ವಾಲ್ಮೀಕಿ ನಿಗಮದ ಅಭಿವೃದ್ಧಿ ಅವ್ಯವಹಾರ ಕೇಸ್ ಗೆ ಸಂಬಂಧಪಟ್ಟಂತೆ,ಇವತ್ತು ನಾಗೇಂದ್ರ ಇಡಿ ಕಸ್ಟಡಿ ಅಂತ್ಯವಾಗೋ ಹಿನ್ನಲೆ ಸೆಷನ್ ಕೋರ್ಟ್ ಗೆ ಆರೋಪಿಯನ್ನ ಅಧಿಕಾರಿಗಳು ಹಾಜರುಪಡಿಸಲಿದ್ದಾರೆ.
ಈಗಾಗ್ಲೇ ಅಧಿಕಾರಿಗಳು ಎರಡು ಬಾರಿ ಕಸ್ಟಡಿಗೆ ಪಡೆದು ನಾಗೇಂದ್ರ ತೀವ್ರ ವಿಚಾರಣೆ ನಡೆಸಿದ್ದಾರೆ. ಈ ಹಿಂದೆ ಗುರುವಾರ ಕೋರ್ಟ್ ಗೆ ಹಾಜರುಪಡಿಸಿ ಮತ್ತೆ ಐದು ದಿನ ಕಸ್ಟಡಿಗೆ ಪಡೆಯಲಾಗಿತ್ತು.ಅವ್ಯವಹಾರಕ್ಕೆ ಸಂಬಂಧಿಸಿದಂತೆ ದಾಖಲೆಗಳು ಸಿಕ್ಕಿದ್ದು, ವಿಚಾರಣೆ ಅಗತ್ಯತೆ ಬಗ್ಗೆ ಕೋರ್ಟ್ ಗೆ ಇಡಿ ಪರ ವಕೀಲ ಪ್ರಸನ್ನ ಕುಮಾರ್ ತಿಳಿಸಿದ್ದರು.
ಆರೋಪಿಯನ್ನು ಮತ್ತೆ ಕಸ್ಟಡಿಗೆ ನೀಡಬಾರದೆಂದು ನಾಗೇಂದ್ರ ಪರ ವಕಾಲತ್ತು ವಹಿಸಿದ್ದ ವಕೀಲ ಶ್ಯಾಮ್ ಸುಂದರ್ ವಾಡಕ್ ಮಂಡನೆ ಮಾಡಿದ್ದರು.ಮತ್ತೊಂದ್ಕಡೆ ಇವತ್ತು ಇಡಿ ಮುಂದೆ ಮತ್ತೆ ದದ್ದಲ್ ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ.