ನಟ ದರ್ಶನ್ (Actor darshan) ತಮ್ಮನ್ನು INSTAGRAM ನಲ್ಲಿ ಅನ್‌ಫಾಲೋ ಮಾಡಿದಕ್ಕೆ ಮಾಜಿ ಸಂಸದೆ ಸುಮಲತಾ (Ex Mp Sumalatha) ಕೂಡ ಪರೋಕ್ಷವಾಗಿ ಟಾಂಗ್ ಕೊಟ್ಟಿರುವಂತಿದೆ. ಈ ಬಗ್ಗೆ ಇನ್‌ಸ್ಟಾದಲ್ಲಿ ಮಾರ್ಮಿಕವಾಗಿ ಸುಮಲತಾ ಅಂಬರೀಶ್ ಸ್ಟೋರಿ ಹಾಕಿದ್ದಾರೆ.

ಸುಮಲತಾ ಅಂಬರೀಶ್ ಪೋಸ್ಟ್ ಮಾಡಿಯುವ ಸ್ಟೋರಿಯಲ್ಲಿ ದರ್ಶನ್ ರನ್ನೇ ಮಾತಿನಲ್ಲಿ ತಿವಿದಂತೆ ಭಾಸವಾಗುತ್ತಿದೆ.ಸತ್ಯವನ್ನ ತಿರುಚುವ ಮತ್ತು ತಮ್ಮ ತಪ್ಪಿನ ಬಗ್ಗೆ ಯಾವುದೇ ಪಶ್ಚಾತಾಪವಿಲ್ಲದೇ ಇತರರನ್ನು ನೋಯಿಸುವ ಆರೋಪ ಹೊರಿಸಿ ತಮ್ಮನ್ನು ತಾವು ಹೀರೋ ಎಂದು ಪರಿಗಣಿಸುವ ಈ ರೀತಿಯ ನಟರಿಗೆ ಆಸ್ಕರ್ ಪ್ರಶಸ್ತಿ ಕೊಡಬೇಕು ಎಂದು ಪೋಸ್ಟ್ ಮಾಡಿ ಸುಮಲತಾ ಟಾಂಟ್ ಕೊಟ್ಟಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೇಸ್ ನಲ್ಲಿ ನಟ ದರ್ಶನ್ ಜೈಲು ಪಾಲಾಗಿ ಸಂಕಷ್ಟದಲ್ಲಿದ್ದಾಗ, ಸುಮಲತಾ ಅವರು ತಮ್ಮ ಪರವಾಗಿ ನಿಲ್ಲಲಿಲ್ಲ ಯರ್ಮ್ಬ ಕಾರಣದಿಂದ ದರ್ಶನ್ ಈ ರೀತಿ ಅವರನ್ನು ಅನ್ ಫಾಲೋ ಮಾಡಿದ್ದಾರೆ ಎಂಬ ವದಂತಿಯ ಮಧ್ಯೆ ಸುಮಲತಾ ಅವರ ಈ ಪೋಸ್ಟ್ ಅದನ್ನು ಇನ್ನಷ್ಟು ಪುಷ್ಟೀಕರಿಸುವಂತೆ ಭಾಸವಾಗುತ್ತಿದೆ.