ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ವ್ಯಾಖ್ಯಾನಿಸಿರುವ ಪಂಚರಾಜ್ಯ ಚುನಾವಣೆ (5 State Election) ಫಲಿತಾಂಶ ಮಾರ್ಚ್ 10ರಂದು ಹೊರಬೀಳಲಿದೆ ಈ ಮಧ್ಯೆ ಸುದ್ದಿಯೊಂದು ಹೊರ ಬಂದಿದೆ.
ದೇಶದಲ್ಲಿ ಭಾರತೀಯ ಜನತಾ ಪಕ್ಷ (BJP) ತನ್ನ ಅಜೇಯ ಓಟ ಮುಂದುವರಿಸಲಿದೆ ಉತ್ತರ ಪ್ರದೇಶದಲ್ಲಿ (Uttar Pradesh) ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಅಖಿಲೇಶ್ ಯಾದವ್ (akhilesh yadav) ನೇತೃತ್ವದ ಮೈತ್ರಿ ಕೂಟವು ವಿರೋಧ ಪಕ್ಷದಲ್ಲಿ ಕೂರುವುದು ಪಕ್ಕಾ ಆಗಿದೆ. ವಿವಿಧ ಘೋಷಣೆಗಳ ಮೂಲಕ ಗಮನ ಸೆಳೆದಿದ್ದ ಕಾಂಗ್ರೆಸ್ ಮತ್ತೊಮ್ಮೆ ನೆಲ ಕಚ್ಚಲಿದೆ ಎಂದು ತಿಳಿದು ಬಂದಿದೆ. ಇನ್ನು ಎಲ್ಲರಿಗಿಂತ ತಾನು ಸ್ವಲ್ಪ ಡಿಫರೆಂಟ್ ಎಂದು ಜನರಿಗೆ ಹೇಳಲು ಹೊರಟ್ಟಿದ ಮಾಯಾವತಿ ನೇತೃತ್ವದ ಬಿಎಸ್ಪಿ ಇರುವ ಅಲ್ಪ ಸ್ವಲ್ಪ ಅಸ್ತಿತ್ವವನ್ನು ಕಳೆದುಕೊಳ್ಳಲಿದೆ ಎಂದು ಚುನಾವಣೋತ್ತರ ಸಮೀಕ್ಷೆ ಹೇಳುತ್ತಿದೆ.
ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸದೆ ಬಿಜೆಪಿ ಹೈ ಕಮಾಂಡ್ ತನ್ನದೇ ಆದ ದಾಳವನ್ನು ಉರುಳಿಸಿತ್ತು ಮತ್ತು ಫಲಿತಾಂಶದ ನಂತರ ಅಚ್ಚರಿಯ ಆಯ್ಕೆ ಎಂದೇ ಹೇಳಲಾಗಿದ ನಡೆ ಬಿಜೆಪಿ ಅನುಸರಿಸಿತ್ತು. ಗೋರಕ್ಪುರ್ ಕಾ ಮಹಾರಾಜ ಎಂದೇ ಕರೆಯಲ್ಪಡುತ್ತಿದ್ದ ಸಂಸದ ಯೋಗಿ ಆದಿತ್ಯನಾಥ್ರನ್ನು ಮುಖ್ಯಮಂತ್ರಿಯಾಗಿ ಘೋಷಿಸಿತ್ತು. ಯೋಗಿ ಆಡಳಿತದ ಬಗ್ಗೆ ಬಿಜೆಪಿ ನಾಯಕರು ಹಾಡಿ ಹೊಗಳಿದ್ದಾರೆ. ಆದರೆ, 2020ರ ನಂತರ ನಡೆದ ಕಹಿ ಘಟನೆಗಳಿಂದಾಗಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಪ್ರಖ್ಯಾತಿಗಿಂತ ಕುಖ್ಯಾತಿ ಪಡೆದಿದ್ದೇ ಹೆಚ್ಚು. ಕಳೆದ ಭಾರೀ ಗೆದ್ದು ಬೀಗಿದ 100 ಕ್ಷೇತ್ರಗಳಲ್ಲಿ ಬಿಜೆಪಿ ಈ ಭಾರೀ ನೆಲ ಕಚ್ಚಲಿದೆ ಎಂದು ತಿಳಿದು ಬಂದಿದೆ.
