ಅತಿ ಹೆಚ್ಚು ಫೋನ್ ಹಾಗೂ ಲ್ಯಾಪ್ ಟಾಪ್ ಬಳಕೆಯಿಂದಾ ಕಣ್ಣುಗಳಿಗೆ ಸ್ಟ್ರೆಸ್ ಆಗುತ್ತದೆ.. ಇದರಿಂದಾಗಿ ಕಣ್ಣುಗಳು ಕೆಂಪಾಗುವುದು, ನೀರು ಬರುವುದು,ಹಾಗೂ ಕಣ್ಣಿನ ತುರಿಕೆ ಸಮಸ್ಯೆ ಕೂಡಾ ಎದುರಾಗುತ್ತದೆ..ಮಾತ್ರವಲ್ಲದೆ ಹೆಚ್ಚು ಟ್ರಾವಲ್ ಮಾಡಿದಾಗ,ನಿದ್ದೆ ಸರಿಯಾಗದೆಯಿದ್ದಾಗ ಇಂತಹ ತೊಂದರೆಗಳು ಹೆಚ್ಚು.. ಇದು ದೊಡ್ಡವರಿಗೆ ಮಾತ್ರವಲ್ಲ ಚಿಕ್ಕವರಿಗು ಆಗುತ್ತದೆ..ಈ ರೀತಿ ಟೈಮ್‌ನಲ್ಲಿ ಈ ಸಿಂಪಲ್ ಹ್ಯಾಕ್ ಬಳಸಿ ಕಣ್ಣುಗಳ ಸಮಸ್ಯಯನ್ನು ಹೋಗಲಾಡಿಸಿ.

ಸೌತೆಕಾಯಿ
ಇದು ಕಣ್ಣುಗಳ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು.. ನಮ್ಮ ಕಣ್ಣುಗಳು ಡ್ರೈ ಆದಾಗ ಹೈಡ್ರೇಟ್ ಮಾಡುತ್ತದೆ.. ಹಾಗೂ ಶುಷ್ಕತೆ ಮತ್ತು ಕೆಂಪು ಬಣ್ಣವನ್ನು ಕಡಿಮೆ ಮಾಡುತ್ತದೆ.ಕಣ್ಣುಗಳು ಟಯರ್ಡ್ ಆದಾಗ ಸೌತೆಕಾಯಿ ಉತ್ತಮ ಮದ್ದು.. ಮಾತ್ರವಲ್ಲದೆ ಕಣ್ಣಿ ಸುತ್ತ ಆಗಿರುವಂತಹ ಕಪ್ಪು ಕಲೆಗಳನ್ನು ನಿವಾರಣೆ ಮಾಡುತ್ತದೆ.. ಮತ್ತು ಪಫ್ಫಿನೆಸ್‌ನ ಕಡಿಮೆ ಮಾಡುತ್ತದೆ.. ಹಾಗಾಗಿ ವಾರದಲ್ಲಿ ಎರಡರಿಂದ ಮೂರು ಭಾರಿ ಕಣ್ಣಿನ ಮೇಲೇ ಸೌತೆ ಕಾಯಿ ಹೋಳನ್ನ ಇಡುವುದರಿಂದ ಎಲ್ಲಾ ತೊಂದರೆಗಳನ್ನು ನಿವಾರಿಸಿಕೊಳ್ಳಬಹುದು̤̤

ಅಲೋವೆರ
ಅಲೋವೆರ ಕಣ್ಣಿನ ಸಮಸ್ಯೆಗಳನ್ನು ದೂರಾ ಮಾಡುವುದಕ್ಕೆ ತುಂಬಾನೆ ಸಹಾಯಕಾರಿ. ಅಲೋವೆರಾ ಕಣ್ಣಿನ ಉರಿಯೂತ ಕಡಿಮೆ ಮಾಡುವ ಗುಣಗಳನ್ನು ಹೊಂದಿದೆ. ಇದರಿಂದ ಕಣ್ಣುಗಳು ಡ್ರೈನೆಸ್ ಹಾಗೂ ತುರಿಕೆ ಕೂಡಾ ನಿವಾರಣೆಯಾಗುತ್ತದೆ.. ಫ್ರೇಶ್ ಅಲೋವೆರದ ಸಿಪ್ಪೆ ತೆಗೆದು.. ಅದರ ಒಳಗಿರುವ ಜೆಲ್‌ನ ಕಣ್ಣುಗಳ ಮೇಲೆ ಇಡುವುದರಿಂದ ನಿಮ್ಮ ಕಣ್ಣುಗಳು ತಂಪಾಗುತ್ತದೆ.. ವಾರಕ್ಕೆ ಒಮ್ಮೆ ಹೀಗೆ ಮಾಡುವುದು ಉತ್ತಮ..

ಗ್ರೀನ್ ಟೀ ಬ್ಯಾಗ್
ಟೀ ಬ್ಯಾಗ್‌ನ್ನು ಬಿಸಿ ನೀರಿನಲ್ಲಿ ಅದ್ದಿ ಮತ್ತು ಸ್ವಲ್ಪ ಹೊತ್ತು ತಣ್ಣಗಾದ ನಂತರ ನಿಮ್ಮ ಕಣ್ಣುಗಳ ಮೇಲೆ ಟೀ ಬ್ಯಾಗ್‌ನ್ನು ಇರಿಸಿ.ಇದರಿಂದ ನಿಮ್ಮ ಕಣ್ಣುಗಳಿಗೆ ವಿಶ್ರಾಂತಿ ನೀಡುತ್ತದೆ, ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ, ಜೊತೆಗೆ ಪಫಿನೆಸ್ ಮತ್ತು ಡಾರ್ಕ್ ವಲಯಗಳ ನೋಟವನ್ನು ಕಡಿಮೆ ಮಾಡುತ್ತದೆ.ಹಾಗಾಗಿ ಗ್ರೀನ್ ಟೀ ಬ್ಯಾಗ್‌ಗಳು ಕಣ್ಣಿಗೆ ಹಿತವಾದ ಅನುಭವವನ್ನು ನೀಡುತ್ತದೆ.
