ಬೆಂಗಳೂರು (Bengaluru): ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ (Womens Day) ಅಂಗವಾಗಿ ‘ದಿ ಜಡ್ಜ್‌ಮೆಂಟ್’ (The Judgment)ಚಿತ್ರತಂಡ ಮಹಿಳಾ ನಟರು ಮತ್ತು ತಂತ್ರಜ್ಞರನ್ನು ಒಳಗೊಂಡ ವಿಶೇಷ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ.
ಗುರುರಾಜ ಕುಲಕರ್ಣಿ (ನಾಡಗೌಡ) ಅವರ “ದಿ ಜಡ್ಜ್‌ಮೆಂಟ್” ತಂಡವು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಬಹಳ ವಿಶೇಷ ರೀತಿಯಲ್ಲಿ ಆಚರಿಸಿತು.
ಚಿತ್ರದ ಮಹಿಳಾ ನಟರು ತಮ್ಮ ಜೀವನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪ್ರಸ್ತಾಪಿಸಿದರು ಮತ್ತು ಪ್ರಪಂಚವು ಅದನ್ನು ಹೇಗೆ ತೊಡೆದು ಹಾಕಬೇಕೆಂದು ಅವರು ಬಯಸುತ್ತಾರೆ ಎಂದು ಮಾತನಾಡಿದರು.
ಲಕ್ಷ್ಮೀ ಗೋಪಾಲಸ್ವಾಮಿ (Laxmi Gopalswamy), ಮೇಘನಾ ಗಾಂವ್ಕರ್ (Meghana Gaonkar), ಧನ್ಯ ರಾಮ್‌ಕುಮಾರ್ (Dhanya Ramkumar), ಸೀತಾ ಕೋಟೆ (Seetha Kote), ರೇಖಾ ಕೂಡ್ಲಿಗಿ (Rehka Kudligi) ಮತ್ತು ರೂಪ ರಾಯಪ್ಪ (Roopa Rayappa) ಅವರು ಪ್ರತಿ ಸಮಸ್ಯೆಗೂ ಪರಿಹಾರ ಕಂಡುಕೊಳ್ಳುವ ಆಶಯವನ್ನು ವ್ಯಕ್ತಪಡಿಸಿದರು.
#karnataka #bengaluru #sandalwood #movie #womensday #Exclusiveposter #posterrelease