ಪಂಜಾಬ್ನಲ್ಲಿ ಕೈ ಹಿಡಿಯುವುದು ಅನುಮಾನ
ಇತ್ತ ಪಂಜಾಬ್ನಲ್ಲಿ ಕಾಂಗ್ರೆಸ್ (Punjab Congress) ತನ್ನ ಅಧಿಕಾರವನ್ನು ಉಳಿಸಿಕೊಳ್ಳುವ ವಿಶ್ವಾಸ ಇತ್ತು ಆದರೆ ಕೈ ಕಮಾಂಡ ಕಳೆದ ವರ್ಷ ಮಾಡಿದ ಒಂದು ದೊಡ್ಡ ಎಡವಟ್ಟಿನಿಂದಾಗಿ ಪಂಜಾಬಿನ ಜನತೆ ಕೈ ಹಿಡಿಯುವ ಬದಲು ಪೊರಕೆ ಹಿಡಿಯಲಿದ್ದಾರೆ ಎಂದು ಸಮೀಕ್ಷೆ ಹೇಳುತ್ತಿದೆ. ಕಳೆದ ಭಾರೀ ಜನತೆ ಬಿಜೆಪಿ ನೇತೃತ್ವದ ಮೈತ್ರಿ ಕೂಟವನ್ನು ತಿರಸ್ಕರಿಸಿ ಕಾಂಗ್ರೆಸ್ಗೆ ಪೂರ್ಣ ಪ್ರಮಾಣದ ಅಧಿಕಾರವನ್ನು ನೀಡಿದ್ದರು ಆದರೆ ಕಾಂಗ್ರೆಸ್ನ ಆಂತರಿಕ ತಿಕ್ಕಾಟ ಮತ್ತು ರಾಷ್ಟ್ರ ರಾಜಕಾರಣದ ಹುಚ್ಚು ದೊರೆ ಎಂದೇ ಖ್ಯಾತಿ ಪಡೆದಿರುವ ನವಜೋತ್ ಸಿಂಗ್ ಸಿಧು ಅವರ ಮಾತಿಗೆ ಮಣೆ ಹಾಕಿ ಕಾಂಗ್ರೆಸ್ ಹೈ ಕಮಾಂಡ್ ತನ್ನ ಹಳ್ಳವನ್ನೆ ತಾನೆ ತೋಡಿಕೊಂಡಿತ್ತು . ಆದರೆ ಈ ಭಾರಿ ಕಾಂಗ್ರೆಸ್ ಹಾಗೂ ಬಿಜೆಪಿ ಎಂಬ ಎರಡು ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಿರುವ ಜನತೆ ಈ ಭಾರಿ ಆಮ್ ಆದ್ಮಿಗೆ ಹೆಚ್ಚು ಪ್ರಾಶಸ್ತ್ಯ ನೀಡಲಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಪಂಜಾಬಿನ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ರನ್ನು ಕಾಂಗ್ರೆಸ್ನಿಂದ ಹೊರತರುವಲ್ಲಿ ಯಶಸ್ವಿಯಾಗಿದ್ದ ಬಿಜೆಪಿ ಹೈ ಕಮಾಂಡ್ ತನ್ನದೇ ಆದ ಮೈತ್ರಿಕೂಟವನ್ನು ರಚಿಸಿ ಕ್ಯಾಪ್ಟನ್ಗೆ ನೇತೃತ್ವ ವಹಿಸಿತ್ತು ಆದರೆ ಈ ಮೈತ್ರಿ ಕೂಟ ಜನರ ಮನ ಗೆಲುವಲ್ಲಿ ವಿಫಲವಾಗಿದೆ ಎನ್ನುವುದು ಚುನಾವಣೆಗೂ ಮುನ್ನ ಸ್ಪಷ್ಟವಾಗಿ ಗೋಚರಿಸಿದೆ.
