ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶ ಹಲವು ಅಚ್ಚರಿಯ ಸಂಗತಿಗಳಿಗೆ ಕಾರಣವಾಗಿದೆ. ಆ ಪೈಕಿ ರಾಹುಲ್ ಗಾಂಧಿ (rahul gandhi) ಸ್ಪರ್ಧೆ ಮಾಡಿದ್ದ ಕ್ಷೇತ್ರಗಳು ನಿಜಕ್ಕೂ ಅಚ್ಚರಿ ಮೂಡಿಸಿದೆ. ಕಾರಣ ಸ್ಪರ್ಧೆ ಮಾಡಿದ ಎರಡೂ ಕ್ಷೇತ್ರದಲ್ಲೂ ಭರ್ಜರಿ ಗೆಲುವು ಸಾಧಿಸಿರೋದು.
ಹೌದು, ರಾಹುಲ್ ಗಾಂಧಿ ಈ ಬಾರಿ ರಾಯ್ ಬರೇಲಿ ಮತ್ತು ಕೇರಳದ ವಯನಾಡ್ ಎರಡು ಕ್ಷೇತ್ರಗಳಿಂದ ಸ್ಪರ್ಧೆ ಮಾಡಿದ್ದರು. ಇದಕ್ಕೆ ಕಾರಣ, ಯಾವುದಾದ್ರೂ ಒಂದು ಕ್ಷೇತ್ರದಲ್ಲಿ ಸೋಲು ಕಂಡರೂ ಮತ್ತೊಂದು ಕ್ಷೇತ್ರ ಕೈಹಿಡಿಯಲಿ ಎಂದು. ಆದ್ರೆ ಅಚ್ಚರಿಯೆಂಬಂತೆ ರಾಗ ಎರಡೂ ಕ್ಷೇತ್ರದಲ್ಲೂ ಗೆಲುವಿನ ನಗೆ ಬೀರಿದ್ದಾರೆ.
ಸೋನಿಯಾ ಗಾಂಧಿ (Sonia gandhi) ಪ್ರತಿನಿಧಿಸುತ್ತಿದ್ದ ರಾಯ್ ಬರೇಲಿ ಕ್ಷೇತ್ರವನ್ನು ಈ ಬಾರಿ ಪುತ್ರ ರಾಹುಲ್ ಗಾಂಧಿಗೆ ಬಿಟ್ಟುಕೊಟ್ಟಿದ್ದರು. ಮತ್ತೊಂದೆಡೆ ಕಳೆದ ಬಾರಿ ರಾಗ ಕೈಹಿಡಿದ್ದ ಕೇರಳದ (Kerala) ವಯನಾಡಿನಿಂದ ಕೂಡ ರಾಹುಲ್ ಸ್ಪರ್ಧೆ ಮಾಡಿದ್ದರು. ಆದ್ರೆ ಈ ಬಾರಿ ಮತದಾರ ಎರಡೂ ಕ್ಷೇತ್ರದಲ್ಲಿ ರಾಗಾ ಗೆ ಜೈ ಎಂದಿದ್ದಾನೆ. ಇದು ಕಾಂಗ್ರೆಸ್ (Congress) ಪಾಳಯಕ್ಕೆ ಉತ್ಸಾಹದ ಟಾನಿಕ್ ನೀಡಿದೆ.