ಮಳೆಗಾಲ ಬಂತು ಅಂದ್ರೆ ಒಂದಲ್ಲ ಎರಡಲ್ಲ ಸಾಕಷ್ಟು ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಶೀತಾ, ಕೆಮ್ಮು ನೆಗಡಿಯನ್ನುವಂತದ್ದು ಮಳೆಗಾಲದಲ್ಲಿ ಕಾಮನ್. ಆದ್ರೆ ಇದೆಲ್ಲದರ ಜೊತೆಗೆ ಮತ್ತೊಂದು ತೊಂದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಎದುರಾಗುತ್ತಿದೆ. ಇದು ಯಾವುದಪ್ಪ ಅಂದ್ರೆ ಕಣ್ಣುಗಳಲ್ಲಿ ಇನ್ಫೆಕ್ಷನ್. ಬಿಸಿಲಿನಿಂದ ಇದ್ದಕ್ಕಿದ್ದಾಗೆ ವಾತಾವರಣ ಚೇಂಜ್ ಆದಾಗ ಟೆಂಪರೇಚರ್ ಹ್ಯುಮಿಡಿಟಿಯಲ್ಲೂ ಕೂಡ ಬದಲಾವಣೆ ಕಾಣುತ್ತದೆ. ಈ ಮಳೆಗಾಲದಲ್ಲಿ ಮುಖ್ಯವಾಗಿ ಕಾಡುವಂತ ಐ ಇನ್ಫೆಕ್ಷನ್ ಏನಪ್ಪ ಅಂದ್ರೆ.

- ಕಣ್ಣುಗಳು ಕಾರಣವಿಲ್ಲದೆ ಕೆಂಪಾಗುವಂತದ್ದು ಅದು ಕೂಡ ಮಳೆಗಾಲದಲ್ಲಿ ಹೆಚ್ಚಾಗಿ ಇದಕ್ಕೆ ಪ್ರಮುಖ ಕಾರಣ ಬ್ಯಾಕ್ಟೀರಿಯಾ ಮತ್ತು ವೈರಸ್ ಗಳು.
- ಕೆಲವೊಬ್ಬರಿಗೆ ಕಣ್ಣು ಕೆಂಪಾಗುವುದು ಮಾತ್ರವಲ್ಲದೇ ವಿಪರೀತ ತುರಿಕೆ ಹಾಗೂ ಕಣ್ಣಿನಲ್ಲಿ ನೀರು ಸುರಿಯುವಂಥದ್ದು ಹೆಚ್ಚಾಗುತ್ತದೆ.
- ಕಣ್ಣುಗಳು ಡ್ರೈ ಆಗುತ್ತವೆ ಹಾಗೂ ಹಾಗೂ ಬರ್ನಿಂಗ್ ಸೆನ್ಸೇಶನ್ ಶುರುವಾಗುತ್ತದೆ ಮತ್ತು ಬೆಳಕಿನಲ್ಲಿ ಕಣ್ಣನ್ನ ಬಿಡುವುದಕ್ಕೂ ಆಗುವುದಿಲ್ಲ.
- ಇನ್ನು ಹೆಚ್ಚು ಜನಕ್ಕೆ ಕಾಡುವಂತಹ ಸಮಸ್ಯೆ ಅಂತ ಹೇಳಿದ್ರೆ ಕಣ್ಣಿನ ರೆಪ್ಪೆಯ ಬಳಿ ಸ್ವೇಲ್ ಆಗುತ್ತದೆ. ಹಾಗೂ ಕಣ್ಣಿನ ಅಕ್ಕಪಕ್ಕ ಜಿಗುಟಾದ ಕಿವು ಸೋರುವಿಕೆ ರೆಪ್ಪೆಗೂದಲುಗಳೊಂದಿಗೆ ಅಂಟಿಕೊಂಡಿರುತ್ತವೆ. ಕಣ್ಣುಗಳನ್ನು ತಡೆಯಲು ಕಷ್ಟವಾಗುತ್ತದೆ.
ಹಾಗಾಗಿ ಮಳೆಗಾಲದಲ್ಲಿ ಹೆಚ್ಚಾಗಿ ನಾವು ಕಣ್ಣುಗಳ ಬಗ್ಗೆ ಕಾಳಜಿಯನ್ನ ವಹಿಸಬೇಕು ಕಣ್ಣುಗಳನ್ನ ಮುಟ್ಟುವ ಮುಂಚೆ ಕೈಗಳನ್ನ ತೊಳೆದುಕೊಳ್ಳಬೇಕು ಕಾರಣ ವೈರಸ್ ಗಳು ಬೇಗನೆ ಸ್ಪ್ರೆಡ್ ಆಗುತ್ತದೆ.

ಹೊರಗಡೆಯಿಂದ ಬಂದ ತಕ್ಷಣ ಕೈಕಾಲುಗಳನ್ನ ತೊಳೆದು ನಂತರ ಒಳಗಡೆ ಬರಬೇಕು. ಮಳೆಯಲಿ ನೆನೆದರೆ ತಕ್ಷಣ ಮನೆಗೆ ಬಂದು ಬಟ್ಟೆಯನ್ನು ಬದಲಾಯಿಸಿ ಒಣಗಿದ ಬಟ್ಟೆಯನ್ನು ಧರಿಸುವುದು ಉತ್ತಮ.