ಇಂಗ್ಲೆಂಡ್ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಹ್ಯಾರಿ ಬ್ರೂಕ್ ಇನ್ಮುಂದೆ IPL ನಲ್ಲಿ ಆಡುವಂತಿಲ್ಲ. ಹೌದು ಹ್ಯಾರಿ ಬ್ರೂಕ್ ಗೆ IPL ನಲ್ಲಿ ಭಾಗವಹಿಸದಂತೆ ನಿಷೇಧ ಹೇರಲಾಗಿದೆ.ಇದಕ್ಕೆ ಕಾರಣ ಕೊನೆಯ ಕ್ಷಣದಲ್ಲಿ ಐಪಿಎಲ್‌ನಿಂದ ಹ್ಯಾರಿ ಬ್ರೂಕ್ ಹಿಂದೆ ಸರಿಯುವ ಮೂಲಕ ಅಗ್ರಿಮೆಂಟ್ ಗೆ ವಿರುದ್ಧವಾಗಿ ನಡೆದುಕೊಂಡಿದ್ದು ಎನ್ನಲಾಗಿದೆ. ಹೀಗಾಗಿ ಬ್ರೂಕ್‌ಗೆ ನಿಷೇಧ ಹೇರಲಾಗಿದೆ.

ಈ ಬಾರಿಯ IPL ಹರಾಜಿನಲ್ಲಿ ಬರೋಬ್ಬರಿ 6.25 ಕೋಟಿ ನೀಡಿ ಡೆಲ್ಲಿ ಕ್ಯಾಪಿಟಲ್ಸ್ ಹ್ಯಾರಿ ಬ್ರೂಕ್‌ನ ಖರೀದಿಸಿತ್ತು. ಆದ್ರೆ, ಕಳೆದ ವಾರ ವೈಯಕ್ತಿಕ ಕಾರಣ ನೀಡಿ ಐಪಿಎಲ್‌ನಿಂದ ಹಿಂದೆ ಸರಿಯೋದಾಗಿ ಬ್ರೂಕ್ ತಿಳಿಸಿದ್ರು.
ಇದೀಗ ಹರಾಜಿನಲ್ಲಿ ಬಿಕರಿಯಾದ ನಂತರ ಹ್ಯಾರಿ ಬ್ರೂಕ್ ತಾವು IPL ನಲ್ಲಿ ಭಾಗಿಯಾಗಲು ಸಾಧ್ಯವಿಲ್ಲ ಎಂದು ಹೇಳಿರುವ ಕಾರಣಕ್ಕೆ ಅವರನ್ನು 2 ವರ್ಷ ಐಪಿಎಲ್ ನಲ್ಲಿ ಭಾಗವಹಿಸದಂತೆ ನಿಷೇಧ ಹೇರಲಾಗಿದೆ.