗುತ್ತದೆ , ನಮ್ಮ ತ್ವಜೆಯ ಹೊಳಪು ಹೆಚ್ಚಾಗಬೇಕು,ಸುಕ್ಕುಗಟ್ಟುವುದನ್ನು ತಡಿಬೇಕು ಪೋರ್ಸ್ ಇಂದ ಮುಕ್ತಿಬೇಕು ಹೀಗೆ ಒಂದಲ್ಲ ಎರಡಲ್ಲ ಸಾಕಷ್ಟು ವಿಚಾರದ ಬಗ್ಗೆ ಯೋಚಿಸಬೇಕು.ಹಾಗೂ ಇತ್ತೀಚಿನ ಬ್ಯುಸಿ ಲೈಫ್ ಅಲ್ಲಿ ನಮ್ಮ ತ್ವಚೆಯ ಬಗ್ಗೆ ಕಾಳಜಿ ವಹಿಸಲು ಸಮಯ ಸಿಗದಂತಾಗಿದೆ. ಆದರೆ ಎಷ್ಟೇ ಬ್ಯುಸಿ ಇದ್ರು ಫ್ರೀ ಮಾಡಿಕೊಂಡ ಸ್ಕಿನ್ ಕೇರ್ ಮಾಡುವುದು ತುಂಬ ಇಂಪಾರ್ಟೆಂಟ್..ಹಾಗಾಗಿ ವಾರಕ್ಕೆ ಒಮ್ಮೆ ಆದ್ರು ಈ ಫೇಸ್ ಪ್ಯಾಕ್ ಬಳಸಿ.

ಸಕ್ಕರೆ ಮತ್ತು ಆಲಿವ್ ಆಯಿಲ್
ಒಂದು ಟೇಬಲ್ ಸ್ಪೂನ್ ಅಷ್ಟು ಸಕ್ಕರೆಗೆ ಎರಡರಿಂದ ಮೂರು ಟೇಬಲ್ ಸ್ಪೂನ್ ಅಷ್ಟು ಆಲಿವ್ ಆಯಿಲ್ ಅನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ಕೆಲ ನಿಮಿಷಗಳ ಕಾಲ ಹಾಗೆ ಬಿಡಿ. ನಂತರ ಆ ಮಿಶ್ರಣವನ್ನು ಮುಖಕ್ಕೆ ಅಪ್ಲೈ ಮಾಡಿ ಅರ್ಧ ಗಂಟೆ ಬಿಟ್ಟು ಚೆನ್ನಾಗಿ ಸ್ಕ್ರಬ್ ಮಾಡಿ ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯಿರಿ. ಹೀಗೆ ವಾರಕ್ಕೊಮ್ಮೆ ಮಾಡುವುದರಿಂದ ಮುಖದ ಹೊಳಪು ಹೆಚ್ಚಾಗುತ್ತದೆ ಹಾಗೂ ಡೆಡ್ ಸ್ಕಿನ್ ರಿಮೂವ್ವಾಗುತ್ತದೆ.

ವೋಟ್ ಮಿಲ್ ಮತ್ತು ಜೇನುತುಪ್ಪ
ಒಂದು ಟೇಬಲ್ ಸ್ಪೂನ್ ಅಷ್ಟು ವೋಟ್ ಮಿಲ್ ಗೆ ಎರಡು ಟೇಬಲ್ ಸ್ಪೂನ್ ನಷ್ಟು ಜೇನುತುಪ್ಪ, ಹಾಗೂ ಒಂದು ಟೇಬಲ್ ಸ್ಪೂನ್ ಅಷ್ಟು ಮೊಸರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಆ ಪೇಸ್ಟ್ ನ ಮುಖಕ್ಕೆ ಹಚ್ಚಿ 20 ನಿಮಿಷಗಳ ಕಾಲ ಹಾಗೆ ಬಿಟ್ಟು ಸ್ಕ್ರಬ್ ಮಾಡಿ ರಿಮೂವ್ ಮಾಡಿ.

ಮೊಸರು ಮತ್ತು ಅರಿಶಿನ
ಅರ್ಧ ಟೇಬಲ್ ಸ್ಪೂನ್ ಅಷ್ಟು ಅರಿಶಿನಕ್ಕೆ ಒಂದು ಅಥವಾ ಎರಡು ಟೀ ಸ್ಪೂನ್ ನಷ್ಟು ಮೊಸರನ್ನ ಹಾಕಿ ಚೆನ್ನಾಗಿ ಮಿಶ್ರಣವನ್ನ ತಯಾರಿಸಿ, ನಂತರ ಅದನ್ನು ಮುಖಕ್ಕೆ ಹಚ್ಚಿ ಅರ್ಧ ಗಂಟೆಗಳ ಕಾಲ ಹಾಗೆ ಬಿಟ್ಟು ತೊಳಿಯುವುದರಿಂದ ಮುಖದ ಹೊಳಪು ಹೆಚ್ಚಾಗುತ್ತದೆ. ಮೊಡವೆ ಕಲೆಗಳು ನಿವಾರಣೆಯಾಗುತ್ತದೆ.

ಬಾಳೆಹಣ್ಣು ಮತ್ತು ಜೇನುತುಪ್ಪ
ಒಂದು ಬಾಳೆಹಣ್ಣನ್ನ ಚಿಕ್ಕ ತುಂಡಾಗಿ ಕತ್ತರಿಸಿ, ಅದಕ್ಕೆ ಒಂದು ಟೇಬಲ್ ಸ್ಪೂನ್ ಅಷ್ಟು ಜೇನುತುಪ್ಪ ಹಾಗೂ ಒಂದು ಟೇಬಲ್ ಸ್ಪೂನ್ ಅಷ್ಟು ಮೊಸರನ್ನ ಹಾಕಿ ಚೆನ್ನಾಗಿ ಮಿಶ್ರಣವನ್ನು ಮಾಡಿಕೊಳ್ಳಿ.ನಂತರ ಆ ಮಿಶ್ರಣವನ್ನ ತ್ವಚೆಗೆ ಹಚ್ಚಿ ಕೆಲ ನಿಮಿಷಗಳ ಕಾಲ ಹಾಗೆ ಬಿಟ್ಟು ಮುಖವನ್ನು ತೊಳೆಯುವುದರಿಂದ ಅಂದ ಹೆಚ್ಚಾಗುತ್ತದೆ.

ಒಟ್ಟಾರೆಯಾಗಿ ವಾರಕ್ಕೊಮ್ಮೆ ಆದ್ರೂ ಯಾವುದಾದರೂ ಒಂದು ಫೇಸ್ ಪ್ಯಾಕ್ ಅನ್ನ ಬಳಸುವುದರಿಂದ ತ್ವಚೆಯ ಆರೋಗ್ಯ ಅದ್ಭುತವಾಗಿರುತ್ತದೆ, ಕಲೆಗಳು ನಿವಾರಣೆಯಾಗುತ್ತದೆ ,ಸುಕ್ಕುಗಳು ಕಡಿಮೆಯಾಗುತ್ತದೆ , ತಪ್ಪದೆ ಟ್ರೈ ಮಾಡಿ.