ಇತ್ತ ಮಣಿಪುರದಲ್ಲಿ (Manipur) ಈ ಭಾರೀ ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಸಮಬಲದ ಪೈಪೋಟಿ ಇದೇ ಎಂದು ಸಮೀಕ್ಷೆ ಹೇಳುತ್ತಿದೆ. ಕಳೆದ ಭಾರೀ ಕಾಂಗ್ರೆಸ್ಗೆ ಬಹುಮತವಿದ್ಧರು ಕಡೇ ಕ್ಷಣದಲ್ಲಿ ಬಿಜೆಪಿ ಪಕ್ಷೇತರ ಹಾಗೂ ಪ್ರಾದೇಶಿಕ ಪಕ್ಷಗಳ ಜೊತೆಗೆ ಸಮತೋಲನ ಸಾಧಿಸಿ ಅಧಿಕಾರವನ್ನು ನಡೆಸಿತ್ತು. ಈ ಭಾರಿಯೂ ಅದೇ ರೀತಿ ಆದರೆ ಬಿಜೆಪಿ 2017ರಲ್ಲಿ ಪಾಲಿಸಿದ್ದ ತಂತ್ರವನ್ನೇ ಈ ಭಾರಿಯೂ ಅನುಸರಿಸುವುದು ಖಚಿತ.
ಗೋವಾದಲ್ಲಿ ಪರಿಸ್ಥಿತಿ ಬೇರೆಯದೇ ಇದೆ ಜನತೆ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ನೀಡುವುದು ಖಚಿತವಾಗಿಲ್ಲ. ಎರಡು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಎಎಪಿ ಹಾಗೂ ತೃಣಮೂಲ ಕಾಂಗ್ರೆಸ್ ಮತ್ತು ಸ್ಥಳೀಯ ಪ್ರಾದೇಶಿಕ ಪಕ್ಷಗಳು ತೊಡೆ ತಟ್ಟಿರುವುದರಿಂದ ಅಸ್ಪಷ್ಟ ಚಿತ್ರಣ ಮೂಡುವುದು ಸ್ಪಷ್ಟವಾಗಿದೆ. ಬಿಜೆಪಿಗೆ ಈ ಭಾರೀ ಲಾಭಕಿಂತ ನಷ್ಟವೇ ಹೆಚ್ಚು ಎಂದು ಹೇಳಲಾಗುತ್ತಿದೆ. ಮಾಜಿ ಸಿಎಂ ಮನೋಹರ್ ಪರಿಕ್ಕರ್ ಪುತ್ರ ಉತ್ಕಲ್ ಪರಿಕ್ಕರ್ಗೆ ಟಿಕೆಟ್ ನಿರಾಕರಿಸಿದ್ದು ಬಿಜೆಪಿಗೆ ಮುಳುವಾಗಲಿದೆ.
ಒಟ್ಟಿನಲ್ಲಿ ಮಾರ್ಚ್ 10ರಂದು ಹೊರಬೀಳುವ ಫಲಿತಾಂಶದ ಇಡೀ ರಾಷ್ಟ್ರದ ಕಣ್ಣು ನೆಟ್ಟಿರುವುದಂತು ನಿಜ. ಜನರು ಯಾರ ಮುಡಿಗೆ ಕಮಲ ಮುಡಿಸುತ್ತಾರೆ ಯಾರಿಗೆ ಆಶೀರ್ವದಿಸುತ್ತಾರೆ ಎಂಬುದು ಕಾದು ನೋಡಬೇಕಿದೆ.