ಮಡಿಕೇರಿ : ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯ ನಾಯಕರ ನಡುವೆ ಆರೋಪ – ಪ್ರತ್ಯಾರೋಪಗಳು ಜೋರಾಗಿದೆ. ಹೇಗಾದರೂ ಮಾಡಿ ಮತದಾರರ ವಿಶ್ವಾಸ ಗಳಿಸಿಕೊಳ್ಳಬೇಕೆಂಬ ನಿಟ್ಟಿನಲ್ಲಿ ಜನ ನಾಯಕರು ಪರಸ್ಪರ ರಾಜಕೀಯ ಕೆಸರೆರೆಚಾಟದಲ್ಲಿ ತೊಡಗಿಗೊಂಡಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿಯನ್ನು ನರಹಂತಕ ಎಂದು ಜರಿದಿದ್ದರು. ಈ ವಿಚಾರವಾಗಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಸಿದ್ದರಾಮಯ್ಯರಿಗೆ ಎಚ್ಚರಿಕೆ ನೀಡಿದ್ದಾರೆ.

ಮಡಿಕೇರಿಯಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗಿಯಾಗಿ ಮಾತನಾಡಿದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ, ಇಡೀ ವಿಶ್ವವೇ ಪ್ರಧಾನಿ ನರೇಂದ್ರ ಮೋದಿಯನ್ನು ವಿಶ್ವ ನಾಯಕ ಎಂದು ಒಪ್ಪಿಕೊಂಡಿದೆ. ಇಂದು ಮುಸ್ಲಿಂ ರಾಷ್ಟ್ರಗಳು ಒಬ್ಬಂಟಿಯಾಗಿ ನಿಂತು ಇಡೀ ವಿಶ್ವವೇ ಭಾರತದ ಜೊತೆ ನಿಂತಿದೆ ಎಂದರೆ ಅದಕ್ಕೆ ನರೇಂದ್ರ ಮೋದಿಯ ಪ್ರಭಾವ ಕಾರಣ. ನರೇಂದ್ರ ಮೋದಿ ವಿಶ್ವ ಪರ್ಯಟನೆ ಮಾಡಿ ಎಲ್ಲಾ ದೇಶಗಳ ನಾಯಕರ ವಿಶ್ವಾಸವನ್ನು ಗಳಿಸಿಕೊಂಡಿದ್ದಾರೆ ಎಂದು ಹೇಳಿದರು.
ಇಂದು ಮುಸ್ಲಿಂ ರಾಷ್ಟ್ರಗಳೂ ಸಹ ಪ್ರಧಾನಿ ನರೇಂದ್ರ ಮೋದಿಗೆ ಗೌರವ ನೀಡುತ್ತಿವೆ. ಅಂತ್ರದಲ್ಲಿ ನಾನೇನು ಸಿದ್ದರಾಮಯ್ಯಗೆ ಅಯೋಗ್ಯ ಅಥವಾ ಯೋಗ್ಯತೆ ಇಲ್ಲದವನೇ ಎಂದು ಕರೆಯೋದಿಲ್ಲ. ಆದರೆ ಇನ್ನೊಮ್ಮೆ ಪ್ರಧಾನಿ ನರೇಂದ್ರ ಮೋದಿಗೆ ನರಹಂತಕ ಎಂದು ಕರೆದರೆ ನಿಮ್ಮ ನಾಲಿಗೆ ಸೀಳಿ ಬಿಡ್ತೀನಿ ಹುಷಾರ್ ಅಂತಾ ಎಚ್ಚರಿಕೆ ನೀಡಿದ್ದಾರೆ.